ನಟ ವಿಜಯ್ ರಾಘವೇಂದ್ರ ಮುದ್ದಿನ ಮಡದಿ ಸ್ಪಂದನಾ ಜೊತೆಗೆ ರಾಗಿಣಿ ಪ್ರಜ್ವಲ್, ಇಲ್ಲಿದೆ ಅಪರೂಪದ ಫೋಟೋ

ಮುತ್ತಿನಂತಹ ಹೆಂಡತಿ ಮುದ್ದಾದ ಮಗ, ಕೈ ತುಂಬ ಕೆಲಸ ಮುಖದ ತುಂಬಾ ನಗು ಇಷ್ಟೇ ನಟ ವಿಜಯ್ ರಾಘವೇಂದ್ರ (Vijay Raghavendra) ರವರ ಬದುಕಾಗಿತ್ತು. ಆದರೆ ನಟ ವಿಜಯ್ ರಾಘವೇಂದ್ರರವರ ಕುಟುಂಬವನ್ನು ಕಂಡು ದೇವರಿಗೂ ಕೂಡ ಹೊಟ್ಟೆ ಕಿಚ್ಚು ಆಗಿದ್ದಿರಬೇಕು. ನಟ ವಿಜಯ್ ರಾಘವೇಂದ್ರ ಬಾಳಲ್ಲಿ ಬಿರುಗಾಳಿ ಬೀಸಿತ್ತು. ಪ್ರವಾಸಕ್ಕೆಂದು ಬ್ಯಾಂಕಾಕ್‌ (Bankak) ಗೆ ತೆರಳಿದ್ದ ವಿಜಯ್ ಪತ್ನಿ ಸ್ಪಂದನಾ ಅಲ್ಲೇ ಹೃದಯಾಘಾತದಿಂದ ಕೊನೆಯುಸಿರೆಳೆದ್ದಿದರು. ಜೀವಕ್ಕಿಂತ ಜೀವವಾಗಿ ಪ್ರೀತಿಸುತ್ತಿದ್ದ ಮಡದಿ ಸ್ಪಂದನಾವಿಲ್ಲದೇ ನಟ ಕುಗ್ಗಿ ಹೋಗಿದ್ದಾರೆ.

ನಟ ವಿಜಯರಾಘವೇಂದ್ರ ಮತ್ತು ಸ್ಪಂದನಾ (Spandana) ಜೋಡಿಯ ಮೇಲೆ ಯಾರ ಕೆಟ್ಟ ಕಣ್ಣು ಬಿತ್ತೋ, ಸ್ಪಂದನಾ ಹೃದಯಾಘಾತಕ್ಕೆ ಒಳಗಾಗಿ ಥೈಲ್ಯಾಂಡಿನ ಬ್ಯಾಂಕಾಂಕ್ ನಲ್ಲಿ ನಿಧನರಾಗಿ ಕುಟುಂಬಕ್ಕೆ ಆಘಾತಕಾರಿ ಸುದ್ದಿಯೊಂದನ್ನು ನೀಡಿದ್ದಾರೆ. ಇನ್ನೊಂದೆಡೆ ಸ್ಪಂದನಾ ಅವರ ಓಲ್ಡ್ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಇದೀಗ ನಟಿ ರಾಗಿಣಿ ಪ್ರಜ್ವಲ್ (Ragini Prajwal) ಹಾಗೂ ಪ್ರಜ್ವಲ್ ದೇವರಾಜ್ (Prajwal Devaraj) ಅವರು ಸ್ಪಂದನಾನವರ ಜೊತೆಗೆ ಕ್ಲಿಕಿಸಿಕೊಂಡ ಫೋಟೋಗಳು ವೈರಲ್ ಆಗಿವೆ.ನಟಿ ಕಮ್ ಮಾಡೆಲ್ ರಾಗಿಣಿ ಪ್ರಜ್ವಲ್ (Ragini Prajwal) ಸ್ಪಂದನಾ ಜೊತೆಗಿರುವ ಫೋಟೋಗಳನ್ನು ಶೇರ್ ಮಾಡಿಕೊಂಡು, ಭಾವುಕ ಸಾಲುಗಳನ್ನು ಬರೆದುಕೊಂಡಿದ್ದರು.

ಫೋಟೋಗೆ ರಾಗಿಣಿ ಪ್ರಜ್ವಲ್, “ಅಕ್ಕಾ ನಾನು ನಿನ್ನನ್ನು ಹೀಗೆ ಹಿಡಿದಿಡಲು ಬಯಸುತ್ತೇನೆ! ನೀವು ಅಣ್ಣಾ ಜೊತೆಗಿನ ಪ್ರತಿಯೊಂದು ವಿಶೇಷ ಸಂದರ್ಭದಲ್ಲೂ ಭಾಗವಾಗಿದ್ದೀರಿ. ನಾವು ಮತ್ತೆ ಒಟ್ಟಿಗೆ ಹೆಚ್ಚಿನ ನೆನಪುಗಳನ್ನು ಕೂಡಿಡಲು ಆಗುವುದಿಲ್ಲ ಎನ್ನುವುದು ಮನಸ್ಸಿಗೆ ನೋವುಂಟುಮಾಡುತ್ತದೆ. ನಿಮಗೆ ನಮ್ಮ ಹೃದಯದಲ್ಲಿ ವಿಶೇಷ ಸ್ಥಾನವಿದೆ ಮತ್ತು ನಾವು ನಿನ್ನನ್ನು ಪ್ರೀತಿಸುತ್ತೇವೆ ಅಕ್ಕಾ ಈ ಪ್ರೀತಿಯು ಯಾವಾಗಲೂ ಇರುತ್ತದೆ” ಎಂದು ಭಾವುಕವಾಗಿ ಬರೆದುಕೊಂಡಿದ್ದರು.

ಫ್ಯಾಮಿಲಿ ಹಾಗೂ ಸ್ನೇಹಿತರ ಜೊತೆಗೆ ಟ್ರಿಪ್ ಗೆಂದು ಹೋಗಿದ್ದ ವೇಳೆಯಲ್ಲಿ ಸ್ಪಂದನ ಉಸಿರು ನಿಲ್ಲಿಸಿದ್ದರು. ಹೌದು, ಆಗಸ್ಟ್ 7 ರಂದು ಬ್ಯಾಂಕಾಕ್ (Bankak) ಪ್ರವಾಸದಲ್ಲಿದ್ದ ವೇಳೆ ಲೋ ಬಿಪಿಯಿಂದಾಗಿ ಕೊ-ನೆಯುಸಿರೆಳೆದಿದ್ದರು. ಮೃ-ತದೇಹವನ್ನು ಕಾರ್ಗೊ ಮೂಲಕ ಬೆಂಗಳೂರಿಗೆ ಕರೆತರಾಗಿತ್ತು. ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಸ್ಪಂದನಾ ತಂದೆ ಬಿ.ಕೆ.ಶಿವರಾಂ ಅವರ ಮನೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.

ಸ್ಯಾಂಡಲ್​ವುಡ್​ನ ಹಲವು ಸೆಲೆಬ್ರಿಟಿಗಳು ಆಗಮಿಸಿ ಸ್ಪಂದನಾರವರ ಅಂತಿಮ ದರ್ಶನ ಪಡೆದುಕೊಂಡಿದ್ದರು. ಸ್ಪಂದನಾ ವಿಜಯರಾಘವೇಂದ್ರ ಅವರ ಅಂ-ತ್ಯಕ್ರಿಯೆ ನಿನ್ನೆ ಸಂಜೆ 4 ಗಂಟೆಗೆ ಶ್ರೀರಾಮಪುರದ ಹರಿಶ್ಚಂದ್ರಘಾಟ್​ (Shreeram Pura Harishchandra Ghat) ನಲ್ಲಿ ನೆರವೇರಿತು. ಆದರೆ ಇದೀಗ ವಿಜಯ್ ರಾಘವೇಂದ್ರ ಹಾಗೂ ಬಿಕೆ ಶಿವರಾಂ ಅವರ ಮನೆಯಲ್ಲಿ ನೀರವ ಮೌನ ಆವರಿಸಿದೆ. ನಟ ವಿಜಯ್ ರಾಘವೇಂದ್ರರವರು ಈ ಘಟನೆಯಿಂದ ಸುಧಾರಿಸಿಕೊಂಡು ಹೇಗೆ ಹೊರಗೆ ಬರುತ್ತಾರೆ ಎನ್ನುವುದು ಊಹೆ ಮಾಡಲಾಗದ ಪ್ರಶ್ನೆಯಾಗಿದೆ.

Leave a Reply

Your email address will not be published. Required fields are marked *