ಮುದ್ದಿನ ಮಗನನ್ನು ಮುದ್ದಿಸುತ್ತಿರುವ ವಿಜಯ್ ರಾಘವೇಂದ್ರರವರ ಮಡದಿ ಸ್ಪಂದನಾ, ಫೋಟೋಗಳು ವೈರಲ್

ನಟ ವಿಜಯ್ ರಾಘವೇಂದ್ರರವರ ಸರ್ವಸ್ವವೇ ಆಗಿದ್ದ ಸ್ಪಂದನ ಇನ್ನು ನೆನಪು ಮಾತ್ರ. ಈ ಸತ್ಯವು ಕಹಿಯಾದರೂ ಕೂಡ ಒಪ್ಪಿಕೊಂಡು ಸಾಗಲೇಬೇಕು ಸ್ಪಂದನಾ (Spandana) ಇಲ್ಲ ಎನ್ನುವುದನ್ನು ಅವರ ಕುಟುಂಬಕ್ಕೆ ಅರಗಿಸಿಕೊಳ್ಳುವುದು ಅಷ್ಟು ಸುಲಭವಲ್ಲ ಬಿಡಿ. ಇತ್ತ ಚಂದನವನದ ನಟ ವಿಜಯ್‌ ರಾಘವೇಂದ್ರ (Vijay Raghavendra)ರವರು ಪತ್ನಿ ಸ್ಪಂದನಾ ವಿಜಯ್ ರಾಘವೇಂದ್ರ (Spandana Vijay Raghavendra) ನೆನಪಿನಲ್ಲಿಯೇ ದಿನ ಕಳೆಯುತ್ತಿದ್ದಾರೆ.

ಪ್ರಾಣಕ್ಕಿಂತ ಪ್ರಾಣ ಆಗಿದ್ದ ಸ್ಪಂದನಾನವರ ಅಗಲುವಿಕೆ ಅವರನ್ನು ಮೌನಕ್ಕೆ ದೂಡಿದೆ. ಕಳೆದ ಕೆಲ ದಿನಗಳ ಹಿಂದೆಯಷ್ಟೇ ವಿಜಯ್ ರಾಘವೇಂದ್ರರವರ ಮಡದಿ ಸ್ಪಂದನಾ ಕುಟುಂಬ ಹಾಗೂ ಸ್ನೇಹಿತರ ಜೊತೆಗೆ ಬ್ಯಾಂಕಾಕ್ (Bankak) ಗೆ ಪ್ರವಾಸಕ್ಕೆ ತೆರಳಿದ್ದರು. ಆದರೆ, ಆಗಸ್ಟ್ 7 ರಂದು ಬ್ಯಾಂಕಾಕ್ (Bankak) ಪ್ರವಾಸದಲ್ಲಿದ್ದ ವೇಳೆ ಲೋ ಬಿಪಿಯಿಂದ ಹೃದಯಾಘಾತವಾಗಿ ಇಹಲೋಕ ತ್ಯಜಿಸಿದ್ದರು. ಈ ಸುದ್ದಿಯು ಅವರ ಕುಟುಂಬಕ್ಕೆ ತೀರಾ ಆಘಾತವನ್ನು ತಂದಿದೆ.

ಅದರಲ್ಲಿ ನಟ ವಿಜಯ್ ರಾಘವೇಂದ್ರರವರು ಪತ್ನಿಯಿಲ್ಲ ಎನ್ನುವ ಸತ್ಯವನ್ನು ಒಪ್ಪಿಕೊಳ್ಳಲು ಸಾಧ್ಯವಾಗದೇ ನರಳುತ್ತಿದ್ದಾರೆ. ನಟ ವಿಜಯ್ ರಾಘವೇಂದ್ರ (Vijay Raghavendra) ಹಾಗೂ ಸ್ಪಂದನಾ (Spandana) ರವರು ಪ್ರೀತಿಸಿ ಮದುವೆಯಾಗಿದ್ದರು. 2007ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ವಿಜಯ್‌ ಹಾಗೂ ಸ್ಪಂದನಾ ದಂಪತಿಗಳಿಗೆ ಶೌರ್ಯ ಎಂಬ ಮುದ್ದಾದ ಮಗ ಇದ್ದಾನೆ.

ಆದರೆ ಇದೀಗ ಶೌರ್ಯ (Shourya) ಹಾಗೂ ಸ್ಪಂದನಾನವರ ಅಪರೂಪದ ಫೋಟೋಗಳು ವೈರಲ್ ಆಗುತ್ತಿವೆ. ಅಮ್ಮನ ಮುದ್ದಿನ ಪ್ರೀತಿ, ಕಾಳಜಿ ಹಾಗೂ ಹಾರೈಕೆಯಲ್ಲಿ ಬೆಳೆಯುತ್ತಿದ್ದ ಶೌರ್ಯ ಇದೀಗ ಅಮ್ಮನಿಲ್ಲದೇ ನೋವಿನಲ್ಲಿದ್ದಾನೆ. ಸದ್ಯಕ್ಕೆ ವೈರಲ್ ಆಗಿರುವ ಫೋಟೋಗಳಲ್ಲಿ ಸ್ಪಂದನಾ ತನ್ನ ಮುದ್ದಿನ ಮಗನನ್ನು ಮುದ್ದು ಮಾಡುತ್ತಿರುವ ದೃಶ್ಯವನ್ನು ನೋಡಬಹುದಾಗಿದೆ.

ಬ್ಯಾಂಕಾಕ್ (Bankak) ನಲ್ಲಿ ಹೃದಯಾಘಾತದಿಂದ ನಿಧನರಾದ ನಟ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಅಂತಿಮ ದರ್ಶನಕ್ಕೆ ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಸ್ಪಂದನಾ ತಂದೆ ಬಿ.ಕೆ.ಶಿವರಾಂ ಅವರ ಮನೆಯಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಸ್ಪಂದನಾನವರ ಅಂತ್ಯ ಸಂಸ್ಕಾರವು ಆಗಸ್ಟ್ 10 ಸಂಜೆಯ ವೇಳೆಗೆ ಶ್ರೀರಾಂಪುರದ ಹರಿಶ್ಚಂದ್ರಘಾಟ್​ (Shreerampuram Harishchandra Ghat) ನಲ್ಲಿ ಮಾಡಲಾಯಿತು. ನಿನ್ನೆ ಸ್ಪಂದನಾನವರ ಅಸ್ಥಿ ವಿಸರ್ಜನೆಯು ಶ್ರೀರಂಗಪಟ್ಟಣದಲ್ಲಿ ನೆರವೇರಿತು.

Leave a Reply

Your email address will not be published. Required fields are marked *