ಸ್ಪಂದನಾ ಧರಿಸುತ್ತಿದ್ದ ಬಟ್ಟೆಗಳು ಹಾಗೂ ಒಡವೆಗಳನ್ನು ಬೇರೆಯವರಿಗೆ ಕೊಟ್ಟರಾ ರಾಘು? ಭಾವುಕರಾದ ಚಿನ್ನಾರಿ ಮುತ್ತ, ಹೇಳಿದ್ದೇನು ಗೊತ್ತಾ?..

ನಟ ವಿಜಯ್ ರಾಘವೇಂದ್ರ (Vijay Raghavendra) ರವರ ಪತ್ನಿ ಸ್ಪಂದನಾ (Spandana) ರವರು ಇದೀಗ ನೆನಪು ಮಾತ್ರ. ಆಗಸ್ಟ್ 7 ರಂದು ಬ್ಯಾಂಕಾಕ್‌ ನಲ್ಲಿ ಹೃದಯಘಾತದಿಂದ ಮೃ- ತಪಟ್ಟಿದ್ದರು. ನಟ ವಿಜಯ್ ರಾಘವೇಂದ್ರರವರು ಮುದ್ದಿನ ಮಡದಿ ಸ್ಪಂದನಾಳನ್ನು ಕಳೆದುಕೊಂಡ ನೋವಿನಲ್ಲಿಯೇ ಇದ್ದಾರೆ.

ನಟ ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನರವರು ಪ್ರಖ್ಯಾತ ನಿಷ್ಠಾವಂತ ಅಧಿಕಾರಿಯ ಮಗಳು ಹಾಗೂ ಇವರ ನಿರ್ಮಾಪಕಿಯಾಗಿಯೂ ಗುರುತಿಸಿಕೊಂಡಿದ್ದರು. ಮಂಗಳೂರಿನ (Manglore) ಹುಡುಗಿಯನ್ನೇ ಮದುವೆಯಾಗಬೇಕು ಎಂದುಕೊಂಡಿದ್ದ ನಟ ವಿಜಯ್ ರಾಘವೇಂದ್ರ ಅದರಂತೆ ಸ್ಪಂದನಾವರನ್ನು ಪ್ರೀತಿಸಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.

ನಟ ವಿಜಯ ರಾಘವೇಂದ್ರ ಅವರು ಮೊದಲ ಬಾರಿಗೆ ಸ್ಪಂದನರವರನ್ನು ಮಲ್ಲೇಶ್ವರಂ ನ ಕಾಫಿ ಡೇ (Coffee Day) 2004ರಲ್ಲಿ ಭೇಟಿಯಾಗಿದ್ದರಂತೆ ಎರಡನೇ ಬಾರಿ ಭೇಟಿಯ ವೇಳೆ ಸ್ಪಂದನಾ ಬಳಿ ವಿಜಯ ರಾಘವೇಂದ್ರನನ್ನು ಮದುವೆಯಾಗ್ತೀಯಾ ಎಂದು ಕೇಳಿಯೇ ಬಿಟ್ಟಿದ್ದರು. ತಮ್ಮ ಪ್ರೀತಿ ವಿಚಾರವನ್ನು ವಿಜಯ ರಾಘವೇಂದ್ರರವರು ತಂದೆ ಚೆನ್ನೇಗೌಡರಿಗೆ ತಿಳಿಸಿದ್ದರು.

ಆ ಬಳಿಕ ಸ್ಪಂದನಾ ತಂದೆ ಚೆನ್ನೇಗೌಡರಿಗೆ ಪರಿಚಯವಿದ್ದ ಕಾರಣ ಇವರಿಬ್ಬರ ಮದುವೆ ಮಾತುಕತೆ ನಡೆದಿತ್ತು. ಇದಾದ ಬಳಿಕ ಒಂದೇ ತಿಂಗಳಿಗೆ ಆಗಸ್ಟ್ 2007 ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಈ ದಂಪತಿಗಳಿಗೆ ಶೌರ್ಯ ಎನ್ನುವ ಮಗನಿದ್ದಾನೆ. ಆದರೆ ಹದಿನಾರು ವರ್ಷದ ದಾಂಪತ್ಯ ಜೀವನವನ್ನು ಖುಷಿ ಖುಷಿಯಾಗಿ ಕಳೆದಿದ್ದ ವಿಜಯ್ ರಾಘವೇಂದ್ರರವರು ಪತ್ನಿಯಿಲ್ಲದೇ ಒಂಟಿಯಾಗಿದ್ದಾರೆ.

ಆದರೆ ಇದೀಗ ನಟ ವಿಜಯ್ ರಾಘವೇಂದ್ರರವರು ಪತ್ನಿ ಧರಿಸುತ್ತಿದ್ದ ಒಡವೆ ಹಾಗೂ ಸೀರೆಯ ಕುರಿತು ಮಾತನಾಡಿದ್ದಾರೆ. ಸ್ಪಂದನಾ ಬಟ್ಟೆಗಳು ಮತ್ತು ಒಡವೆಗಳನ್ನು ಏನು ಮಾಡಿದಿರಿ ಎಂದು ಖಾಸಗಿ ಚಾನೆಲ್​ ವೊಂದರಲ್ಲಿ ನಟ ವಿಜಯ್​ ರಾಘವೇಂದ್ರರವರನ್ನು ಪ್ರಶ್ನೆ ಕೇಳಿದ್ದಾರೆ. ಈ ವೇಳೆಯಲ್ಲಿ ನಟ ವಿಜಯ್ ರಾಘವೇಂದ್ರರವರು ಭಾವುಕರಾಗಿಯೇ ಮಾತನಾಡಿದ್ದು, ‘ ಸ್ಪಂದನಾ ಇಂದು ದೈಹಿಕವಾಗಿ ನಮ್ಮ ನಡುವೆ ಇರದಿರಬಹುದು. ಆದರೆ, ನನ್ನೊಂದಿಗೆ ಹಾಗೂ ನನ್ನ ಪುತ್ರ ಶೌರ್ಯನ ಜತೆ ಸದಾ ಇದ್ದೇ ಇರುತ್ತಾಳೆ.

ಸ್ಪಂದನಾ ಸಾ-ವಿಗೀಡಾದ 6ನೇ ತಾರೀಖು ಪ್ರತಿ ತಿಂಗಳು ಬಂದಾಗ ತುಂಬಾ ನೋವಾಗುತ್ತದೆ. ಅದು ಸಹಜವೂ ಹೌದು, ಆದರೆ, ಇನ್ನುಳಿದ ದಿನ ಕೆಲಸ, ಫ್ರೆಂಡ್ಸ್​ ಅಂತಾ ಬಿಜಿಯಾಗಿರುವುದರಿಂದ ನೋವು ಕಾಡುವುದಿಲ್ಲ. ಆದರೆ, 6ನೇ ತಾರೀಖು ಅಂದರೆ ಸಾಕು ಮನಸ್ಸಿನಲ್ಲಿ ನೋವು ತುಂಬಿಕೊಳ್ಳುತ್ತದೆ. ನನ್ನ ಜೀವನದಲ್ಲಿ ನಾನು ತುಂಬಾ ಇಷ್ಟಪಟ್ಟ ಮತ್ತು ತುಂಬಾ ಗೌರವದಿಂದ ಕಂಡಂತಹ ವ್ಯಕ್ತಿ ಅವಳು. ಅವಳಿಲ್ಲದ ದಿನಗಳು ನಿಜಕ್ಕೂ ಬೇಸರವಾಗುತ್ತಿದೆ.

ಸ್ಪಂದನಾಗೆ ಸಂಬಂಧಿಸಿದ ಯಾವೊಂದು ವಸ್ತುಗಳನ್ನು ಕಳೆದುಕೊಳ್ಳಲು ನನಗೆ ಇಷ್ಟವಿಲ್ಲ. ಬಟ್ಟೆ, ಆಭರಣಗಳು ಸೇರಿದಂತೆ ಆಕೆಗೆ ಸಂಬಂಧಿಸಿದ ಎಲ್ಲ ವಸ್ತುಗಳನ್ನು ಜೋಪಾನವಾಗಿ ಕಾಪಾಡಿಕೊಂಡಿದ್ದೇನೆ. ಅವುಗಳನ್ನು ನೋಡಿದಾಗಲೆಲ್ಲ ಸ್ಪಂದನಾಳ ನೆನಪಾಗುತ್ತದೆ. ಅಲ್ಲದೆ, ಆಕೆ ನಮ್ಮ ಜತೆಯಲ್ಲಿಯೇ ಇದ್ದಾಳೆ ಎನಿಸುತ್ತದೆ’ ಎಂದಿದ್ದಾರೆ.

Leave a Reply

Your email address will not be published. Required fields are marked *