ಮೊದಲ ಬಾರಿಗೆ ಕಾಣಿಸಿಕೊಂಡ ವಿನೋದ್ ರಾಜ್ ಮಗ!! ಹಿರಿಯ ನಟಿ ಲೀಲಾವತಿಯ ಪಾರ್ಥಿವ ಶರೀರಕ್ಕೆ ವಿನೋದ್ ರಾಜ್ ಅವರ ಪುತ್ರ ಏನು ಮಾಡಿದ್ರು ಗೊತ್ತಾ? ವಿಡಿಯೋ ವೈರಲ್..

ಕನ್ನಡ ಸಿನಿಮಾರಂಗದ ಹಿರಿಯ ನಟಿ ಲೀಲಾವತಿಯವರು ವಯೋಸಹಜ ಖಾ-ಯಿಲೆಯಿಂದ ಡಿಸೆಂಬರ್ 8 ರಂದು ವಿ-ಧಿವಶರಾಗಿದ್ದಾರೆ. ಸದ್ಯಕ್ಕೆ ಹಿರಿಯ ನಟಿ ಲೀಲಾವತಿ ಪುತ್ರ ವಿನೋದ್ ರಾಜ್ ಅವರು ತಾಯಿಯ ನಿಧನದ ನೋವಿನಲ್ಲಿದ್ದು ತೀರಾ ಭಾವುಕರಾಗಿದ್ದಾರೆ.

ಇದೀಗ ಲೀಲಾವತಿಯವರ ಪಾ-ರ್ಥಿವ ಶ-ರೀರ ಅಂಬೇಡ್ಕರ್ ಕ್ರೀಡಾಂಗಣ (Ambedkar Stadium) ದಲ್ಲಿ ಇರಿಸಲಾಗಿದ್ದು 10:30ಕ್ಕೆ ಅವರ ಪಾರ್ಥಿವ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರ (Banglore Ravindra Kalakshetra) ಕ್ಕೆ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಏರ್ಪಡಿಸಲಾಗಿದೆ. ಸದ್ಯಕ್ಕೆ ವಿನೋದ್ ರಾಜ್ (Vinod Raj) ಅವರ ಪುತ್ರ, ಅಜ್ಜಿ ಲೀಲಾವತಿಯವರಿಗೆ ಅಂತಿಮವಾಗಿ ಪೂಜೆ ಸಲ್ಲಿಸಿದ್ದಾರೆ.

ಈ ವಿಡಿಯೋವೊಂದು ಸದ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ಸಾರ್ವಜನಿಕ ದರ್ಶನದ ಬಳಿಕ ಸಂಜೆಯ ವೇಳೆಗೆ ಸೋಲದೇವನಹಳ್ಳಿಯ ತೋಟದ ಮನೆ ಸಮೀಪ ಹಿರಿಯ ನಟಿ ಲೀಲಾವತಿ ಅವರ (Actress Leelavathi) ಅಂ-ತ್ಯ ಸಂಸ್ಕಾರ ನೆರವೇರಲಿದೆ.

ಕನ್ನಡ (Kannada), ತಮಿಳು (Tamil), ತೆಲುಗು (Telug) ಹಾಗೂ ಮಲಯಾಳಂ (Malayalam) ಭಾಷೆಗಳ ಸುಮಾರು 600 ಚಿತ್ರಗಳಲ್ಲಿ ನಟಿಸಿ ವೃತ್ತಿ ಜೀವನದಲ್ಲಿ ಸಾಧನೆ ಮಾಡಿದ್ದಾರೆ. ತಮ್ಮ ಸಾಧನೆಗೆ ಅತ್ತ್ಯುನ್ನತ ಪ್ರಶಸ್ತಿ ಡಾ. ರಾಜಕುಮಾರ್ ಪ್ರಶಸ್ತಿ ಹಾಗೂ ‘ತುಮಕೂರು ವಿಶ್ವವಿದ್ಯಾಲಯ’ದ ಗೌರವ ಡಾಕ್ಟರೇಟ್ ಪದವಿಯನ್ನು ಪಡೆದಿದ್ದಾರೆ.

ಕೆಲವು ವರ್ಷಗಳಿಂದ ವೃತ್ತಿ ಜೀವನದಿಂದ ದೂರವಿದ್ದ ಲೀಲಾವತಿ ಮಗ ವಿನೋದ್ ರಾಜ್ ಅವರ ಜೊತೆಗೆ ಸೋಲದೇವನಹಳ್ಳಿಯಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದರು. ಸಾಮಾಜಿಕ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದ ತಾಯಿ ಮಗ ಇಬ್ಬರೂ ಕೂಡ, ಸೋಲದೇವನಹಳ್ಳಿಯಲ್ಲಿ ಉಚಿತವಾಗಿ ಆರೋಗ್ಯ ಕೇಂದ್ರ ಹಾಗೂ ಪಶು ಆರೋಗ್ಯ ಕೇಂದ್ರವನ್ನು ಸ್ಥಾಪಿಸಿದ್ದರು.

ಆದರೆ ಇದೀಗ ಹಿರಿಯ ನಟಿ ಲೀಲಾವತಿಯವರು ಇಲ್ಲವಾಗಿದ್ದು, ತಾಯಿಯನ್ನು ಕಳೆದುಕೊಂಡು ವಿನೋದ್ ರಾಜ್ ಭಾವುಕರಾಗಿದ್ದಾರೆ. ತಾಯಿಯ ಬಗ್ಗೆ ಮಾತನಾಡಿದ್ದು, ‘ತಾಯಿಯನ್ನ ತುಂಬಾ ಚೆನ್ನಾಗಿ ನೋಡಿಕೊಳ್ಳಿ. ಅಮ್ಮನಿಲ್ಲದೆ ನಾವಿಲ್ಲ, ನಾವು ಎತ್ತರಕ್ಕೆ ಬೆಳೆದಾಗ ನಿನ್ನಿಲ್ಲದೆ ನಾನಿಲ್ಲ ಅಂತ ಯಾಕೆ ಹೇಳೋಕೆ ಆಗಲ್ಲ.

ತಾಯಿಯನ್ನ ಬಿಟ್ಟೋರು ಏಳಿಗೆ ಕಾಣಲ್ಲ, ಯಾವ ಸಮಾಜವೂ ಹತ್ರ ಸೇರಿಸಲ್ಲ. ಒಬ್ಬ ತಾಯಿ ಮಗುವನ್ನ ನೋಡಿಕೊಳ್ಳುತ್ತಾಳೆ. ನಂತರ ಅದೇ ಮಗು ತಾಯಿಯನ್ನ ನೋಡ್ಕೋಬೇಕು. ಯಾರು ತಾಯಿಯನ್ನ ಕೇವಲವಾಗಿ ನೋಡಬೇಡಿ. ಯಾರು ತಾಯಿಯನ್ನ ಆಶ್ರಮಗಳಿಗೆ ಸೇರಿಸಬೇಡಿ. ತಾಯಿಯೇ ದೇವರು, ತಾಯಿ ಬಿಟ್ರೆ ಜಗದಲ್ಲಿ ಏನಿಲ್ಲ’ ಎಂದಿದ್ದಾರೆ.

Leave a Reply

Your email address will not be published. Required fields are marked *