ನಟ ವಿಜಯ್ ರಾಘವೇಂದ್ರ ಮಡದಿ ಸ್ಪಂದನಾನವರು ಅಪ್ಪು ಜೊತೆಗೆ ಕಾಣಿಸಿಕೊಂಡ ಅಪರೂಪದ ಫೋಟೋಗಳು ವೈರಲ್, ಆ ಕ್ಷಣ ಹೇಗಿತ್ತು ಗೊತ್ತಾ?

ವಿ-ಧಿ ಯಾರ ಬದುಕಿನಲ್ಲಿ ಹೇಗೆ ನಡೆಯುತ್ತದೆ ಎಂದು ಊಹೆ ಮಾಡುವುದು ಕಷ್ಟ. ಅದರಲ್ಲಿ ಈ ಲೋಕದಲ್ಲಿ ಒಳ್ಳೆಯವರಿಗೆ ಕಾಲಯಿಲ್ಲ ಎನ್ನುವುದು ಕೂಡ ಅಷ್ಟೇ ಸತ್ಯ ಕೂಡ. ಎಲ್ಲರಿಗೂ ಒಳ್ಳೆಯದೇ ಬಯಸುವ ವ್ಯಕ್ತಿಗಳೇ ಬೇಗನೇ ಎಲ್ಲರನ್ನು ಬಿಟ್ಟು ಹೋಗುತ್ತಾರೆ. ಈ ವಿಚಾರದಲ್ಲಿ ನಟ ವಿಜಯ್ ರಾಘವೇಂದ್ರರವರಿಗೆ ಪತ್ನಿ ಸ್ಪಂದನಾ (Vijay Raghavendra Wife Spandan) ಕೂಡ ಹೊರತಾಗಿಲ್ಲ.

ಚಂದನವನದ ನಟ ವಿಜಯ್‌ ರಾಘವೇಂದ್ರ (Vijay Raghavendra) ಪತ್ನಿ ಸ್ಪಂದನಾ ವಿಜಯ್ ರಾಘವೇಂದ್ರ (Spandana Vijay Raghavendra) ಅವರು ವಿದೇಶ ಪ್ರವಾಸದಲ್ಲಿದ್ದ ವೇಳೆ ಹೃದಯಾಘಾತದಿಂಧ ನಿ-ಧನರಾಗಿದ್ದರು. ಪತ್ನಿಯನ್ನು ಕಳೆದುಕೊಂಡ ನೋವು ಒಂದೆಡೆಯಾದರೆ ಮುಂದಿನ ಬದುಕು ಹೇಗೆ ಎನ್ನುವ ಪ್ರಶ್ನೆಯೊಂದು ನಟ ವಿಜಯರಾಘವೇಂದ್ರರವರನ್ನು ಕಾಡುತ್ತಿದೆ.

ಕಳೆದ ಆಗಸ್ಟ್ 7 ರಂದು ಬ್ಯಾಂಕಾಕ್ (Bankak) ಪ್ರವಾಸದಲ್ಲಿದ್ದ ವೇಳೆ ಲೋ ಬಿಪಿಯಿಂದಾಗಿ ಕೊ-ನೆಯುಸಿರು ಎಳೆದಿದ್ದರು. ಈ ಸುದ್ದಿಯು ಕುಟುಂಬ ಹಾಗೂ ಚಿತ್ರರಂಗಕ್ಕೆ ಆಘಾತವನ್ನು ನೀಡಿದೆ. ಒಂದೆರಡು ದಿನಗಳ ಹಿಂದೆಯಷ್ಟೇ ಈಡಿಗ ಪದ್ಧತಿಯಂತೆ 5ನೇ ದಿನದ ಕಾರ್ಯ, ಅಸ್ಥಿ ವಿಸರ್ಜನೆ ಶ್ರೀರಂಗಪಟ್ಟಣ (Shreerangapattana) ದಲ್ಲಿ ನಡೆದಿದೆ. ಇನ್ನು ನಟ ವಿಜಯರಾಘವೇಂದ್ರರವರ ಮಡದಿ ಸ್ಪಂದನಾ ಇಲ್ಲವಾದ ಬಳಿಕ ಅವರು ಕುಟುಂಬದ ಜೊತೆಗೆ ಕಳೆದ ಸುಂದರ ಕ್ಷಣಗಳು ಬಾಲ್ಯದ ಫೋಟೋ ಹಾಗೂ ವಿಡಿಯೋಗಳು ವೈರಲ್ ಆಗಿವೆ.

ಅದಲ್ಲದೇ ಎಲ್ಲರ ಗಮನ ಸೆಳೆಯುತ್ತಿರುವ ಫೋಟೋಗಳಲ್ಲಿ ಪುನೀತ್ ರಾಜ್ ಕುಮಾರ್ (Puneeth Rajkumar) ಸ್ಪಂದನಾ ಫೋಟೋ ಕೂಡ ಒಂದು. ನಗುಮೊಗದ ಪುನೀತ್ ರಾಜ್ ಕುಮಾರ್ ಹಾಗೂ ಸ್ಪಂದನಾ ನಗುನಗುತ್ತಲೇ ಬದುಕಿನ ಯಾತ್ರೆಗೆ ಪೂರ್ಣ ವಿರಾಮ ಹಾಡಿದ್ದರು. ವೈರಲ್ ಆಗಿರುವ ಫೋಟೋವು ವಿಜಯ್ ರಾಘವೇಂದ್ರ, ಸ್ಪಂದನಾ, ಶೌರ್ಯ (Shourya ಅಪ್ಪು ಅವರನ್ನು ಭೇಟಿಯಾಗಿದ್ದಾಗ ವೇಳೆಯ ಕ್ಷಣವಾಗಿತ್ತು.

ಅಪ್ಪು ಹಾಗೂ ಸ್ಪಂದನಾ ನಗುನಗುತ್ತಲೇ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದ ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಆದರೆ ನೆಟ್ಟಿಗರು ಈ ಫೋಟೋ ನೋಡಿ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಇಬ್ಬರು ನಗುಮುಖದ ಜೀವಗಳು ನಮ್ಮ ಜೊತೆಗಿಲ್ಲ. ನಗುಮುಖದಿಂದಲೇ ಮನಗೆದ್ದಿದ್ದ ಎರಡು ಚೇತನಗಳು ನಮ್ಮಿಂದ ದೂರಾಗಿವೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಹೃದಯವಂತ ಜೀವಗಳು ನಮ್ಮ ಜೊತೆಗೆ ಇಲ್ಲದಿರುವುದನ್ನು ನೆಟ್ಟಿಗರು ನೆನಪಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *