ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ನಟನಾಗಿ ಬೆಳೆಯ ಬೇಕಾಗಿದ್ದ ಯುವ ನಟ ನಟ ಸೂರಜ್‌ಗೆ ಏನಾಗಿದೆ ನೋಡಿ!! ನಿಜಕ್ಕೂ ಕಣ್ಣೀರು ಸುರಿಸುತ್ತಿರಾ!!!

ಪಾರ್ವತಮ್ಮ ರಾಜ್ ಕುಮಾರ್ ( Parvatamma Raj Kumar)ಸಹೋದರ, ನಿರ್ಮಾಪಕ ಎಸ್. ಎ ಶ್ರೀನಿವಾಸ್ (Producer A Shreenivas) ಪುತ್ರ ಹಾಗೂ ನಟ ಧ್ರುವನ್ ಅಲಿಯಾಸ್ ಸೂರಜ್ (Dhruvan Aliyas Suraj) ಅವರ ಬದುಕಿನಲ್ಲಿ ಯಾರು ಕೂಡ ಊಹೆ ಮಾಡದ ಘಟನೆಯೊಂದು ನಡೆದಿತ್ತು. ಮೈಸೂರು (Mysore) ಬಳಿ ನಡೆದ ರಸ್ತೆ ಅ-ಪಘಾತದಲ್ಲಿ ಸೂರಜ್ ತೀ-ವ್ರವಾಗಿ ಗಾಯಗೊಂಡಿದ್ದರು.

ಸೂರಜ್ ಬಲಗಾಲಿಗೆ ತೀವ್ರ ಪೆಟ್ಟು ಬಿದ್ದಿದ್ದರಿಂದ ಕಾಲು ಕ-ತ್ತರಿಸುವುದು ವೈದ್ಯರಿಗೆ ಅನಿವಾರ್ಯವಾಗಿತ್ತು. ಆದರೆ ಇದೀಗ ಆಸ್ಪತ್ರೆಯ ವೈದ್ಯರು ಸೂರಜ್ ಅವರ ಆರೋಗ್ಯ ಸ್ಥಿತಿ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಇತ್ತೀಚೆಗಷ್ಟೇ ನಟ ಸೂರಜ್‌ ಬುಲೆಟ್‌ನಲ್ಲಿ ಊಟಿಗೆ ಪ್ರವಾಸ ತೆರಳುತ್ತಿದ್ದರು. ಚಾಮರಾಜನಗರ (Chamarajanagara) ಜಿಲ್ಲೆಯ ಬೇಗೂರು (Beguru) ಸಮೀಪದ ಹಿರಿಕಾಟಿ ಗೇಟ್ ಬಳಿ ಟ್ರಾಕ್ಟರನ್ನು ಹಿಂದಿಕ್ಕಿ ಮುಂದೆ ಚಲಿಸುವಾಗ ಎದುರಿನಿಂದ ವೇಗವಾಗಿ ಟಿಪ್ಪರ್ ಬಂದಿತ್ತು. ಈ ಟಿಪ್ಪರ್ ಸೂರಜ್‌ ಚಲಿಸುತ್ತಿದ್ದ ಬೈಕ್‌ಗೆ ಡಿ-ಕ್ಕಿ ಹೊಡೆದಿತ್ತು.

ಅಷ್ಟೇ ಅಲ್ಲದೇ ಸೂರಜ್ ಅವರ ಕಾಲಿನ ಮೇಲೆ ಟಿಪ್ಪರ್ ಹ-ರಿದು ಹೋಗಿತ್ತು. ಈ ಘಟನೆಯ ಕುರಿತಂತೆ ಮಾಹಿತಿ ಸಿಕ್ಕ ತಕ್ಷಣ ಪೊಲೀಸರು ಮೈಸೂರಿನ ಕೆಆರ್‌ ಆಸ್ಪತ್ರೆಗೆ ದಾಖಲಿಸಿ ನಂತರ ಮಣಿಪಾಲ್‌ ಆಸ್ಪತ್ರೆಗೆ ಸೂರಜ್ ಅವರನ್ನು ರವಾನಿಸಿದ್ದರು. ಆದರೆ ಅಪಘಾತದಲ್ಲಿ ಸೂರಜ್ ಅವರ ಕಾಲಿಗೆ ತೀವ್ರವಾದ ಪೆಟ್ಟಾಗಿತ್ತು. ಹೀಗಾಗಿ ಅವರ ಕಾಲನ್ನು ತೆಗೆಯುವ ಸನ್ನಿವೇಶವು ಏರ್ಪಟ್ಟಿತ್ತು.

ಈ ಬಗ್ಗೆ ಮಾಹಿತಿ ನೀಡಿರುವ ಆಸ್ಪತ್ರೆ ವೈದ್ಯ ಅಜಯ್ ಹೆಗಡೆ (Doctor Ajay Hegde) , “ಸೂರಜ್ ಅವರ ಕಾಲಿಗೆ ಪೆಟ್ಟಾಗಿದ್ದರಿಂದ ಸೂರಜ್‌ ಅವರ ಕಾಲನ್ನು ತೆಗೆಯಬೇಕಾಯ್ತು. ಈ ಮೊಣಕಾಲು ತೆಗೆದ ವಿಚಾರವನ್ನು ಅವರಿಗೆ ನಾಲ್ಕು ದಿನಗಳ ನಂತರ ಹೇಳಲಾಯ್ತು ಎಂದು ಅಪ್‌ಡೇಟ್‌ ನೀಡಿದ್ದಾರೆ.ಅಪಘಾ-ತವಾದ ಕಾಲಿನ ಭಾಗದಲ್ಲಿ 6 ಇಂಚಿನಷ್ಟು ಮೂಳೆ ಹಾಗೂ ನರಗಳೇ ಇರಲಿಲ್ಲ, ಆದ್ದರಿಂದ ಕಾಲು ತೆಗೆಯುವುದು ಬಿಟ್ಟರೆ ಬೇರೆ ದಾರಿ ಇರಲಿಲ್ಲ“.

ಮೊಣಕಾಲನ್ನು ಕ-ತ್ತರಿಸಿದ್ದನ್ನು ಅವರಿಗೆ 4 ದಿನಗಳ ನಂತರ ಹೇಳಲಾಯ್ತು. ಅವರಿಗೆ ಇನ್ನೂ ಚಿಕಿತ್ಸೆ ಅವಶ್ಯಕತೆ ಇದೆ. ಆದರೆ ಸೂರಜ್‌ ಅಪಾಯದಿಂದ ಪಾರಾಗಿದ್ದಾರೆ” ಎಂದಿದ್ದಾರೆ ವೈದ್ಯರು. ಈ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಬೇಗೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಟಿಪ್ಪರ್ ಚಾಲಕನನ್ನು ವಶಕ್ಕೆ ತೆಗೆದು ಕೊಂಡಿದ್ದಾರೆ.

ನಟ ಸೂರಜ್‌ ಅವರು ಕನ್ನಡ ಸಿನಿಮಾರಂಗದಲ್ಲಿ ಗುರುತಿಸಿಕೊಂಡವರು. ಭಗವಾನ್‌ ಶ್ರೀ ಕೃಷ್ಣ ಪರಮಾತ್ಮ ( Bhagavan Shreekrishna Paramatma) ಸಿನಿಮಾ ಮೂಲಕ ಸೂರಜ್‌ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದರು. ಆದರೆ ಈ ಸಿನಿಮಾವು ಇನ್ನಷ್ಟೇ ತೆರೆಗೆ ಬರಬೇಕಾಗಿದೆ. ಆದರೆ ರಸ್ತೆ ಅ-ಪಘಾತವು ಸೂರಜ್ ಅವರ ಬದುಕಿನ ದಿಕ್ಕನೆ ಬದಲಾಯಿಸಿದೆ ಎಂದರೆ ತಪ್ಪಿಲ್ಲ.

Leave a Reply

Your email address will not be published. Required fields are marked *