ಅಗ್ನಿಸಾಕ್ಷಿ ಧಾರಾವಾಹಿ ಖ್ಯಾತಿಯ ನಟ ವಿಜಯ್ ಸೂರ್ಯರವರ ಮುದ್ದಾದ ಮಗು ಹೇಗಿದೆ ನೋಡಿ? ಎಡದಲ್ಲ ನಾಲ್ಕು ಕಣ್ಣು ಇದ್ದರು ಸಾಲದು ನೋಡೋಕೆ!!

ಕೆಲವೊಮ್ಮೆ ಕನ್ನಡ ಕಿರುತೆರೆ ಲೋಕದಲ್ಲಿ ಸಿಗುವ ಒಂದು ಅವಕಾಶವು ಬದುಕಿನ ದಿಕ್ಕನ್ನು ಬದಲಾಯಿಸಿಬಿಡುತ್ತದೆ. ಅದಲ್ಲದೇ ಕನ್ನಡ ಕಿರುತೆರೆಯ ಧಾರಾ ವಾಹಿಯ ಒಂದು ಪಾತ್ರವು ಸಿನಿ ಜೀವನಕ್ಕೆ ಭದ್ರ ಅಡಿಪಾಯ ಹಾಕಿಕೊಡುತ್ತದೆ. ಈ ಮಾತು ಖ್ಯಾತ ನಟ ವಿಜಯ್ ಸೂರ್ಯರವರ ವಿಚಾರದಲ್ಲಿ ನಿಜವೆನಿಸುತ್ತದೆ. ತನ್ನ ಗುಳಿ ಕೆನ್ನೆ ಹಾಗೂ ಕೆನ್ನೆ ತುಂಬಾ ನಗುವಿನ ಮೂಲಕ ಎಲ್ಲರ ಮನಸ್ಸು ಗೆಲ್ಲುವ ಹುಡುಗನೇ ನಟ ವಿಜಯ್ ಸೂರ್ಯ (Vijay Surya). ಈಗಾಗಲೇ ಅನೇಕ ಹುಡುಗಿಯರ ಮನಸ್ಸುಗಳನ್ನು ಕದ್ದಿರುವ ನಟ ವಿಜಯ್ ಸೂರ್ಯ ಕಿರುತೆರೆಯಲ್ಲಿ ಬ್ಯುಸಿಯಾಗಿದ್ದಾರೆ.

ನಟ ವಿಜಯ್ ಸೂರ್ಯರವರಿಗೆ ಇಷ್ಟರ ಮಟ್ಟಿಗೆ ಫೇಮಸ್ ಮಾಡಿದ ಧಾರಾವಾಹಿಯೆಂದರೆ ಅದುವೇ ಅಗ್ನಿಸಾಕ್ಷಿ (Agnisakshi). ಕನ್ನಡ (Kannada)ದಲ್ಲಿ ಮಾತ್ರವಲ್ಲ, ತೆಲುಗು (Telugu) ಬ್ಯುಸಿಯಾಗಿದ್ದು, ‘ಕೃಷ್ಣಮ್ಮ ಕಲಿಪಿಂದಿ ಇದ್ದರಿನಿ’ (Krishanamma Kalipindi Iddarini) ಎಂಬ ಧಾರಾವಾಹಿಯಲ್ಲಿ ನಟಿಸಿ ತೆಲುಗು ಕಿರುತೆರೆ ಪ್ರೇಕ್ಷಕರ ಮನಸ್ಸನ್ನು ಗೆದ್ದುಕೊಂಡಿದ್ದಾರೆ. ಸದ್ಯಕ್ಕೆ ಕನ್ನಡದಲ್ಲಿ ‘ನಮ್ಮ ಲಚ್ಚಿ’ (Namma Lacchi) ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.

ಪರಭಾಷೆಯಲ್ಲಿಯೂ ನಟನಿಗೆ ಅವಕಾಶಗಳು ಬರುತ್ತಿದ್ದು ಇತ್ತೀಚೆಗಷ್ಟೇ ತಮ್ಮ ವೃತ್ತಿ ಜೀವನದ ಬಗ್ಗೆ ಮಾತನಾಡಿದ್ದರು. ಈ ಬಗ್ಗೆ ಮಾತನಾಡಿದ್ದ ನಟ ವಿಜಯ್ ಸೂರ್ಯರವರು, “ಧಾರಾವಾಹಿಯಲ್ಲಿ ನಟಿಸುತ್ತಿದ್ದು ಚಿತ್ರೀಕರಣಕ್ಕಾಗಿ ಬೆಂಗಳೂರು-ಹೈದರಾಬಾದ್‌ ಎರಡೂ ನಗರಗಳಿಗೂ ಹೋಗಿ ಬಂದು ಮಾಡುತ್ತಿದ್ದಾರೆ. ನನಗೆ ತಮಿಳು ಹಾಗೂ ತೆಲುಗು ಸಿನಿಮಾಗಳಲ್ಲಿ ಆಫರ್‌ ಬರುತ್ತಿದೆ. ಈಗ ಒಪ್ಪಿಕೊಂಡಿರುವ ಸೀರಿಯಲ್‌ ಕಥೆ ನನಗೆ ಬಹಳ ಇಷ್ಟವಾಯ್ತು. ಇದು ಕೃಷ್ಣ ಬ್ಯಾಕ್‌ಡ್ರಾಪ್‌ನಲ್ಲಿ ನಡೆಯುವ ಲವ್‌ ಸ್ಟೋರಿ. ಇದರಲ್ಲಿ ನಾನು ಅಂಧನ ಪಾತ್ರದಲ್ಲಿ ನಟಿಸುತ್ತಿದ್ದೇನೆ. ಕೆಲವೊಂದು ಕಾರಣಗಳಿಂದ ನಾನು ದೃಷ್ಟಿಯನ್ನು ಕಳೆದುಕೊಳ್ಳುತ್ತೇನೆ. ಈ ಧಾರಾವಾಹಿಯಲ್ಲಿ ಒಡಿಶಾ ನಟಿ ಜಾಸ್ಮಿನ್‌ ರಥ್‌ ನನ್ನ ಜೋಡಿಯಾಗಿ ನಟಿಸುತ್ತಿದ್ದಾರೆ” ಎಂದು ಹೇಳಿಕೊಂಡಿದ್ದರು.

ನಟ ವಿಜಯ್ ಸೂರ್ಯ ವೃತ್ತಿ ಜೀವನಕ್ಕೆ ಎಷ್ಟು ಮಹತ್ವ ನೀಡುತ್ತಾರೋ ವೈಯುಕ್ತಿಕ ಜೀವನಕ್ಕೂ ಅಷ್ಟೇ ಮಹತ್ವ ನೀಡುತ್ತಾರೆ. ಹೀಗಾಗಿ ಆಗಾಗ ಮುದ್ದಿನ ಮಗ ಸೋಹನ್ (Sohan) ಜೊತೆಗಿನ ವಿಡಿಯೋವನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಆದರೆ ಇದೀಗ ನಟ ವಿಜಯ್ ಸೂರ್ಯರವರ ಫ್ಯಾಮಿಲಿಯ ಫೋಟೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral) ಆಗಿದೆ. ಈ ಫೋಟೋದಲ್ಲಿ ವಿಜಯ್ ಸೂರ್ಯರವರು ತಮ್ಮ ಮಡದಿಯ ಹಾಗೂ ಮುದ್ದಿನ ಮಗುವಿನ ಜೊತೆಗೆ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. ಈ ಫೋಟೋಗಳು ವೈರಲ್ ಆಗುತ್ತಿದ್ದಂತೆ ಫ್ಯಾನ್ಸ್ ಮೆಚ್ಚುಗೆ ಸೂಚಿಸಿದ್ದಾರೆ.

ನಟ ವಿಜಯ್ ಸೂರ್ಯರವರ ವೈಯುಕ್ತಿಕ ಜೀವನದ ಬಗ್ಗೆ ಹೇಳುವುದಾದರೆ, ಈ ಹಿಂದೆ ತನ್ನ ದೂರದ ಸಂಬಂಧಿಯಾಗಿರುವ ಸಾಫ್ಟ್‌ವೇರ್ ಉದ್ಯೋಗಿಯಾಗಿರುವ ಚೈತ್ರಾ (Chaitra) ರವರ ಜೊತೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ವಿಜಯ್ ಸೂರ್ಯ ದಂಪತಿಗಳಿಗೆ ಸೋಹನ್ (Sohan) ಎನ್ನುವ ಮುದ್ದಾದ ಮಗನಿದ್ದಾನೆ. ಅದಲ್ಲದೇ ಕಿರುತೆರೆಯ ಧಾರಾವಾಹಿಯಲ್ಲಿ ನಟಿಸುವ ಮೂಲಕ ಬ್ಯುಸಿಯಾಗಿದ್ದಾರೆ.

Leave a Reply

Your email address will not be published. Required fields are marked *