ನಟ ಸೃಜನ್ ಲೋಕೇಶ್ ದಂಪತಿಗಳ ಜೊತೆಗೆ ಶ್ವೇತಾ ಚಂಗಪ್ಪ ದಂಪತಿಗಳು, ಅಪರೂಪದ ಫೋಟೋಗಳು ವೈರಲ್

ಬಣ್ಣದ ಜಗತ್ತು ಎಲ್ಲರನ್ನು ಕೂಡ ಸೆಳೆದು ಬಿಡುತ್ತದೆ. ಆದರೆ ಕೆಲವರು ಈ ಸಿನಿಮಾರಂಗ ನಮ್ಮಂತವರಿಗೆ ಅಲ್ಲ, ಇಲ್ಲಿ ಸ್ಟಾರ್ ಪಟ್ಟ ಗಳಿಸುವುದು ಸುಮ್ಮನೆ ಅಲ್ಲ ಎಂದುಕೊಂಡು ಬಿಡುತ್ತಾರೆ. ಆದರೆ ಕೆಲವರು ಎಲ್ಲವನ್ನು ಎದುರಿಸಿ ಈ ಲೋಕದಲ್ಲಿ ನೇಮ್ ಫೇಮ್ ಸೃಷ್ಟಿಸಿಕೊಂಡಿದ್ದಾರೆ. ಅಂತಹವರ ಸಾಲಿಗೆ ಟಾಕಿಂಗ್ ಸ್ಟಾರ್ ಎಂದೇ ಖ್ಯಾತಿ ಗಳಿಸಿರುವ ನಟ ಸೃಜನ್ ಲೋಕೇಶ್ (Srujan Lokesh) ಕೂಡ ಒಬ್ಬರು.

ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ಬ್ಯುಸಿಯಾಗಿರುವ ನಟ ಸೃಜನ್ ಲೋಕೇಶ್ ವೃತ್ತಿ ಜೀವನದಲ್ಲಿ ಬ್ಯುಸಿಯಾಗಿದ್ದಾರೆ. ಕಿರುತೆರೆಯ ರಿಯಾಲಿಟಿ ಶೋವೊಂದರಲ್ಲಿ ತೀರ್ಪುಗಾರರಾಗಿಯು ಸಕ್ರಿಯರಾಗಿದ್ದಾರೆ. ಬಾಲನಟರಾಗಿ ನಾಲ್ಕು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಅದಲ್ಲದೇ, ನಾಯಕನಟನಾಗಿ 15 ಕ್ಕಿಂತ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.

ಆದರೆ ಇದೀಗ ಸೃಜನ್ ಲೋಕೇಶ್ ದಂಪತಿಗಳ ಜೊತೆಗೆ ನಟ ಶ್ವೇತಾ ಚಂಗಪ್ಪ (Shwetha Changappa) ರವರ ದಂಪತಿಗಳು ಕಾಣಿಸಿಕೊಂಡಿದ್ದಾರೆ. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಈ ದಂಪತಿಗಳು ಮುದ್ದು ಮುದ್ದಾಗಿ ಕ್ಯಾಮೆರಾಗೆ ಪೋಸ್ ನೀಡಿರುವುದನ್ನು ಈ ಫೋಟೋದಲ್ಲಿ ನೋಡಬಹುದು. ಈ ಎರಡು ಕುಟುಂಬದ ಸದಸ್ಯರು ಜೊತೆಯಾಗಿ ಕಾಣಿಸಿಕೊಂಡಿದ್ದು, ಈ ಫೋಟೋಗೆ ಅಭಿಮಾನಿಗಳಿಂದ ಲೈಕ್ಸ್ ಗಳು ಬಂದಿವೆ.

ನಟ ಸೃಜನ್ ಲೋಕೇಶ್ ಅವರು ಕನ್ನಡ (Kannada) ದಲ್ಲಿ ಮಾತ್ರವಲ್ಲದೇ ಪರಭಾಷೆ ಯಲ್ಲಿ ಫೇಮಸ್ ಆಗಿದ್ದಾರೆ. ಈಗಾಗಲೇ ಎರಡು ತಮಿಳು (Tamil) ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಕಿರುತೆರೆಯಲ್ಲಿ ‘ಮಜಾ ವಿತ್ ಸೃಜ’

(Maja With Sruja) ಮತ್ತು ‘ಮಜಾ ಟಾಕೀಸ್’ (Maja Takies) ಶೋ ಮೂಲಕ ಕಿರುತೆರೆ ಪ್ರೇಕ್ಷಕರಿಗೆ ಮತ್ತಷ್ಟು ಹತ್ತಿರವಾಗಿದ್ದಾರೆ. ನೀಲ ಮೇಘ ಶ್ಯಾಮ’ (Neela Megha Shyama) ಚಿತ್ರದಲ್ಲಿ ನಟಿಸುವ ಮೂಲಕ ಕನ್ನಡ ಚಿತ್ರರಂಗದಲ್ಲಿ ನಾಯಕರಾಗಿ ಎಂಟ್ರಿ ಕೊಟ್ಟರು. ಈ ಬಳಿಕ ನವಗ್ರಹ, ಚಿಂಗಾರಿ, ಎದೆಗಾರಿಕೆ, ಎಲ್ಲಿದ್ದೆ ಇಲ್ಲಿ ತನಕ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ನಟನೆಯ ಜೊತೆಗೆ ನಿರ್ಮಾಣ ಹಾಗೂ ನಿರ್ದೇಶನದ ಜವಾಬ್ದಾರಿಯನ್ನು ಕೂಡ ಹೊತ್ತುಕೊಂಡಿದ್ದಾರೆ.

ವೃತ್ತಿ ಜೀವನದ ಜೊತೆಗೆ ಸಂಸಾರಿಕ ಜೀವನವನ್ನು ನಿಭಾಯಿಸಿಕೊಂಡು ಹೋಗುತ್ತಿರುವ ನಟ ಸೃಜನ್ ಲೋಕೇಶ್ ಅವರು ಪ್ರೀತಿಸಿ ಮದುವೆಯಾದವರು. 2008 ರಲ್ಲಿ ಸೃಜನ್ ಲೋಕೇಶ್ ಗ್ರೀಷ್ಮ (Greeshma) ಎಂಬುವವರನ್ನು ಪ್ರೀತಿಸಿ ಮದುವೆಯಾದರು. ಮದುವೆಗೂ ಮುನ್ನ ಸೃಜನ್ ಹಾಗೂ ಗ್ರೀಷ್ಮಾ ಕಾರ್ಯಕ್ರಮವೊಂದರಲ್ಲಿ ಭೇಟಿಯಾಗಿದ್ದರು. ಭೇಟಿಯಾದ ಎರಡು ಮೂರು ದಿನಕ್ಕೆ ಮದುವೆಯ ಬಗ್ಗೆ ಸೃಜನ್ ಗ್ರೀಷ್ಮಾರ ಬಳಿ ಮಾತನಾಡಿ, ಮದುವೆಯಾಗುತ್ತೀಯಾ ಎಂದು ಕೇಳಿದ್ದರಂತೆ.

ಮದುವೆ ಪ್ರಪೋಸಲ್ ಗೆ ಎರಡು ದಿನದಲ್ಲೇ ಓಕೆ ಹೇಳುವ ಗ್ರೀನ್ ಸಿಗ್ನಲ್ ಕೊಟ್ಟಿದ್ದರಂತೆ ಈ ಗ್ರೀಷ್ಮಾ. ನಟ ಸೃಜನ್ ಲೋಕೇಶ್ ದಂಪತಿಗಳಿಗೆ ಇಬ್ಬರೂ ಗಂಡು ಮಕ್ಕಳಿದ್ದಾರೆ. ವೈಯುಕ್ತಿಕ ಜೀವನ ಹಾಗೂ ವೃತ್ತಿ ಜೀವನವನ್ನು ಬ್ಯಾಲೆನ್ಸ್ ಆಗಿ ತೆಗೆದುಕೊಂಡು ಹೋಗುತ್ತಿರುವ ಸೃಜನ್ ಲೋಕೇಶ್ ಅವರಿಗೆ ದೊಡ್ಡ ಸಂಖ್ಯೆಯಲ್ಲಿ ಫ್ಯಾನ್ಸ್ ಬಳಗವಿದೆ.

Leave a Reply

Your email address will not be published. Required fields are marked *