ಸ್ಯಾಂಡಲ್ ವುಡ್ ನ ಮುದ್ದಾದ ಜೋಡಿಗಳಲ್ಲಿ ಒಬ್ಬರಾಗಿದ್ದವರು ವಿಜಯ್ ರಾಘವೇಂದ್ರ (Vijaya Raghavendra) ಹಾಗೂ ಸ್ಪಂದನಾ ಎಂದರೆ ತಪ್ಪಿಲ್ಲ. ಪ್ರೀತಿಸಿ ಮದುವೆಯಾದ ಜೋಡಿ ಸುಖವಾಗಿ ಸಂಸಾರ ಮಾಡುತ್ತಾ ಆದರ್ಶ ದಂಪತಿಗಳಂತೆ ಇದ್ದರು. ಆದರೆ ಈ ಜೋಡಿಯ ಮೇಲೆ ಯಾರ ಕಣ್ಣು ಬಿತ್ತೋ ಗೊತ್ತಿಲ್ಲ. ವಯಸ್ಸಲ್ಲದ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ.
ಸ್ಯಾಂಡಲ್‌ವುಡ್‌ನಲ್ಲಿ (Sandalwood) ‘ಚಿನ್ನಾರಿ ಮುತ್ತ’ ಖ್ಯಾತಿಯ ನಟ ವಿಜಯ್ ರಾಘವೇಂದ್ರ (Vijaya raghavendra) ಅವರ ಪತ್ನಿ ಸ್ಪಂದನಾ ವಿಜಯ ರಾಘವೇಂದ್ರ ಹೃದಯಾಘಾತದಿಂದ (Heart attack) ನಿಧನರಾಗಿದ್ದಾರೆ. ಕುಟುಂಬದ ಜೊತೆ ಬ್ಯಾಂಕಾಕ್ ಪ್ರವಾಸದ ವೇಳೆ ಸ್ಪಂದನಾ ವಿಜಯ್ ರಾಘವೇಂದ್ರ ಇನ್ನಿಲ್ಲವಾಗಿದ್ದಾರೆ. ಸದ್ಯಕ್ಕೆ ಕುಟುಂಬದವರು ಸ್ಪಂದನಾರವರನ್ನು ಕಳೆದುಕೊಂಡ ನೋವಿನಲ್ಲಿದ್ದಾರೆ.

ಸ್ಪಂದನರವರು (Spandana) ಅವರು ಇಹಲೋಕ ತ್ಯಜಿಸಿದ ಬಳಿಕ ಅವರ ಬಾಲ್ಯ, ಕುಟುಂಬ ಹಾಗೂ ಸ್ನೇಹಿತರ ಜೊತೆಗಿನ ಫೋಟೋಗಳು ವೈರಲ್ ಆಗಿದೆ. ಇದೀಗ ಕನ್ನಡದ ನಟ ವಿಶಾಲ್ ಹೆಗ್ಡೆಯವರ ಜೊತೆಗಿನ ಫೋಟೋವೊಂದು ವೈರಲ್ ಆಗಿವೆ. ಈ ಫೋಟೋಗಳು ಸ್ಪಂದನಾ ಹಾಗೂ ವಿಶಾಲ್ ಹೆಗ್ಡೆಯವರ ನಡುವಿನ ಆತ್ಮೀಯತೆಯನ್ನು ಕಾಣಬಹುದು.
ಮೂಲತಃ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಬೆಳ್ತಂಗಡಿ (belthangady) ಯವರು. ನಿವೃತ್ತ ಪೊಲೀಸ್ ಅಧಿಕಾರಿ ಬಿ.ಕೆ.ಶಿವರಾಂ ಅವರ ಮುದ್ದಿನ ಪುತ್ರಿಯಾಗಿದ್ದರು. ಸೋದರ ರಕ್ಷಿತ್ ಶಿವರಾಂ (Rakshit shivaram) ಅವರ ಮುದ್ದಿನ ತಂಗಿ. ವಿಜಯ್ ರಾಘವೇಂದ್ರರವರ ಬಗ್ಗೆ ಸಂದರ್ಶನವೊಂದರಲ್ಲಿ ರಕ್ಷಿತ್ ಶಿವರಾಂ ಹಾಡೀ ಹೊಗಳಿದ್ದರು.

ಈ ವೇಳೆಯಲ್ಲಿ ಮಾತನಾಡಿದ್ದ ರಕ್ಷಿತ್ ಶಿವರಾಂ, “ಚಿತ್ರರಂಗದ ವ್ಯಕ್ತಿಗೆ ಸ್ಪಂದನಾರನ್ನು ಮದುವೆ ಮಾಡಿಕೊಡಬೇಕು ಎಂದಾಗ ಮನೆಯವರು ಬಹಳ ಯೋಚನೆ ಮಾಡಿದ್ದೆವು. ಎಲ್ಲರೂ ಇಷ್ಟಪಡುವಂತಹ ಸಜ್ಜನ, ಸರಳ ವ್ಯಕ್ತಿ ನನ್ನ ಭಾವನಾಗಿ ಬಂದಿದ್ದು ನಮ್ಮ ಅದೃಷ್ಟ” ಎಂದಿದ್ದರು. ಹೌದು, ಸ್ಪಂದನಾ ಮದುವೆಯಾಗಿದ್ದು ಖ್ಯಾತ ನಟ ವಿಜಯ್ ರಾಘವೇಂದ್ರರವರನ್ನು.
ನಟ ವಿಜಯ್ ರಾಘವೇಂದ್ರ ಹಾಗೂ ಸ್ಪಂದನಾ ಪ್ರೀತಿಸಿ 2007ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. 16 ವರ್ಷ ಯಶಸ್ವಿಯಾಗಿ ಸಂಸಾರ ಮಾಡಿದ್ದ ಈ ದಂಪತಿಗಳಿಗೆ ಶೌರ್ಯ (Shourya) ಎಂಬ ಮಗ ಇದ್ದಾನೆ. ಆದರೆ ಸಂಸಾರಕ್ಕೆ ಕಣ್ಣಿನಂತೆ ಇದ್ದ ಸ್ಪಂದನಾನೇ ಇಲ್ಲವಾಗಿರುವುದು ನೋವಿನ ಸಂಗತಿ.