ನಟ ವಿಷ್ಣುವರ್ಧನ್ ಅವರ ಮೇಲೆ ಅಟ್ಯಾಕ್ ಆಗಿದ್ದರ ಬಗ್ಗೆ ರಿವೀಲ್ ಮಾಡಿದ ನಟ ವಿನೋದ್ ರಾಜ್, ಹೇಳಿದ್ದೇನು ಗೊತ್ತಾ? ಅಬ್ಬಾ ಹೀಗೂ ಆಗಿತ್ತಾ!!

ಕನ್ನಡ ಸಿನಿಮಾರಂಗದ ಹಿರಿಯ ನಟಿ ಲೀಲಾವತಿ (Leelavati) ಯವರು ಇದೀಗ ನೆನಪು ಮಾತ್ರ. ಡಿಸೆಂಬರ್ 8 ರಂದು ಇಹಲೋಕ ತ್ಯಜಿಸಿದ್ದ ಅವರನ್ನು ಡಿಸೆಂಬರ್ 09ರ ಶನಿವಾರ ನೆಲಮಂಗಲ (Nelamangal) ದ ಬಳಿಯ ಸೋಲದೇವನಹಳ್ಳಿ (Soladevanahalli) ಯ ತೋಟದಲ್ಲಿ ಅಂ-ತಿಮ ಸಂಸ್ಕಾರ ಮಾಡಲಾಗಿತ್ತು. ಈಗಾಗಲೇ ಹನ್ನೊಂದನೇ ಎಲ್ಲಾ ಕಾರ್ಯಗಳು ನೆರವೇರಿದ್ದು ವಿನೋದ್ ರಾಜ್ ಅವರು ತಾಯಿಯನ್ನು ಕಳೆದುಕೊಂಡು ತಬ್ಬಲಿಯಾಗಿದ್ದಾರೆ.

ಯಾವಾಗಲೂ ತಾಯಿಯ ಜೊತೆಗೆ ಇರುತ್ತಿದ್ದ ವಿನೋದ್ ರಾಜ್ (Vinod Raj) ಅವರ ಬಹುದೊಡ್ಡ ಧೈರ್ಯ, ಸ್ಫೂರ್ತಿ ತಾಯಿಯೇ ಆಗಿದ್ದರು. ಕಳೆದ ಒಂದೆರಡು ದಿನಗಳ ಹಿಂದೆಯಷ್ಟೇ ವಿನೋದ್ ರಾಜ್ ಅವರು ತಾಯಿಯ 11ನೇ ದಿನದ ಕಾರ್ಯ ನೆರವೇರಿಸಿ ಬಳಿಕ ಮಾತನಾಡಿದ್ದರು. ಈ ವೇಳೆಯಲ್ಲಿ ನಟ ವಿನೋದ್‌ ರಾಜ್, “ಜೀವನವೇ ಒಂದು ಭ್ರಮೆ ಅನ್ನಿಸ್ತಿದೆ. ಎಷ್ಟು ಧೈರ್ಯ ತುಂಬಿಕೊಂಡರೂ ದುಃಖದ ಕಟ್ಟೆ ಒಡೆದು ಹೋಗಿತ್ತೆ ಎಂದಿದ್ದರು.

ಅಷ್ಟೇ ಅಲ್ಲದೇ, ಈ ವೇಳೆಯಲ್ಲಿ ಅಮ್ಮನ ನೆನಪಲ್ಲಿ ವಿನೋದ್ ರಾಜ್ ಹಿಂದಿಯ ಹಾಡು ಹಾಡಿದ್ದರು.ಈ ಹಿಂದಿ ಹಾಡಿನ ಅರ್ಥ ಮಾಡ್ಕೊಂಡ್ರೆ ಎಲ್ಲಾ ಗೊತ್ತಾಗುತ್ತೆ. ಪ್ರೀತಿ ಮಾಡಿದೀವಿ ಕಳ್ಳತನ ಮಾಡಿಲ್ಲ ಅನ್ನೋ ಅರ್ಥದ ಹಾಡು ಇದಾಗಿತ್ತು.ನನಗೆ ತಿರತಿರುಗಿ ಕಣ್ಣೀರು ಬರ್ತಿದೆ. ಅವರ ಸ್ಥಾನವನ್ನು ಹೇಗೆ ತುಂಬೋದು ಅಂತ ಭಯ ಶುರುವಾಗಿದೆ. ಸಮಯಕ್ಕೆ ಸರಿಯಾಗಿ ಅವರ ತರ ಕೆಲಸ ಮಾಡೋದು ಕಷ್ಟ. ಅವರು ಇಡೀ ಜೀವನ ಕಳೆದಿದ್ದು ಇನ್ನೊಬ್ಬರನ್ನು ನೋಯಿಸಿದ್ದೀನಾ ಅನ್ನೋ ಚಿಂತೆಯಲ್ಲೇ.

ಬಹುಶಃ ಇವತ್ತು ಅದಕ್ಕೇ ಅವರಿಗೆ ಈ ಸ್ಥಾನ ಬಂದಿದೆ. ಕನ್ನಡ‌ ಸಿನಿರಂಗದ ಪರವಾಗಿ ನಾನು ಯಾವಾಗಲೂ ನಿಂತ್ಕೊಳ್ತೀನಿ ಅನ್ನೋ ಪ್ರತಿಯೊಬ್ಬರೂ ನನಗೆ ಧೈರ್ಯ ತುಂಬಿದ್ದಾರೆ. ನಾನು ಹಿಂದಿಯಲ್ಲಿ ಹಾಡು ಹಾಡಿದೆ ಅಲ್ವಾ ಅಂತ ಕೇಳ್ಬೋದು. ಆದ್ರೆ ಆ ಹಾಡಿನ ಅರ್ಥ ಅಷ್ಟು ಅಮೋಘವಾಗಿದೆ. ಕಟ್ಟೆ ಪೂಜೆ ವೇಳೆಯೂ ತೆಂಗಿನಕಾಯಿ ಚೆನ್ನಾಗಿ ಒಡೆದಿದೆ. ಬಹುಶಃ ಅಮ್ಮನ ಆತ್ಮಕ್ಕೆ ಶಾಂತಿ ಸಿಕ್ಕಿರಬಹುದು ಎಂದಿದ್ದರು.

ಆದರೆ ಇದೀಗ ತಾಯಿಯ ಅಗಲುವಿಕೆ ನೋವಿನ ನಡುವೆ ಖಾಸಗಿ ಸುದ್ದಿ ವಾಹಿನಿಯ ಸಂದರ್ಶನವೊಂದರಲ್ಲಿ ಮಾತನಾಡಿದ್ದು, ಕೆಲವು ವಿಚಾರಗಳನ್ನು ಬಿಚ್ಚಿಟ್ಟಿದ್ದಾರೆ. ಅಷ್ಟೇ ಅಲ್ಲದೇ ಕನ್ನಡದ ನಟ ಸಾಹಸಸಿಂಹ ವಿಷ್ಣುವರ್ಧನ್ (Vishnuvardhan) ಅವರ ಬಗ್ಗೆ ಮಾತನಾಡಿದ್ದು ಅವರ ಮೇಲೆ ಅ-ಟ್ಯಾಕ್ ಆಗಿದ್ದರ ಬಗ್ಗೆ ರಿವೀಲ್ ಮಾಡಿದ್ದಾರೆ.

ಈ ಬಗ್ಗೆ ಮಾತನಾಡಿದ ನಟ ವಿನೋದ್ ರಾಜ್, “ಅಮ್ಮನೋರು, ವಿಷ್ಣುವರ್ಧನ್ ಹಾಗೂ ನಾನು ಒಂದು ಫಂಕ್ಷನ್ ಗೆ ಹೋಗಿದ್ದೆವು. ಆದರೆ ಫಂಕ್ಷನ್ ಮುಗಿಸಿ ವಾಪಸ್ಸು ಬರುವಾಗ ಕೈಯನ್ನು ಬೀಸುತ್ತಾ ಬರುತ್ತಿದ್ದರು. ಆದರೆ ಏಕಾಏಕಿ ಯಾರದೋ ಒಂದು ಕೈಯಲ್ಲಿ ರೇಸರ್ ಹಿಡಿದು ವಿಷ್ಣುವರ್ಧನ್ ಅವರ ಮೇಲೆ ಅಟ್ಯಾಕ್ ಮಾಡುವ ಯತ್ನ ಆಗಿತ್ತು. ಆಗ ವಿಷ್ಣುವರ್ಧನ್ ಅವರು ಹಿಂದೆ ಸರಿದು ಒಂದು ಕೈಯಿಂದ ಬಿಟ್ಟು ಬಿಟ್ಟರು. ಇದರ ಉದ್ದೇಶವೇನು, ಆದಾದ ಬಳಿಕ ವಿಷ್ಣುವರ್ಧನ್ ಅವರು ನಮ್ಮ ಹಿಂದೆಯೇ ಬಂದ್ರು, ಇದನ್ನು ನಾನು ಕಣ್ಣಾರೆ ನೋಡಿದ್ದೆ” ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *