ನಮ್ಮ ಕನ್ನಡ ಚಿತ್ರರಂಗದಲ್ಲಿ ಈಗಾಗಲೇ ಹಲವಾರು ನಟರು ಬಾಲನಟರಾಗಿ ಕಾಣಿಸಿಕೊಂಡಿದ್ದಾರೆ. ಅದರಲ್ಲಿ ಕೆಲವೇ ಕೆಲವು ಮಂದಿ ಮಾತ್ರ ಇಂದಿಗೂ ಕೂಡ ಚಿತ್ರರಂಗದಲ್ಲಿ ಖ್ಯಾತನಾಮ ರಾಗಿ ಉಳಿದುಕೊಂಡಿದ್ದಾರೆ. ಅವರಲ್ಲಿ ನಟ ಚಿನ್ನಾರಿಮುತ್ತಾ ವಿಜಯ್ ರಾಘವೇಂದ್ರ ಕೂಡ ಒಬ್ಬರು. ವಿಜಯ ರಾಘವೇಂದ್ರ ರವರು ಪಾರ್ವತಮ್ಮನವರ ತಮ್ಮನಾಗಿರುವ ಚಿನ್ನೇ ಗೌಡರ ಮಗ. ಇನ್ನು ಕನ್ನಡ ಚಿತ್ರರಂಗದ ರೋರಿಂಗ್ ಸ್ಟಾರ್ ಎಂದೇ ಖ್ಯಾತರಾಗಿರುವ ಶ್ರೀಮುರಳಿ ಅವರ ಅಣ್ಣ. ಈ ವಿಚಾರ ನಿಮಗೆಲ್ಲ ತಿಳಿದಿದೆ.
ಇನ್ನು ಚಿಕ್ಕವಯಸ್ಸಿನಿಂದಲೂ ಕೂಡ ಬಾಲನಟನಾಗಿ ಕನ್ನಡ ಚಿತ್ರರಂಗದಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡವರು. ನಂತರ ಆರಂಭದಲ್ಲಿ ನಾಯಕನಟನಾಗಿ ಕೂಡ ಕನ್ನಡ ಚಿತ್ರರಂಗದಲ್ಲಿ ಸಂಚಲನವನ್ನು ಸೃಷ್ಟಿಸಿದ್ದಾರೆ. ಆರಂಭದಲ್ಲಿ ವಿಜಯ್ ರಾಘವೇಂದ್ರ ರವರು ಭವಿಷ್ಯದ ಸ್ಟಾರ್ ನಟನಾಗಿ ಕಾಣಿಸಿಕೊಳ್ಳುತ್ತಾರೆ ಎನ್ನುವುದಾಗಿ ಎಲ್ಲರೂ ಭಾವಿಸಿದ್ದರು. ಆದರೆ ನಟ ವಿಜಯ್ ರಾಘವೇಂದ್ರ ರವರು ತಮ್ಮ ಮುಂದಿನ ಸಿನಿಮಾಗಳ ಕಥೆಯನ್ನು ಚೆನ್ನಾಗಿ ಆಯ್ಕೆ ಮಾಡಿಕೊಳ್ಳುವುದರಲ್ಲಿ ಎಡವಿದ್ದಾರೆ ಎಂದು ಹೇಳಬಹುದಾಗಿದೆ. ಆದರೂ ಕೂಡ ಇಂದಿಗೂ ಕನ್ನಡ ಚಿತ್ರರಂಗದಲ್ಲಿ ಅಜಾತಶತ್ರುವಾಗಿ ತಮ್ಮ ನಟನೆಯ ಮೂಲಕ ಎಲ್ಲರ ಮನಸ್ಸನ್ನು ಗೆಲ್ಲಲು ಯಶಸ್ವಿಯಾಗಿದ್ದಾರೆ. ಬಾಕ್ಸ್ ಆಫೀಸ್ ನಲ್ಲಿ ದೊಡ್ಡ ಮಟ್ಟಿಗೆ ಸದ್ದು ಮಾಡದಿದ್ದರೂ ಕೂಡ ವಿಜಯ್ ರಾಘವೇಂದ್ರ ರವರ ಸಿನಿಮಾಗಳನ್ನು ಎಲ್ಲರೂ ಕೂಡ ಇಷ್ಟಪಡುತ್ತಾರೆ.
ಹಲವಾರು ವರ್ಷಗಳ ಕಾಲ ಚಿತ್ರರಂಗದಿಂದ ದೂರವಿದ್ದರೂ. ಬಿಗ್ ಬಾಸ್ ನ ಮೊದಲ ಸೀಸನ್ ನ ವಿನ್ನರ್ ಆಗಿ ಕೂಡ ವಿಜಯ್ ರಾಘವೇಂದ್ರ ರವರು ಹೊರಹೊಮ್ಮಿದ್ದಾರೆ. ಇದಾದ ನಂತರ ಹಲವಾರು ಸಿನಿಮಾಗಳಲ್ಲಿಯೂ ಕೂಡ ಕಾಣಿಸಿಕೊಂಡಿದ್ದಾರೆ ಅದರಲ್ಲಿ ಪ್ರಮುಖವಾಗಿ ಚೌಕ ಮಾಲ್ಗುಡಿ ಡೇಸ್ ಹಾಗೂ ಸೀತಾರಾಮ್ ಬಿನೊಯ್ ಸಿನಿಮಾಗಳು ಪ್ರೇಕ್ಷಕರ ಮನಗೆಲ್ಲುವಲ್ಲಿ ಅದ್ವಿತೀಯ ಯಶಸ್ಸನ್ನು ಕಂಡಿದೆ. ವಿಜಯ್ ರಾಘವೇಂದ್ರ ರವರ ವೈವಾಹಿಕ ಜೀವನದ ಕುರಿತಂತೆ ಹೇಳುವುದಾದರೆ ಪೊಲೀಸ್ ಆಫೀಸರ್ ಮಗಳಾಗಿರುವ ಸ್ಪಂದನ ರವರೊಂದಿಗೆ ಮದುವೆಯಾಗಿದ್ದಾರೆ ಇನ್ನೂ ಇವರಿಗೆ ಶೌರ್ಯ ಎನ್ನುವ ಮಗ ಕೂಡ ಇದ್ದಾನೆ.
ಇಂದಿನ ವಿಚಾರದಲ್ಲಿ ನಾವು ಪ್ರಮುಖವಾಗಿ ಮಾತನಾಡಲು ಹೊರಟಿರುವುದು ಇವರ ಮನೆಯ ಕುರಿತಂತೆ. ವಿಜಯ್ ರಾಘವೇಂದ್ರ ಅವರು ತಮ್ಮ ಸದಭಿರುಚಿಗೆ ತಕ್ಕಂತೆ ಅತ್ಯದ್ಭುತ ವಿನ್ಯಾಸಗಳನ್ನು ಒಳಗೊಂಡಂತಹ ಮನೆಯನ್ನು ಕಟ್ಟಿದ್ದಾರೆ. ನೀವು ಕೂಡ ಈ ಫೋಟೋಗಳಲ್ಲಿ ಅವರ ಮನೆಯನ್ನು ನೋಡಬಹುದಾಗಿದೆ. ಈ ಮನೆಯ ವಿನ್ಯಾಸದ ಕುರಿತಂತೆ ನಿಮ್ಮ ಅನಿಸಿಕೆ ಹಾಗು ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ. ಇಷ್ಟು ಮಾತ್ರವಲ್ಲದೆ ನಟ ವಿಜಯ್ ರಾಘವೇಂದ್ರರವರ ಕುರಿತಂತೆ ಕೂಡ ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳುವುದು ಮರೆಯಬೇಡಿ. ಸದ್ಯಕ್ಕೆ ನಟ ವಿಜಯ್ ರಾಘವೇಂದ್ರ ರವರು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಡ್ಯಾನ್ಸಿಂಗ್ ಚಾಂಪಿಯನ್ ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಂಡಿದ್ದಾರೆ.