ಸ್ಯಾಂಡಲ್ ವುಡ್ ಮೈಕಲ್ ಜಾಕ್ಸನ್ ನಟ ವಿನೋದ್ ರಾಜ್ ಅವರ ತಿಂಗಳ ಆದಾಯ ಹಾಗೂ ಒಟ್ಟು ಆಸ್ತಿಯ ಮೌಲ್ಯವೆಷ್ಟು ಗೊತ್ತಾ?

ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ (Senior Actress Leelavati) ಯವರು ಸಿನಿಮಾರಂಗಕ್ಕೆ ನೀಡಿದ ಕೊಡುಗೆ ಅಪಾರವಾದದ್ದು. ಆರುನೂರಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ಹಿರಿಯ ನಟಿ ಲೀಲಾವತಿಯವರು ವ-ಯೋಸಹಜ ಖಾ-ಯಿಲೆಯಿಂದ ಬಳಲುತ್ತಿದ್ದಾರೆ. ಸದ್ಯಕ್ಕೆ ಮಗ ವಿನೋದ್ ರಾಜ್ (Vinod Raj) ಅವರೇ ತಾಯಿಯ ಆರೈಕೆ ಮಾಡುತ್ತಿದ್ದಾರೆ.

ಹೌದು, ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿ (Benglore Nelamangala Taluk) ನ ಸೋಲದೇವನಹಳ್ಳಿ (Soladevanahalli) ಯ ತೋಟದಲ್ಲಿ ಸಾಕಷ್ಟು ವರ್ಷಗಳಿಂದ ತಾಯಿ-ಮಗ ಕೃಷಿ ಮಾಡುತ್ತಾ ಜೀವನ ನಡೆಸುತ್ತಿದ್ದಾರೆ. ತಮ್ಮ ಜೀವನ ಸಾಗಿಸಲು ಸ್ವಲ್ಪ ಹಣವನ್ನು ಎತ್ತಿಟ್ಟುಕೊಂಡು, ಇನ್ನುಳಿದ ಹಣದಲ್ಲೂ ಸೋಲದೇವನಹಳ್ಳಿಯಲ್ಲಿ ಆಸ್ಪತ್ರೆ ಹಾಗೂ ಪಶು ಆಸ್ಪತ್ರೆಗಳನ್ನು ಕಟ್ಟಿಸಿ ಸಾರ್ವಜನಿಕ ಸೇವೆಯನ್ನು ಮಾಡುತ್ತಿರುವುದು ಅನೇಕರಿಗೆ ಮಾದರಿಯಾಗುವ ವಿಚಾರವಾಗಿದೆ.

ಆದರೆ ಕಳೆದ ಕೆಲವು ದಿನಗಳಿಂದ ಹಿರಿಯ ನಟಿ ಲೀಲಾವತಿಯವರ ಆ-ರೋಗ್ಯದಲ್ಲಿ ಏರುಪೇರಾಗಿದ್ದು ಹಾಸಿಗೆ ಹಿಡಿದಿದ್ದು, ಹಿರಿಯ ನಟಿಯನ್ನು ನೋಡಿ ಆರೋಗ್ಯ ವಿಚಾರಿಸಲು ಈಗಾಗಲೇ ಚಿತ್ರರಂಗದ ಅನೇಕ ಗಣ್ಯರು ವಿನೋದ್ ರಾಜ್ ಅವರ ನಿವಾಸಕ್ಕೆ ಭೇಟಿ ನೀಡುತ್ತಿದ್ದಾರೆ. ಈ ವೇಳೆಯಲ್ಲಿ ಲೀಲಾವತಿಯವರ ನೋಡಿ ಬಂದು ನಟ ವಿನೋದ್ ರಾಜ್ ಅವರಿಗೆ ಧೈರ್ಯ ತುಂಬುವ ಪ್ರಯತ್ನ ಮಾಡುತ್ತಿದ್ದಾರೆ.

ಖಾಸಗಿ ಮಾಧ್ಯಮವೊಂದು ಹಿರಿಯ ನಟಿ ಲೀಲಾವತಿಯವರ ಆರೋಗ್ಯವನ್ನು ವಿಚಾರಿಸಿ, ನಟ ವಿನೋದ್ ರಾಜ್ ಅವರನ್ನು ಸಂದರ್ಶನ ಮಾಡಿದ ವೇಳೆ ಯಲ್ಲಿ ಅವರ ಆದಾಯದ ಕುರಿತು ಸತ್ಯಹಾಲು ಹೊರ ಬಿದ್ದಿವೆ. ಸಂದರ್ಶನದ ವೇಳೆಯಲ್ಲಿ ಆಸ್ತಿಯ ಮೌಲ್ಯ ಹಾಗೂ ತಿಂಗಳಿಗೆ ಎಷ್ಟು ಆದಾಯ ಬರುತ್ತವೆ ಎನ್ನುವುದನ್ನು ನಟ ವಿನೋದ್ ರಾಜ್ ಬಹಿರಂಗ ಪಡಿಸಿದ್ದಾರೆ.

ಸಂದರ್ಶನದಲ್ಲಿ ಮಾತನಾಡಿದ ನಟ ವಿನೋದ್ ರಾಜ್ ಆವರು, ‘ಇಲ್ಲಿ ಒಟ್ಟು ಜಾಗ ಇರೋದು 7 ಎಕರೆ 16 ಗುಂಟೆ. ಈ ಜಾಗವನ್ನು ತೆಗೆದುಕೊಂಡಾಗ ಕೇವಲ ಒಂದೆರೆಡು ಹಲಸಿನ ಮರಗಳಿದ್ದವು ಅಷ್ಟೇ! ಇನ್ನೆಲ್ಲಾ ಮುಳ್ಳಿನ ಬೇಲಿಗಳ ಗಿಡವೇ ತುಂಬಿತ್ತು. ಇದನ್ನೆಲ್ಲಾ ಸ್ವಚ್ಚಗೊಳಿಸಲು ಹೋಗಿ ನನ್ನ ಮೂಗೇ ಕುಯ್ದು ಹೋಗಿತ್ತು. ಇದನ್ನು ಕ್ಲೀನ್​ ಮಾಡಲು ಹೋಗಿ ಬಹಳ ಅನುಭವಿಸಿದ್ದೇನೆ.

ಇಷ್ಟು ಚೆನ್ನಾಗಿ ಕಾಣಿಸುತ್ತಿದೆ ಅಂದ್ರೆ, ಅದಕ್ಕೆ ಅಷ್ಟು ಕಠೋರ ಶ್ರಮವಿದೆ. ಬೆಂಗಳೂರಿನ ಮೈಲಹಳ್ಳಿಯಲ್ಲಿ ನಮ್ಮ ತೋಟವಿದೆ. 20 ವರ್ಷದ ಹಿಂದೆ 21 ಲಕ್ಷಕ್ಕೆ ಜಮೀನು ಖರೀದಿ ಮಾಡಿದ್ವಿ, ಬೆಳೆದು ಒಳ್ಳೆ ವ್ಯಾಲ್ಯೂ ಬಂತು, ಕರೋನಾ ಸಮಯದಲ್ಲಿ ಉತ್ತಮ ವ್ಯಾಪಾರ ಕೂಡ ಮಾಡಿದೆವು. 103 ಸೈಟ್​ ವ್ಯಾಪಾರದಲ್ಲಿ 6-7.30 ಕೋಟಿ ರೂ. ಬಂತು’ ಎಂದು ಹೇಳಿಕೊಂಡಿದ್ದಾರೆ.

Leave a Reply

Your email address will not be published. Required fields are marked *