ಅಣ್ಣ ರಕ್ಷಿತ್ ಶಿವರಾಂ ಜೊತೆಗೆ ವಿಜಯ್‌ ರಾಘವೇಂದ್ರ ಪತ್ನಿ ಸ್ಪಂದನಾ, ಅಪರೂಪದ ಫೋಟೋಗಳು ವೈರಲ್

ಸ್ಯಾಂಡಲ್ ವುಡ್ ನ ಮುದ್ದಾದ ಜೋಡಿಗಳಲ್ಲಿ ಒಬ್ಬರಾಗಿದ್ದವರು ವಿಜಯ್‌ ರಾಘವೇಂದ್ರ ಹಾಗೂ ಸ್ಪಂದನಾ. ಸ್ಯಾಂಡಲ್‌ವುಡ್‌ನಲ್ಲಿ (sandalwood) ‘ಚಿನ್ನಾರಿ ಮುತ್ತ’ ಅಂತಲೇ ಪ್ರಸಿದ್ಧಿಯಾಗಿರುವ ನಟ ವಿಜಯ್‌ ರಾಘವೇಂದ್ರ (Vijaya raghavendra) ಅವರ ಪತ್ನಿ ಸ್ಪಂದನಾ ವಿಜಯ ರಾಘವೇಂದ್ರ ಹೃದಯಾಘಾತದಿಂದ (heart attack) ನಿಧನರಾಗಿದ್ದಾರೆ. ಕುಟುಂಬದ ಜೊತೆ ಬ್ಯಾಂಕಾಕ್ ಪ್ರವಾಸದ ವೇಳೆ ಸ್ಪಂದನಾ ವಿಜಯ್ ರಾಘವೇಂದ್ರ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದರು. ಈ ಸುದ್ದಿಯನ್ನು ಅವರ ಕುಟುಂಬಕ್ಕೆ ಅರಗಿಸಿಕೊಳ್ಳುವುದೇ ಕಷ್ಟವಾಗಿದೆ.

ಹುಟ್ಟಿದ ಮನೆ ಹಾಗೂ ಮೆಟ್ಟಿದ ಮನೆಗೆ ಹೆಸರು ತಂದುಕೊಟ್ಟ ಸ್ಪಂದನಾ ಇನ್ನಿಲ್ಲವಾಗಿದ್ದಾರೆ ಎನ್ನುವುದನ್ನು ಒಪ್ಪಿಕೊಳ್ಳುವುದು ಕಷ್ಟವಾಗಿದೆ. ವಿಜಯರಾಘವೇಂದ್ರಸ್ಪಂದನಾ ಒಬ್ಬರನೊಬ್ಬರು ಪ್ರೀತಿಸಿ ಮದುವೆಯಾಗಿದ್ದ ಜೋಡಿ ಸುಖವಾಗಿ ಸಂಸಾರ ಮಾಡುತ್ತಿತ್ತು. ಈ ದಂಪತಿಗಳಿಗೆ ಮುದ್ದಾದ ಮಗ ಶೌರ್ಯ ಎನ್ನುವ ಮುದ್ದಾದ ಮಗನಿದ್ದಾನೆ. ಆದರೆ ಸ್ಪಂದನಾನವರ ಅಗಲುವಿಕೆಯ ನಂತರದಲ್ಲಿ ಅವರ ಫೋಟೋ ಹಾಗೂ ವಿಡಿಯೋಗಳು ವೈರಲ್ ಆಗಿವೆ.

ಸ್ಪಂದನಾ ಹಾಗೂ ಅಣ್ಣ ಕಾಂಗ್ರೆಸ್ ರಕ್ಷಿತ್ ಶಿವರಾಂ (Spandana-Rakshit shivaram) ಜೊತೆಗಿನ ಫೋಟೋವೊಂದು ಎಲ್ಲರ ಗಮನ ಸೆಳೆಯುತ್ತಿದೆ. ರಕ್ಷಿತ್ ಶಿವರಾಂ ಅವರ ಮುದ್ದಿನ ತಂಗಿಯಾಗಿ ಆಡಿ ಬೆಳೆದ ಸ್ಪಂದನಾನವರು ಅಣ್ಣನ ಜೊತೆಗೆ ಒಳ್ಳೆಯ ಬಾಂಧವ್ಯವನ್ನು ಹೊಂದಿದ್ದರು. ಆದರೆ ವೈರಲ್ ಆಗಿರುವ ಫೋಟೋದಲ್ಲಿ ರಕ್ಷಿತ್ ಶಿವರಾಂ ಹಾಗೂ ಸ್ಪಂದನಾ ಮುದ್ದಾಗಿ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. ಈ ಫೋಟೋಗೆ ಒಂದೂವರೆ ಸಾವಿರಕ್ಕೂ ಅಧಿಕ ಲೈಕ್ಸ್ ಗಳು ಬಂದಿವೆ.

ಸ್ಪಂದನರವರು (Spandana) ಮೂಲತಃ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಬೆಳ್ತಂಗಡಿ (belthangady) ಯವರು. ನಿವೃತ್ತ ಪೊಲೀಸ್ ಅಧಿಕಾರಿ ಬಿ.ಕೆ.ಶಿವರಾಂ ಅವರ ಮುದ್ದಿನ ಪುತ್ರಿಯಾಗಿದ್ದರು. ಸೋದರ ರಕ್ಷಿತ್ ಶಿವರಾಂ (Rakshit shivaram) ಅವರಿಗೆ ತಂಗಿಯೆಂದರೆ ಅಚ್ಚು ಮೆಚ್ಚು ಆಗಿದ್ದರು.

ಇತ್ತೀಚೆಷ್ಟೇ ಸ್ಟಾರ್ ಸುವರ್ಣ (star suvarna) ವಾಹಿನಿಯ ‘ನಮ್ ಕಥೆ ನಿಮ್ ಜೊತೆ’ (Nam kathe nim jothe) ಸಂದರ್ಶನದಲ್ಲಿ ಸ್ಪಂದನಾ ತಮ್ನಾ ಬಾಲ್ಯದ ದಿನಗಳ (spandana childhood days) ಬಗ್ಗೆ ಮಾತನಾಡಿದ್ದರು. ಆಕೆಯ ಸಹೋದರ ರಕ್ಷಿತ್ ಕೂಡ ತಮ್ಮಿಬ್ಬರ ಬಾಲ್ಯ ಹೇಗಿತ್ತು ಎನ್ನುವುದನ್ನು ವಿವರಿಸಿದ್ದರು. ತಂದೆ ಬಿ. ಕೆ ಶಿವರಾಂ ಬಹಳ ಶಿಸ್ತಿನ ವ್ಯಕ್ತಿಯಾಗಿದ್ದರುದ್ದರು.

ಆದರೆ, ಸ್ಪಂದನಾ ಜೊತೆ ತಂದೆ ಅಷ್ಟೇನು ಸ್ಟ್ರಿಕ್ಟ್ ಆಗಿ ಇರುತ್ತಿರಲಿಲ್ಲ. ಬಾಲ್ಯದಲ್ಲಿ ಸ್ಪಂದನಾ ಬಹಳ ಸೈಲೆಂಟ್ ಹುಡುಗಿಯಾಗಿದ್ದರು. ಪ್ರತಿಯೊಂದು ವಿಷಯವನ್ನು ತಂದೆಗೆ ಹೇಳುತ್ತಿದ್ದರು. ಕೋಪ ಬಂದಾಗ ಯಾರು ಏನೇ ಮಾಡಿದರೂ ತಕ್ಷಣ ಯಾರ ಬಳಿಯಾದರೂ ಸ್ಪಂದನಾ ಹೇಳಿಬಿಡುತ್ತಿದ್ದಳು. ಸ್ಪಂದನಾ ಚಿಕ್ಕವರಿದ್ದಾಗ ಅತೀ ಕಡಿಮೆ ಬಟ್ಟೆ ಹಾಕುತ್ತಿದ್ದರು. ಅದಕ್ಕೆ ಅಪ್ಪ ಪ್ರೀತಿಯಿಂದ ಮೋಗ್ಲಿ ಎಂದು ಕರೆಯುತ್ತಿದ್ದರು ಎನ್ನುವುದನ್ನು ರಿವೀಲ್ ಮಾಡಿದ್ದರು.

ತಂದೆಯ ಮುದ್ದಿನ ಮಗಳು ಸ್ಪಂದನಾ ತಂದೆ ಇಲಾಖೆಯಲ್ಲಿ ಇದ್ದಿದ್ದರಂತೆ ಮನೆಯಲ್ಲಿ ಹೆಚ್ಚು ಇರುತ್ತಿರಲಿಲ್ಲ. ಆಗ ಅಣ್ಣ ರಕ್ಷಿತ್ ತಂಗಿಯನ್ನು ಜೋಪಾನ ಮಾಡುತ್ತಿದ್ದರು ಎಂದಿದ್ದರು. ಆದರೆ ಅಣ್ಣ ರಕ್ಷಿತ್ ಅವರಿಗೆ ತಂಗಿಯೆಂದರೆ ಜೀವ ಎನ್ನುವಂತೆ ಇದ್ದರುರು. ಇದೀಗ ಸ್ಪಂದನಾ ಇಲ್ಲದೇ ಕುಟುಂಬದವರು ಕಣ್ಣೀರು ಹಾಕುತ್ತಿದ್ದಾರೆ.

Leave a Reply

Your email address will not be published. Required fields are marked *