ಎಕ್ಸ್‌ಕ್ಯೂಸ್ ಮಿ ಸಿನಿಮಾ ಖ್ಯಾತಿಯ ನಟ ಸುನಿಲ್ ರಾವ್ ಅವರ ಮುದ್ದಾದ ಕುಟುಂಬ ಹೇಗಿದೆ ಗೊತ್ತಾ? ಇಲ್ಲಿದೆ ಅಪರೂಪದ ಫೋಟೋ

ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಟ, ಗಾಯಕ ಮತ್ತು ಗೀತಸಾಹಿತಿಯೆಂದರೆ ಅದುವೇ ಸುನಿಲ್ ರಾವ್ (Sunil Rao). ನಟ ಸುನಿಲ್ ರಾವ್ ಎಂದರೆ ಅಷ್ಟಾಗಿ ಯಾರಿಗೂ ಕೂಡ ನೆನಪಿಗೆ ಬರುವುದಿಲ್ಲ. ಅದೇ ಎಕ್ಸ್‌ಕ್ಯೂಸ್ ಮಿ (Excuse Me) ಯನ್ನು ನಟಿಸಿದ ನಟ ಎಂದ ಕೂಡಲೇ ಸುನಿಲ್ ರಾವ್ ಆವರ ಮುಖ ಕಣ್ಣ ಮುಂದೆ ಬರುತ್ತದೆ. ಇದೀಗ ಸ್ಯಾಂಡಲ್ ವುಡ್ ನಲ್ಲಿ ಮತ್ತೆ ಸಕ್ರಿಯರಾಗಿದ್ದಾರೆ ನಟ ಸುನಿಲ್ ರಾವ್.

ಸದ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ನಟ ಸುನಿಲ್ ರಾವ್ ಅವರ ಮುದ್ದಾದ ಕುಟುಂಬದ ಫೋಟೋವೊಂದು ವೈರಲ್ ಆಗಿವೆ. ಈ ಫೋಟೋದಲ್ಲಿ ನಟ ಸುನಿಲ್ ರಾವ್ ಅವರಾ ಕ್ಯೂಟ್ ಫ್ಯಾಮಿಲಿಯನ್ನು ಕಾಣಬಹುದು. ಈ ಫೋಟೋದಲ್ಲಿ ನಟ ಸುನಿಲ್ ರಾವ್ ಅವರು ಸಿಕ್ಕಾಪಟ್ಟೆ ಮಾಡ್ರನ್ ಆಗಿದ್ದಾರೆ. ನಟ ಸುನಿಲ್ ರಾವ್ ದಂಪತಿಗಳ ಫೋಟೋವು ಐನ್ನೂರಕ್ಕೂ ಅಧಿಕ ವ್ಯೂಸ್ ಕಂಡಿದೆ.

ನಟ ಸುನಿಲ್ ರಾವ್ ಅವರ ಸಿನಿಕೆರಿಯರ್ ಬಗ್ಗೆ ಹೇಳುವುದಾದರೆ, ಬಾಲನಟನಾಗಿ ಕನ್ನಡ ಚಿತ್ರರಂಗ ಪ್ರವೇಶಿಸಿದ್ದರು. ನಂತರ ಕೆಲವು ಕಿರುತೆರೆ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡರು. ಈ ನಟ ಖ್ಯಾತ ಹಿನ್ನಲೆ ಗಾಯಕಿ ಮತ್ತು ಸುಗಮ ಸಂಗೀತಗಾರ್ತಿ ಬಿ ಕೆ ಸುಮಿತ್ರಾ (B.K Sumitra) ರವರ ಪುತ್ರನಾಗಿದ್ದು, ಇವರ ಸಹೋದರಿ ಸೌಮ್ಯ ರಾವ್ (Sowmya Rao) ಕೂಡ ಹಿನ್ನಲೆ ಗಾಯಕಿಯಾಗಿ ಸಕ್ರಿಯವಾಗಿದ್ದಾರೆ. ಜಯನಗರದ ನ್ಯಾಷನಲ್ ಕಾಲೇಜಿನ ವಿಧ್ಯಾಭ್ಯಾಸ ಮುಗಿಸಿದ ಗಾಯಕರಾಗಿ ಎಂಟ್ರಿ ಕೊಟ್ಟರು.ಬಾಲನಟನಾಗಿ `ಕೆಂಡದ ಮಳೆ’ (Kendada Male) ಮತ್ತು `ಏಳು ಸುತ್ತಿನ ಕೋಟೆ’ (Elu Suttina Kote) ಮುಂತಾದ ಚಿತ್ರಗಳಲ್ಲಿ ನಟಿಸಿದ ಸೈ ಎನಿಸಿಕೊಂಡರು. 2003 ರಲ್ಲಿ ಬಾಲಿವುಡ್ ಚಿತ್ರ ಫ್ರೀಕಿ ಚಕ್ರ (Freeki Chakra) ಚಿತ್ರದ ಮೂಲಕ ಸಿನಿಪಯಣ ಆರಂಭಿಸಿದರು. ತದನಂತರದಲ್ಲಿ ಕನ್ನಡದಲ್ಲಿ ಪ್ರೀತಿ ಪ್ರೇಮ ಪ್ರಣಯ, ಎಕ್ಸ್‌ಕ್ಯೂಸ್ ಮಿ, ಚಪ್ಪಾಳೆ, ಮಸಾಲಾ ಮುಂತಾದ ಚಿತ್ರಗಳಲ್ಲಿ ನಟಿಸಿ ಸಿನಿ ಪ್ರಿಯರ ಮನಸ್ಸು ಗೆದ್ದುಕೊಂಡರು.

ಆದರೆ ಇತ್ತೀಚೆಗಷ್ಟೇ ನಟ ಸುನಿಲ್ ರಾವ್ ಅವರು ತುರ್ತು ನಿರ್ಗಮನ ((Turtu Nirgamana) ಸಿನಿಮಾದ ಮೂಲಕ ಮತ್ತೆ ಕಮ್ ಬ್ಯಾಕ್ ಮಾಡಿದ್ದರು. ಸದ್ಯಕ್ಕೆ ವೀರ ಸಾರ್ವಕರ್ (Veera Saarvakar) ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾದ ಬಗ್ಗೆ ಮಾತನಾಡಿದ್ದ ನಟ ಸುನಿಲ್ ರಾವ್, ‘ಇದು ನಾನು ಮಾಡುತ್ತಿರುವ ಮೊದಲ ಬಯೋಪಿಕ್, ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಅವರ ಜೀವನದ ಹಲವು ಅಂಶಗಳನ್ನು ಈ ಸಿನಿಮಾದ ಮೂಲಕ ತೋರಿಸಲು ರಾಧಾಕೃಷ್ಣ ಅವರು ಸಿದ್ಧವಾಗಿದ್ದಾರೆ. ಈ ತಿಂಗಳಲ್ಲೇ ಚಿತ್ರೀಕರಣ ಮಾಡಲು ಪ್ಲಾನ್ ಮಾಡಿಕೊಂಡಿದ್ದೇವೆ’ ಎಂದಿದ್ದರು.

‘ಭಾರತದ ಇತಿಹಾಸದಲ್ಲಿ ಪ್ರಮುಖ ವ್ಯಕ್ತಿಯೊಬ್ಬರ ಪಾತ್ರವನ್ನು ನಿರ್ವಹಿಸಲು ನನಗೆ ಸಂತೋಷ. ಒಬ್ಬ ನಟನಾಗಿ, ಒಳ್ಳೆಯ ಪಾತ್ರಗಳಿದ್ದರೆ ನಟಿಸುತ್ತೇನೆ ಎಂದು ಬಹಳ ಹಿಂದೆಯೇ ಹೇಳಿದ್ದೆ. ಅದರಂತೆ ಪಲ್ಲಕ್ಕಿ ಅವರು ಈ ಕಥೆಯನ್ನು ಸಿನಿಮಾ ಮಾಡುತ್ತಿರುವುದಾಗಿ ಹೇಳಿದಾಗ ಖುಷಿಯಾಯಿತು. ಸಾವರ್ಕರ್ ಪಾತ್ರ ನಿರ್ವಹಿಸುವುದು ಸವಾಲಿನ ಕೆಲಸ. ಆದರೆ ಸಮರ್ಥವಾಗಿ ನಿರ್ವಹಿಸಲು ಸಜ್ಜಾಗಿದ್ದೇನೆ’.

‘ಈ ಸಿನಿಮಾಗಾಗಿ ನಾನು ನನ್ನ ಬಾಡಿ ಟ್ರಾನ್ಸ್ಫಾರ್ಮ್ ಮಾಡಿಕೊಳ್ಳಬೇಕು. ಹಾಗಂತ ಹೆಚ್ಚೇನೂ ಅಲ್ಲ. ಎಷ್ಟು ಬೇಕೋ ಅಷ್ಟನ್ನು ಮಾತ್ರ ಎಂದು ನಿರ್ದೇಶಕರು ಹೇಳಿದ್ದಾರೆ. ಚಿತ್ರೀಕರಣದ ಸಮಯದಲ್ಲಿಯೇ ಬಾಡಿ ಬಿಲ್ಡ್ ಮಾಡಿಕೊಳ್ಳಲಿದ್ದೇನೆ. ಈ ಪಾತ್ರದ ಮೇಲೆ ಹಲವು ನಿರೀಕ್ಷೆಗಳಂತೂ ಇರುತ್ತವೆ. ಸ್ಕ್ರಿಪ್ಟ್ ಗೆ ತಕ್ಕಂತೆ ನಾನು ಸಜ್ಜಾಗುತ್ತಿದ್ದೇನೆ’ ಎಂದಿದ್ದರು ಸುನಿಲ್ ರಾವ್.

Leave a Reply

Your email address will not be published. Required fields are marked *