ಕನ್ನಡ ಕಿರುತೆರೆ ಲೋಕದಲ್ಲಿ ಸತಿಪತಿಯರಿಬ್ಬರೂ ಬದುಕು ಕಟ್ಟಿಕೊಂಡಿದ್ದಾರೆ. ಹೌದು, ಈ ಸಾಲಿಗೆ ನಟ ಸುರೇಶ್ ರೈ (Suresh Rai) ಹಾಗೂ ನಟಿ ಭವ್ಯಶ್ರೀ ರೈ (Bhavyashre Rai) ಕೂಡ ಸೇರಿಕೊಳ್ಳುತ್ತಾರೆ. ಹೌದು, ಲಕ್ಷ್ಮೀ ಬಾರಮ್ಮ (Lakshmi Baramma) ಸೀರಿಯಲ್‌ನಲ್ಲಿ ಸುರೇಶ್ ರೈ ಯವರು ನಟಿಸುತ್ತಿದ್ದಾರೆ. ಇತ್ತ ನಟಿ ಭವ್ಯಶ್ರೀ ಕೂಡ ವಿಲನ್ ಪಾತ್ರ (Vilan Role) ದಲ್ಲಿ ಮಿಂಚುತ್ತಿದ್ದಾರೆ.
ಇದೀಗ ನಟ ಸುರೇಶ್ ರೈ ಹಾಗೂ ಭವ್ಯಶ್ರೀ ರೈಯವರ ಮದುವೆಯ ಫೋಟೋ (Marriage Photos) ಗಳು ವೈರಲ್ ಆಗಿವೆ. 2010ರಲ್ಲಿ ನಟ ಸುರೇಶ್ ರೈ ಹಾಗೂ ನಟಿ ಭವ್ಯಶ್ರೀ ರೈ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಬಣ್ಣದ ಲೋಕದಲ್ಲಿ ಗುರುತಿಸಿಕೊಂಡಿದ್ದ ಇವರಿಬ್ಬರದ್ದು ಮನೆಯವರೇ ನೋಡಿ ಮಾಡಿದ ಮದುವೆಯಾಗಿತ್ತು.

ನಟ ಸುರೇಶ್ ರೈ ಹಾಗೂ ನಟಿ ಭವ್ಯಶ್ರೀ ರೈ ಮದುವೆಗೆ ಹಿರಿಯ ನಟಿ ಜಯಮಾಲಾ (Jayamala), ಗಿರಿಜಾ ಲೋಕೇಶ್ (Girija Lokesh), ಸ್ವಪ್ನ ದೀಕ್ಷಿತ್ (Swapna Deekshit), ಗ್ರೀಷ್ಮಾ (Greeshma), ಸೃಜನ್ ಲೋಕೇಶ್ (Srujan Lokesh) , ಹರಿಣಿ (Harini) ಸೇರಿದಂತೆ ಕಅನೇಕ ಕಲಾವಿದರು ಭಾಗಿಯಾಗಿ ಈ ಜೋಡಿಗೆ ಶುಭ ಹಾರೈಸಿದ್ದರು. ನಟ ಸುರೇಶ್ ರೈ ಹಾಗೂ ನಟಿ ಭವ್ಯಶ್ರೀ ರೈರವರ ಮದುವೆಯ ಸುಂದರ ಕ್ಷಣದ ಫೋಟೋಗಳು ವೈರಲ್ ಆಗಿದ್ದು ಫ್ಯಾನ್ಸ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಅದಲ್ಲದೇ ಈ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಟ್ಟು ಹದಿಮೂರು ವರ್ಷಗಳಾಗಿದ್ದು ಸುಖವಾಗಿ ಸಂಸಾರ ಮಾಡುತ್ತಿದ್ದಾರೆ. ಸುರೇಶ್ ರೈ ಹಾಗೂ ಭವ್ಯಶ್ರೀ ರೈ ಮದುವೆ ಬಗ್ಗೆ ಇಬ್ಬರೂ ಕುಟುಂಬಸ್ಥರು ಮಾತುಕತೆ ನಡೆಸಿದ್ದರು. ಆದರೆ ನಟಿ ಭವ್ಯ ಶ್ರೀ ರೈಯವರಿಗೆ ಮದುವೆಯಾಗಲು ಇಷ್ಟವಿರಲಿಲ್ಲ. ಕಿರುತೆರೆ ಲೋಕದಲ್ಲಿ ಬ್ಯುಸಿಯಾಗಿದ್ದ ನಟಿ ಭವ್ಯಶ್ರೀ ‘’ಮದುವೆ ಸದ್ಯಕ್ಕೆ ಬೇಡ’’ ಎಂದು ನಿರ್ಧರಿಸಿದ್ದರು.

ಈ ಮೊದಲು ಕುಟುಂಬಸ್ಥರು ಒಂದು ಸಂಬಂಧ ನೋಡಿದ್ದರು. ಆದರೆ ಹಠಮಾಡಿ ಭವ್ಯಶ್ರೀಯವರು ಆ ಸಂಬಂಧವನ್ನು ಕ್ಯಾನ್ಸಲ್ ಮಾಡಿಸಿದ್ದರು.ಆದರೆ ಕೊನೆಗೆ ಸುರೇಶ್ ರೈ ಅವರ ವಿಚಾರದಲ್ಲಿ ಭವ್ಯಶ್ರೀಗೆ ಹೇಳದೇನೇ ಮದುವೆಗೆ ಒಪ್ಪಿಗೆ ನೀಡಿದ್ದರು. ಹೀಗಾಗಿ ಕುಟುಂಬಸ್ಥರ ಮಾತಿಗೆ ಕಟ್ಟು ಬಿದ್ದು ಮದುವೆಗೆ ಭವ್ಯಶ್ರೀ ರೈ ಒಪ್ಪಿಗೆ ಸೂಚಿಸಿದ್ದರು.
ಅಚ್ಚರಿಯೆಂದರೆ ನಟಿ ಭವ್ಯಶ್ರೀ ರೈಯವರಿಗೆ ಹುಡುಗ ಯಾರು ಅಂತಾನೆ ಗೊತ್ತಿರಲಿಲ್ಲ , ಆದರೆ ಸುರೇಶ್ ರೈಯವರನ್ನು ಮದುವೆ ಮಂಟಪದಲ್ಲಿಯೇ ಮೊದಲು ನೋಡಿದ್ದು ನಟಿ ಭವ್ಯಶ್ರೀ. ಕೊನೆಗೂ ತಂದೆ ತಾಯಿಯ ಆಸೆಯಂತೆ ನಟಿ ಭವ್ಯಶ್ರೀ ರೈ ಮದುವೆ ಮಾಡಿಕೊಂಡರು.

ಈಗಾಗಲೇ ನಟಿ ಭವ್ಯಶ್ರೀ ರೈಯವರು ಕಾವ್ಯಾಂಜಲಿ, ಕುಂಕುಮ ಭಾಗ್ಯ, ಮನೆಯೊಂದು ಮೂರು ಬಾಗಿಲು, ಅಭಿಮಾನ, ಅರುಂಧತಿ ಸೇರಿದಂತೆ ಅನೇಕ ಧಾರಾವಾಹಿಯಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಅನೇಕ ಸಿನಿಮಾಗಳಲ್ಲಿ ನಟಿ ಭವ್ಯಶ್ರೀ ರೈ ತೆರೆ ಹಂಚಿಕೊಂಡಿದ್ದಾರೆ. ಇತ್ತ ನಟ ಸುರೇಶ್ ರೈ ಕೂಡ ಜೋಕಾಲಿ, ಕುಂಕುಮ ಭಾಗ್ಯ, ಕಾದಂಬರಿ, ಜೋಗುಳ, ರಂಗೋಲಿ ಮುಂತಾದ ಧಾರಾವಾಹಿಗಳಲ್ಲಿ ಸುರೇಶ್ ರೈ ನಟಿಸಿ ಅಭಿಮಾನಿಗಳ ಪ್ರೀತಿ ಸಂಪಾದಿಸಿಕೊಂಡಿದ್ದಾರೆ.
ಸುರೇಶ್ ರೈ ಅವರನ್ನು ಭವ್ಯಶ್ರೀ ರೈ ಅವರ ಅಕ್ಕ ಭಾಗ್ಯಶ್ರೀ ರೈ (Bhagyashree Rai) ಯವರು ಕಿರುತೆರೆ ಲೋಕಕ್ಕೆ ಪರಿಚಯಿಸಿದರು. ತಮ್ಮದೇ ಆದ ಪ್ರೊಡಕ್ಷನ್ ಹೌಸ್ (Production House) ಮೂಲಕ ಕಿರುತೆರೆಗೆ ನಟ ಸುರೇಶ್ ರೈ ಪಾದಾರ್ಪಣೆ ಮಾಡಿದ್ದು, ಸದ್ಯಕ್ಕೆ ಕಿರುತೆರೆಯಲ್ಲಿ ಬ್ಯುಸಿಯಾಗಿದ್ದಾರೆ. ಈ ದಂಪತಿಗಳಿಗೆ ಮುದ್ದಾದ ಮಗನಿದ್ದು, ವೃತ್ತಿ ಜೀವನ ಹಾಗೂ ವೈಯುಕ್ತಿಕ ಜೀವನದಲ್ಲಿ ಒಬ್ಬರಿಗೊಬ್ಬರು ಸಾಥ್ ನೀಡುತ್ತಿದ್ದಾರೆ.