ತನ್ನ ಮಗ ವಿವೇಕ್ ಗೆ ಐಶ್ವರ್ಯ ರೈ ಜೊತೆಗೆ ಇದ್ದ ಸಂಬಂಧದ ಬಗ್ಗೆ ಮೌನ ಮುರಿದ ಹಿರಿಯ ನಟ ಸುರೇಶ್ ಒಬೆರಾಯ್, ಏನು ಹೇಳಿದ್ರು ಗೊತ್ತಾ?

ಬಾಲಿವುಡ್ ನಟಿ ಐಶ್ವರ್ಯಾ ರೈ (Aishwarya Rai) ಹಾಗೂ ಅಭಿಷೇಕ್​ ಬಚ್ಚನ್ (Abhishek Bacchan) ದಾಂಪತ್ಯ ಜೀವನದಲ್ಲಿ ಬಿ-ರುಕು ಮೂಡಿದೆ ಎನ್ನುವ ಸುದ್ದಿಯೊಂದು ಹರಿದಾಡುತ್ತಿದೆ. ಈ ಹಿನ್ನಲೆಯಲ್ಲಿ ಒಂದಲ್ಲ ಒಂದು ಅಪ್ಡೇಟ್ ಗಳು ಹೊರಬೀಳುತ್ತಲೇ ಇದ್ದು, ಈ ಬಗ್ಗೆ ಸೆಲೆಬ್ರಿಟಿ ಜೋಡಿ ಯಾವುದೇ ಪ್ರತಿಕ್ರಿಯೆಯನ್ನು ಈವರೆಗೂ ನೀಡಿಲ್ಲ. ಡೈ- ವೋರ್ಸ್ ವಿಚಾರವು ಸಖತ್ ಸುದ್ದಿಯಾಗುತ್ತಿದ್ದಂತೆ ಐಶ್ವರ್ಯಾ ಅವರ ಹಳೆಯ ವಿಚಾರಗಳು ಮತ್ತೆ ಬೆಳಕಿಗೆ ಬರುತ್ತಿದೆ.

ಹೀಗಿರುವಾಗಲೇ ಹಿರಿಯ ನಟ ಸುರೇಶ್​ ಒಬೆರಾಯ್ (Suresh Oberoi), ಈ ಹಿಂದೆ ತಮ್ಮ ಮಗ ವಿವೇಕ್​ ಒಬೆರಾಯ್​ ಜೊತೆಗೆ ಇದ್ದ ಐಶ್ವರ್ಯಾ ಸಂಬಂಧವನ್ನು ಕೆದಕಿದ್ದಾರೆ. ಅನಿಮಲ್ (Animal) ಸಿನಿಮಾದ ಯಶಸ್ಸಿನಲ್ಲಿರುವ ಸುರೇಶ್​ ಒಬೆರಾಯ್​ ಅವರು ಇತ್ತೀಚೆಗಿನ ಸಂದರ್ಶನವೊಂದರಲ್ಲಿ ಹಲವು ಅಚ್ಚರಿ ಎನಿಸುವ ವಿಷಯಗಳನ್ನು ಬಿಚ್ಚಿಟ್ಟಿದ್ದಾರೆ. ಸಿನಿಮಾದ ಜೊತೆಗೆ ಮಗನ ಜೀವನದ ಬಗ್ಗೆ ಮಾತನಾಡಿದ್ದಾರೆ.

ಈ ಕುರಿತಂತೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಸುರೇಶ್​ ಒಬೆರಾಯ್​, ‘ಐಶ್ವರ್ಯಾ ಜೊತೆಗೆ ತಮ್ಮ ಪುತ್ರ ವಿವೇಕ್​ (Vivek) ಸಂಬಂಧದ ವದಂತಿಯ ಬಗ್ಗೆ ನನಗೆ ತಿಳಿದಿರಲಿಲ್ಲ ಎಂದಿದ್ದಾರೆ. ಆದಾಗ್ಯೂ ರಾಮ್​ ಗೋಪಾಲ್​ ವರ್ಮಾ ಬಹಿರಂಗಪಡಿಸಿದ ಬಳಿಕ ಗೊತ್ತಾಯಿತು. ಆದರೂ ಈ ವಿಚಾರದಲ್ಲಿ ನಾನು ಆರ್​ಜಿವಿಗೆ ಅರ್ಥ ಮಾಡಿಸಲು ಪ್ರಯತ್ನಿಸಿದೆ’ ಎಂದಿದ್ದಾರೆ.

ಅಷ್ಟೇ ಅಲ್ಲದೇ ಸಲ್ಮಾನ್​ ಖಾನ್​ (Salman Khan) ಜೊತೆಗಿನ ತಮ್ಮ ಸಂಬಂಧದ ಬಗ್ಗೆ ಮಾತನಾಡಿದ ಸುರೇಶ್​ ಒಬೆರಾಯ್​, ‘ನನ್ನೊಂದಿಗೆ ಮಾತನಾಡುವಾಗ ಖಾನ್​ ಯಾವಾಗಲೂ ಗೌರವ ಸೂಚಿಸುತ್ತಾರೆ. ವಿವೇಕ್ ಪ್ರ-ಕರಣದಲ್ಲಿ ನಾನು ಆ ಸಮಯದಲ್ಲಿ ಹಾಗೂ ಈಗಲೂ ಸಹ ಸಮಾಧಾನದಲ್ಲಿದ್ದೇನೆ. ಇಂದಿಗೂ ನಾವೆಲ್ಲ ಒಬ್ಬರಿಗೊಬ್ಬರು ಬಹಳ ಚೆನ್ನಾಗಿಯೇ ಭೇಟಿಯಾಗುತ್ತೇವೆ. ಸಲ್ಮಾನ್ ಖಾನ್ ನನ್ನನ್ನು ಭೇಟಿಯಾದಾಗಲೆಲ್ಲಾ ಸಿ-ಗರೇಟ್ ಬಚ್ಚಿಟ್ಟು ಗೌರವಾರ್ಥವಾಗಿ ಮಾತನಾಡುತ್ತಾರೆ. ಈಗಾಗಲೇ ಸಾಕಷ್ಟು ಘಟನೆಗಳು ಘಟಿಸಿವೆ. ಆದರೆ, ನನ್ನ ಸಂಬಂಧಗಳು ಉತ್ತಮವಾಗಿವೆ ‘ ಎಂದಿದ್ದಾರೆ.

ಬಾಲಿವುಡ್ ಬಿಗ್ ಬಿ ಅಮಿತಾಭ್​ ಬಚ್ಚನ್ (Amithabh Bacchan) ಬಗ್ಗೆಯೂ ಹಿರಿಯ ನಟ ಮಾತನಾಡಿದ್ದು, ‘ಅಮಿತಾಭ್​ ಎಂದಿಗೂ ಸ್ನೇಹಿತರಾಗಿರಲಿಲ್ಲ. ನಾವಿಬ್ಬರು ಸಹ-ನಟರಾಗಿದ್ದೆವು. ಅಂದರೆ, ವೃತ್ತಿಪರ ಸ್ನೇಹವನ್ನು ಹೊಂದಿದ್ದೆವು. ನನ್ನ ಸ್ನೇಹ ಡ್ಯಾನಿ ಮುಕುಲ್ ಜೊತೆ ಇತ್ತು. ಹೌದು, ಬಚ್ಚನ್ ಅವರು ತಮ್ಮ ಹುಟ್ಟುಹಬ್ಬಕ್ಕೆ ನನ್ನನ್ನು ಆಹ್ವಾನಿಸಿದರು. ನಾವು ಭೇಟಿಯಾದಾಗಲೆಲ್ಲ ಒಬ್ಬರಿಗೊಬ್ಬರು ಚೆನ್ನಾಗಿಯೇ ಇರುತ್ತೇವೆ’ ಎಂದಿದ್ದಾರೆ.

ಕೊನೆಗೂ ಮಗನ ಜೀವನದಲ್ಲಿಯಾದ ಘಟನೆಯ ಬಗ್ಗೆ ತಂದೆ ಸುರೇಶ್ ಒಬೆರಾಯ್ ಅವರು ಮೌನ ಮುರಿದು ಮನಸ್ಸಿನ ಮಾತನ್ನು ಬಿಚ್ಚಿಟ್ಟಿದ್ದಾರೆ. ಈಗಾಗಲೇ ಐಶ್ವರ್ಯ ರೈಯವರ ಡೈ-ವೋರ್ಸ್ ವಿಚಾರವು ಸದ್ದು ಮಾಡುತ್ತಿರುವಾಗಲೇ ಈ ಬಗ್ಗೆ ಹಿರಿಯ ನಟರೊಬ್ಬರು ಮಾತನಾಡಿದ್ದು ಮತ್ತಷ್ಟು ಚರ್ಚೆಗೆ ಕಾರಣವಾಗಿದೆ. ಅದಲ್ಲದೇ ತಮ್ಮ ವೈವಾಹಿಕ ಜೀವನದಲ್ಲಿನ ಈ ಸುದ್ದಿಗಳು ನಿಜಾನಾ ಅಥವಾ ಸುಳ್ಳಾ ಎನ್ನುವುದನ್ನು ಐಶ್ವರ್ಯಾ ರೈ ಹಾಗೂ ಅಮಿತಾಭ್ ಬಚ್ಚನ್​ ಕುಟುಂಬ ಸ್ಪಷ್ಟನೆ ನೀಡಬೇಕು.

Leave a Reply

Your email address will not be published. Required fields are marked *