ಬ್ರೇಕ್ ಆಪ್ ಸುದ್ದಿಗಳಿಗೆ ಬ್ರೇಕ್ ಹಾಕಿದ ಅಭಿಷೇಕ್ ಬಚ್ಚನ್ಮ ಮತ್ತು ಐಶ್ವರ್ಯ ರೈ. ಕೊನೆಗೂ ಒಂದಾದರಾ ಜೋಡಿ?..

ಬಾಲಿವುಡ್ ನ ಮುದ್ದಾದ ಜೋಡಿಗಳಲ್ಲಿ ಒಂದು ಐಶ್ವರ್ಯಾ ರೈ (Aishwaarya Rai) ಮತ್ತು ಅಭಿಷೇಕ್ ಬಚ್ಚನ್ (Abhishek Bacchan). ಆದರೆ ಈ ಜೋಡಿಯ ವೈವಾಹಿಕ ಜೀವನದಲ್ಲಿ ಬಿ-ರುಕು ಮೂಡಿದೆ. ಕಳೆದ ಕೆಲವು ದಿನಗಳಿಂದ ಇಬ್ಬರೂ ಕೂಡ ಡೈ-ವೋರ್ಸ್ ಪಡೆದು ದೂರವಾಗಿದ್ದಾರೆ ಎನ್ನುವ ಸುದ್ದಿಯೊಂದು ಕೇಳಿ ಬರುತ್ತಿವೆ. ಸೋಶಿಯಲ್ ಮೀಡಿಯಾದಲ್ಲಿ ಈ ಸುದ್ದಿಯು ವೈರಲ್ ಆಗುತ್ತಿದ್ದಂತೆ ಒಂದರ ಹಿಂದೆ ಒಂದರಂತೆ ನಾನಾ ಸುದ್ದಿಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.

ಇದೀಗ ಐಶ್ವರ್ಯ ರೈ ಹಾಗೂ ಅಭಿಷೇಕ್ ಬಚ್ಚನ್ ವೈವಾಹಿಕ ಜೀವನಕ್ಕೆ ಸಂಬಂಧ ಪಟ್ಟ ಡೈ-ವೋರ್ಸ್ ಸುದ್ದಿಯೊಂದನ್ನು ತಳ್ಳಿ ಹಾಕಿದ್ದಾರೆ. ಅಂದಹಾಗೆ, ಐಶ್ವರ್ಯ ರೈ ಹಾಗೂ ಅಭಿಷೇಕ್ ಬಚ್ಚನ್ ಅವರ ಡೈ-ವೋರ್ಸ್ ವಿಚಾರವೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾದುತ್ತಿದ್ದಂತೆ ಐಶ್ವರ್ಯಾ ರೈ ತಮ್ಮ ಪತಿ ಅಭಿಷೇಕ್ ಬಚ್ಚನ್ ಮನೆ ತೊರೆದಿದ್ದಾರೆ ಎನ್ನಲಾಗಿತ್ತು. ಮುಂಚೆಯಿಂದಲೂ ಇವರಿಬ್ಬರ ವೈವಾಹಿಕ ಜೀವನದಲ್ಲಿ ಭಿನ್ನಾಭಿಪ್ರಾಯಗಳು ಇದ್ದವು.

ಆದರೆ ತಮ್ಮ ಮಗಳಿಗಾಗಿ ಇಷ್ಟು ವರ್ಷಗಳ ಕಾಲ ಇಬ್ಬರು ಜೊತೆಗಿದ್ದರು ಎನ್ನಲಾಗಿತ್ತು. ಕಳೆದ ಕೆಲ ವರ್ಷಗಳಿಂದ ಅತ್ತೆ ಜಯಾ ಬಚ್ಚನ್ (Jaya Bacchan) ಹಾಗೂ ನಟಿ ಐಶ್ವರ್ಯ ರೈಯವರು ಮಾತನಾಡುತ್ತಿಲ್ಲ ಎನ್ನಲಾಗಿತ್ತು. ಆದರೆ ಇದೀಗ ಈ ಎಲ್ಲಾ ಗಾಳಿ ಸುದ್ದಿಗಳಿಗೆ ತೆರೆ ಎಳೆಯುವ ಮೂಲಕ ನಟಿ ಐಶ್ವರ್ಯ ರೈಯವರು ತನ್ನ ಕುಟುಂಬದ ಜೊತೆಗೆ ಕಾಣಿಸಿಕೊಂಡಿದ್ದಾರೆ.

ಮುಂಬೈನ ಸರ್ದಾರ್ ವಲ್ಲಭಭಾಯಿ ಪಟೇಲ್ ಒಳಾಂಗಣ ಕ್ರೀಡಾಂಗಣ (Sardar Vallabhbhai Patel Indoor Stadium, Mumbai) ದಲ್ಲಿ ನಡೆದ ಪ್ರೊ ಕಬಡ್ಡಿ ಲೀಗ್‌ (Pro Kabaddi League) ನ ಯುಮುಂಬಾ ವರ್ಸಸ್ ಜೈಪುರ ಪಿಂಕ್ ಪ್ಯಾಂಥರ್ಸ್‌ ಪಂದ್ಯ (Yumumba vs Jaipur Pink Panthers Match) ದ ವೇಳೆ ಬಚ್ಚನ್‌ ಕುಟುಂಬದ ಸದಸ್ಯರು ಹಾಜರಿದ್ದರು.

ಅಭಿಷೇಕ್ ಬಚ್ಚನ್ ಅವರ ಕಬಡ್ಡಿ ತಂಡ ಜೈಪುರ ಪಿಂಕ್ ಪ್ಯಾಂಥರ್ಸ್‌ ಪಂದ್ಯ ವೀಕ್ಷಿಸಲು ಐಶ್ವರ್ಯ ರೈ, ಅಮಿತಾಭ್ ಬಚ್ಚನ್, ಆರಾಧ್ಯ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್ ಜೊತೆಯಾಗಿ ಬಂದಿದ್ದರು ಎನ್ನುವುದು ಸ್ಪಷ್ಟವಾಗಿದೆ. X ಹೆಸರಿನ ಟ್ವಿಟ್ಟರ್ ಖಾತೆ (Twitter Account) ಯಲ್ಲಿ ಸ್ಟಾರ್ ಸ್ಪೋರ್ಟ್ಸ್ (Star Sports) ಹಂಚಿಕೊಂಡಿರುವ ವೀಡಿಯೊದಲ್ಲಿ ನಟಿ ಐಶ್ವರ್ಯ ರೈ ತನ್ನ ಕುಟುಂಬದ ಜೊತೆಗೆ ಪಂದ್ಯ ವೀಕ್ಷಿಸುವುದನ್ನು ನೋಡಬಹುದು.

ತಮ್ಮದೇ ತಂಡ ಜೈಪುರ ಪಿಂಕ್‌ ಪ್ಯಾಂಥರ್ಸ್‌ ಪಾಯಿಂಟ್ ಗಳಿಸಿದ ಬಳಿಕ ನಟಿ ಐಶ್ವರ್ಯ ರೈ ತನ್ನ ಕುಟುಂಬದ ಜೊತೆಗೆ ಮೋಜು ಮಾಡುವ ಮೂಲಕ ತಂಡವನ್ನು ಪ್ರೋತ್ಸಾಹಿಸುವುದನ್ನು ನೋಡಬಹುದು. ಕೊನೆಗೂ ನಟಿ ಐಶ್ವರ್ಯ ರೈ ಹಾಗೂ ಅಭಿಷೇಕ್ ಬಚ್ಚನ್ ಅವರ ವೈವಾಹಿಕ ಜೀವನದ ಬಗ್ಗೆ ಹರಿದಾಡುತ್ತಿರುವ ಸುದ್ದಿಗಳಿಗೆ ಪೂರ್ಣ ವಿರಾಮ ವಿಟ್ಟಿದ್ದಾರೆ ಎನ್ನಬಹುದು.

Leave a Reply

Your email address will not be published. Required fields are marked *