ದೇವಸ್ಥಾನದಲ್ಲಿ ಮಕ್ಕಳ ಮುಡಿ ಕೊಟ್ಟ ಕೆಜಿಎಫ್ ಖ್ಯಾತಿಯ ಗರುಡ ರಾಮ್ ದಂಪತಿಗಳು, ಇಲ್ಲಿದೆ ನೋಡಿ ಕ್ಯೂಟ್ ಫ್ಯಾಮಿಲಿ ಫೋಟೋ

ಸಿನಿಮಾರಂಗದಲ್ಲಿ ಎಲ್ಲಾ ಪಾತ್ರಗಳಿಗೆ ಅದರದ್ದೇ ಆದ ವಿಶೇಷತೆಗಳಿವೆ. ಅದಲ್ಲದೇ, ಇತ್ತೀಚೆಗೆ ಸಿನಿಮಾದಲ್ಲಿ ವಿಲನ್ ಪಾತ್ರ (Vilan Roll) ಕ್ಕೆ ಎಲ್ಲಿಲ್ಲದ ಬೇಡಿಕೆಯಿದ್ದು, ಖಳ ನಟರ ಆಯ್ಕೆಗೆ ಹೆಚ್ಚು ಗಮನ ಕೊಡುತ್ತಿದೆ ಚಿತ್ರ ತಂಡ. ಹೌದು, ಸಿನಿಮಾದಲ್ಲಿ ನಾಯಕ ನಟರಷ್ಟೇ ಹುಡುಕಾಟ ವಿಲನ್ ಪಾತ್ರಕ್ಕೂ ನಡೆಯುತ್ತದೆ. ಸಿನಿಮಾರಂಗದಲ್ಲಿ ಖಳ ನಾಯಕ ಪಾತ್ರದ ಮೂಲಕ ಈಗಾಗಲೇ ಸಾಕಷ್ಟು ಕಲಾವಿದರು ಬದುಕನ್ನು ಕಟ್ಟಿಕೊಂಡಿದ್ದಾರೆ. ಅಂತಹವರ ಸಾಲಿಗೆ ಗರುಡ ರಾಮ್ (Garuda Ram) ಅಲಿಯಾಸ್ ರಾಮ ಚಂದ್ರ (Ramachandra) ಕೂಡ ಸೇರಿಕೊಳ್ಳುತ್ತಾರೆ.

ಒಂದೇ ಒಂದು ಸಿನಿಮಾ ಕೆಜಿಎಫ್ ಚಾಪ್ಟರ್ 1 (KGF Chapter 1) ರಲ್ಲಿ ನಟಿಸಿ ಬೇಡಿಕೆಯನ್ನು ಸೃಷ್ಟಿಸಿಕೊಂಡ ನಟ ಈ ರಾಮಚಂದ್ರ ಅಲಿಯಾಸ್ ಗರುಡ ರಾಮ್. ಇದೀಗ ನಟ ಗರುಡ ರಾಮ್ ಅವರ ಮುದ್ದಾದ ಫ್ಯಾಮಿಲಿ ಫೋಟೋವೊಂದು ವೈರಲ್ ಆಗುತ್ತಿದೆ. ಈ ಫೋಟೋದಲ್ಲಿ ನಟ ರಾಮಚಂದ್ರರವರು ಪತ್ನಿ ಹಾಗೂ ಮುದ್ದಿನಮಗ ಹಾಗೂ ಮಗಳ ಜೊತೆಗೆ ಕಾಣಿಸಿಕೊಂಡಿದ್ದಾರೆ.

ನಟ ರಾಮಚಂದ್ರ ದಂಪತಿಗಳು ದೇವಸ್ಥಾನ (Temple) ಕ್ಕೆ ತೆರಳಿ ಮಗಳ ಮುಡಿ ಕೊಟ್ಟಿದ್ದು, ದೇವಸ್ಥಾನ ಮುಂದೆ ಫೋಟೋ ಕ್ಲಿಕಿಸಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಫೋಟೋಗೆಗೆ ಆರುನೂರಕ್ಕೂ ಅಧಿಕ ಲೈಕ್ಸ್ ಬಂದಿದೆ. ಕೆಜಿಎಫ್ ಖ್ಯಾತಿಯ ಗರುಡ ರಾಮ್ ತನ್ನ ಮೊದಲ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಖಡಕ್ ಡೈಲಾಗ್ ಹಾಗೂ ಖಡಕ್ ಲುಕ್ ಮೂಲಕ ಎಲ್ಲರ ಗಮನ ಸೆಳೆದಿದ್ದರು.

ಎಲ್ಲರಿಗೂ ತಿಳಿದಿರುವಂತೆ ಕೆಜಿಎಫ್ (KGF) ಸಿನಿಮಾ ದೇಶ ಮಾತ್ರವಲ್ಲ ಅಂತರಾಷ್ಟ್ರೀಯ ಮಟ್ಟದಲ್ಲೂ ಎಲ್ಲರ ಗಮನ ಸೆಳೆಯಿತು. ನಿರ್ದೇಶಕ ಪ್ರಶಾಂತ್ ನೀಲ್ (Prashanth Neel) ಹಾಗೂ ರಾಕಿಂಗ್ ಸ್ಟಾರ್ ಯಶ್ (Rocking Star Yash) ಅವರಿಗೆ ಮಾತ್ರವಲ್ಲದೇ ಖಳ ನಟನಾಗಿ ಕಾಣಿಸಿಕೊಂಡ ಗರುಡ ಪಾತ್ರಧಾರಿ ರಾಮ ಚಂದ್ರರವರಿಗೆ ಈ ಸಿನಿಮಾದ ಬಳಿಕ ಬೇಡಿಕೆಯು ಕೂಡ ಡಬಲ್ ಆಯಿತು. ಪ್ರಾರಂಭದಲ್ಲಿ ನಟ ಕಾರ್ತಿ (Karthi) ಅಭಿನಯದ ಸುಲ್ತಾನ್ (Sulthan) ಸಿನಿಮಾದಲ್ಲಿ ಮೊಟ್ಟ ಮೊದಲು ಕಾಣಿಸಿಕೊಂಡರು ರಾಮಚಂದ್ರ ಅಲಿಯಾಸ್ ಗರುಡ ರಾಮ್.

ತದನಂತರದಲ್ಲಿ ಮಲಯಾಳಂ ನಟ ಮೋಹನ್ ಲಾಲ್ (Mohan Lal) ಅವರ ಜೊತೆಗೆ ಅರಟ್ಟು (Arattu) ಸಿನಿಮಾದಲ್ಲಿ ನಟಿಸಿದರು. ಹೀಗಿರುವಾಗ ಕೆಜಿಎಫ್ ಸಿನಿಮಾದಲ್ಲಿ ನಟ ರಾಮಚಂದ್ರರವರಿಗೆ ನಟಿಸುವ ಅವಕಾಶ ಸಿಕ್ಕಿದ್ದು, ತನ್ನ ನಟನೆಯಿಂದಲೇ ಮೋಡಿ ಮಾಡಿದರು. ಸದ್ಯಕ್ಕೆ ರಾಮಚಂದ್ರ ಅಲಿಯಾಸ್ ಗರುಡ ರಾಮ್ ಅವರಿಗೆ ತೆಲುಗು, ತಮಿಳು, ಮಲಯಾಳಂ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಪರಭಾಷೆಯ ನಿರ್ಮಾಪಕರು ಕೂಡ ನಟನ ಕಾಲ್ ಸೀಟ್ ಗಾಗಿ ಕಾಯುತ್ತಿದ್ದಾರೆ. ಸದ್ಯಕ್ಕೆ ನಟ ಗರುಡ ರಾಮ್ಆ ಅವರಿಗೆ ಆಫರ್ ಗಳು ಬರುತ್ತಲಿದೆ.

Leave a Reply

Your email address will not be published. Required fields are marked *