ತಮಿಳು ನಟ ಸೂರ್ಯರವರ ಮುದ್ದಾದ ಕುಟುಂಬ ಹೇಗಿದೆ ಗೊತ್ತಾ? ಇಲ್ಲಿದೆ ನೋಡಿ ಫ್ಯಾಮಿಲಿ ಫೋಟೋಸ್

ಸಿನಿಮಾರಂಗದಲ್ಲಿರುವ ಸೆಲೆಬ್ರಿಟಿಗಳು ಐಷಾರಾಮಿ ಜೀವನ ನಡೆಸುತ್ತಾರೆ. ಈ ವಿಚಾರದಲ್ಲಿ ತಮಿಳು ನಟ ಸೂರ್ಯ (Surya)ಕೂಡ ಹೊರತಾಗಿಲ್ಲ. ಖ್ಯಾತ ನಟರಾಗಿ ಗುರುತಿಸಿಕೊಂಡು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ನಟ ಸೂರ್ಯರವರಿಗೆ ಎಲ್ಲಿಲ್ಲದ ಬೇಡಿಕೆಯಿದೆ. ದೇಶ ವಿದೇಶದಲ್ಲಿಯೂ ಫ್ಯಾನ್ ಫಾಲೋವರ್ಸ್ ಹೊಂದಿದ್ದಾರೆ. ಇದೀಗ ನಟ ಸೂರ್ಯ ಕುಟುಂಬದ ಫೋಟೋವೊಂದು ವೈರಲ್ ಆಗಿವೆ.

ಈ ಫೋಟೋದಲ್ಲಿ ತಮಿಳು ನಟ ಸೂರ್ಯರವರ ಮುದ್ದಿನ ಮಡದಿ ನಟಿ ಜ್ಯೋತಿಕಾ (Jyothika) ಹಾಗೂ ಇಬ್ಬರೂ ಮಕ್ಕಳನ್ನು ನೋಡಬಹುದು. ಮುದ್ದಿನ ಮಡದಿ ಹಾಗೂ ಮಕ್ಕಳನ್ನು ಹೊಂದಿರುವ ಈ ಫೋಟೋಗೆ ಫ್ಯಾನ್ಸ್ ಮೆಚ್ಚುಗೆ ವ್ಯಕ್ತಪಡಿಸುವ ಮೂಲಕ ಲೈಕ್ಸ್ ನೀಡಿದ್ದಾರೆ. ಈ ಫೋಟೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ.

ನಟ ಸೂರ್ಯ ನಟಿ ಜ್ಯೋತಿಕಾ ಅವರನ್ನು ಪ್ರೀತಿಸಿ ಮದುವೆಯಾದವರು. ಹೌದು, ನಟಿ ವೃತ್ತಿಜೀವನದಲ್ಲಿ ಬೇಡಿಕೆಯಲ್ಲಿರುವಾಗಲೇ ಜ್ಯೋತಿ ಸೂರ್ಯ ಅವರನ್ನು ಮದುವೆಯಾಗಿ ಸಿನಿಮಾರಂಗದಿಂದ ಅಂತರ ಕಾಯ್ದುಕೊಂಡ ನಟಿ ಇವರು. ಸೂರ್ಯ ಹಾಗೂ ಜ್ಯೋತಿಕಾ ಇಬ್ಬರು ಸಹ ಕೆಲವು ಸಿನಿಮಾಗಳಲ್ಲಿ ಜೊತೆಯಾಗಿ ನಟಿಸಿದ್ದು ಈ ಜೋಡಿ ತೆರೆ ಮೇಲೆ ಮಾತ್ರವಲ್ಲದೇ ರಿಯಲ್ ಲೈಫ್ ನಲ್ಲಿಯು ಎಲ್ಲರಿಗೂ ಇಷ್ಟವಾಗಿದೆ.

2006 ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ನಟ ಸೂರ್ಯ ದಂಪತಿಗೆ ಈಗ ಇಬ್ಬರು ಮಕ್ಕಳಿದ್ದಾರೆ. ಒಬ್ಬ ಮಗಳ ದಿಯಾ (Diya), ಒಬ್ಬ ಮಗನ ಹೆಸರು ದೇವ್ (Dev). ಆದರೆ ನಟಿ ಜ್ಯೋತಿಕಾರವರು ಸಿನಿ ಲೋಕದಿಂದ ದೂರ ಉಳಿದು ಸಂಸಾರವನ್ನು ನಿಭಾಯಿಸಿಕೊಂಡು ಹೋಗುವ ಪತಿಗೆ ಎಲ್ಲಾ ಕೆಲಸದಲ್ಲಿ ಯು ಸಾಥ್ ನೀಡುತ್ತಿದ್ದಾರೆ. ಸದ್ಯಕ್ಕೆ ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ಸೂರ್ಯರವರ ಸಿನಿಮಾರಂಗದಲ್ಲಿ ಬೇಡಿಕೆ ಹೆಚ್ಚಿದೆ.

ತಮಿಳು ನಟ ಸೂರ್ಯರವರ ಸಿನಿಮಾ ಯಾವಾಗ ತೆರೆಕಾಣುತ್ತದೆ ಎಂದು ಕಾಯುವವರ ಸಂಖ್ಯೆ ಹೆಚ್ಚಾಗಿದೆ. 1997 ರಲ್ಲಿ ತೆರೆ ಕಂಡ ನೇರಕ್ಕೂ ನೇರ್ (Nerakku Nera) ಸಿನಿಮಾದ ಮೂಲಕ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟರು. ಆದಾದ ಬಳಿಕ ಕೆಲವು ಸಿನಿಮಾಗಳಲ್ಲಿ ಸೋಲು ಕಂಡರೂ ಮತ್ತೆ ತೆರೆ ಮೇಲೆ ಮಿಂಚಿದರು. ತಮಿಳು ಸಿನಿಮಾರಂಗದಲ್ಲಿ ಸಾಲು ಸಾಲು ಅವಕಾಶಗಳನ್ನು ಗಿಟ್ಟಿಸಿಕೊಂಡರು. ಬೇಡಿಕೆಯ ನಟರಾಗಿದ್ದು ಸಾಮಾಜಿಕ ಕೆಲಸದ ಮೂಲಕ ಸುದ್ದಿಯಲ್ಲಿರುತ್ತಾರೆ.

ಬಿಡುವು ಸಿಕ್ಕಾಗಲೆಲ್ಲಾ ನಟ ಸೂರ್ಯರವರು ಕುಟುಂಬದ ಜೊತೆಗೆ ಹೆಚ್ಚು ಸಮಯ ಕಳೆಯುತ್ತಾರೆ. ಐಷಾರಾಮಿಯಾಗಿ ಜೀವನ ನಡೆಸುತ್ತಿರುವ ನಟನು ಸ್ವಂತ ಫಾರ್ಮ್ ಹೌಸ್ ಹೊಂದಿದ್ದಾರೆ. ಸರಳ ವ್ಯಕ್ತಿತ್ವದಿಂದ ಗುರುತಿಸಿಕೊಂಡಿರುವ ನಟ ಸೂರ್ಯರವರಿಗೆ ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳಿದ್ದಾರೆ.

Leave a Reply

Your email address will not be published. Required fields are marked *