ಇಂತಿ ನಿನ್ನ ಪ್ರೀತಿಯ ಖ್ಯಾತಿಯ ನಟಿ ಸೋನು ಗೌಡರವರ ಮುದ್ದಾದ ಕುಟುಂಬ ಹೇಗಿದೆ ಗೊತ್ತಾ? ಇಲ್ಲಿದೆ ನೋಡಿ ಅಪರೂಪದ ಫೋಟೋ

ಬಣ್ಣದ ಲೋಕ, ಈ ಲೋಕದಲ್ಲಿ ಗುರುತಿಸಿಕೊಂಡ ನಟ ನಟಿಯರ ಬದುಕಿಗೆ ಯಾರಿಗೆ ತಾನೇ ಕುತೂಹಲವಿರುವುದಿಲ್ಲ. ಈಗಾಗಲೇ ಈ ನಟನಾ ಬದುಕಿನಲ್ಲಿ ಸಕ್ರಿಯರಾಗಿರುವ ನಟಿಯರ ಪೈಕಿ ಸೋನು ಗೌಡ (Sonu Gowda) ಕೂಡ ಒಬ್ಬರು. ಸೋನು ಗೌಡರವರ ನಿಜವಾದ ಹೆಸರು ಶ್ರುತಿ ರಾಮಕೃಷ್ಣ (Shruthi Ramakrishna).ಬಣ್ಣದ ಲೋಕದಲ್ಲಿ ಸಕ್ರಿಯರಾಗಿರುವ ನಟಿ ಸೋನು ಗೌಡ ಫೋಟೋ ಶೂಟ್ ಎಂದು ಸುದ್ದಿಯಾಗುವುದಿದೆ.ಸೋಶಿಯಲ್ ಮೀಡಿಯಾದಲ್ಲಿಯು ಆಕ್ಟಿವ್ ಆಗಿದ್ದಾರೆ. ಆಗಾಗ ಫೋಟೋ ಹಾಗೂ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುವ ಮೂಲಕ ಫ್ಯಾನ್ಸ್ ಗಳ ನಿದ್ದೆ ಕದಿಯುತ್ತಾರೆ.

ಇದೀಗ ನಟಿ ಸೋನು ಗೌಡರವರ ಮುದ್ದಾದ ಫ್ಯಾಮಿಲಿ ಫೋಟೋವೊಂದು ವೈರಲ್ ಆಗಿವೆ. ಈ ಫೋಟೋದಲ್ಲಿ ಸೋನು ಗೌಡರವರ ತಂದೆ ತಾಯಿ ಹಾಗೂ ಸಹೋದರಿಯಾಗಿರುವ ಕಿರುತೆರೆಯ ನಟಿ ನೇಹಾ ಗೌಡರವರನ್ನು ಕಾಣಬಹುದು.ಈ ಫೋಟೋಗೆ ನೂರಕ್ಕೂ ಅಧಿಕ ಲೈಕ್ಸ್ ಬಂದಿದೆ. ಈ ಫೋಟೋದಲ್ಲಿ ನಟಿ ಸೋನು ಗೌಡ ಕುಟುಂಬದ ಜೊತೆಗೆ ಎಂಜಾಯ್ ಮಾಡುತ್ತಿರುವುದನ್ನು ಕಾಣಬಹುದು.

ನಟಿ ಸೋನು ಗೌಡರವರ ಹಿನ್ನಲೆಯನ್ನು ಗಮನಿಸುವುದಾದರೆ, 23 ಮಾರ್ಚ್ 1990 ಬೆಂಗಳೂರಿನಲ್ಲಿ ಜನಿಸಿದರು. ಬಾಲ್ಯದ ವಿದ್ಯಾ ಬ್ಯಾಸವನ್ನೆಲ್ಲಾ ಬೆಂಗಳೂರಿನ ಮೌಂಟ್ ಕಾರ್ಮೆಲ್ ಶಾಲೆಯಲ್ಲಿ ಮುಗಿಸಿದರು. ಇವರ ತಂದೆ ರಾಮಕೃಷ್ಣ ಕನ್ನಡ ಚಿತ್ರರಂಗದಲ್ಲಿ ಕೇಶ ವಿನ್ಯಾಸ ಮಾಡುವ ಮೂಲಕ ಸಕ್ರಿಯರಾಗಿದ್ದರು. ತಂದೆ ಚಿತ್ರರಂಗದಲ್ಲಿದ್ದ ಸಕ್ರಿಯರಾಗಿದ್ದರು. ಹೀಗಾಗಿ ಸೋನು ಗೌಡ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟು ಬದುಕು ಕಟ್ಟಿಕೊಂಡರು.

ಕನ್ನಡ (Kannada) ಮಾತ್ರವಲ್ಲದೇ, ತೆಲುಗು (Telugu), ತಮಿಳು (Tamil), ಮಲಯಾಳಂ (Malayalam) ಚಿತ್ರರಂಗದಲ್ಲಿ ತೊಡಗಿಸಿಕೊಂಡಿದ್ದಾರೆ. 2008 ರಲ್ಲಿ ಇಂತಿ ನಿನ್ನ ಪ್ರೀತಿಯ (Inti Ninna Preethiya) ಸಿನಿಮಾದಲ್ಲಿ ಪೋಷಕ ಪಾತ್ರದಲ್ಲಿ ನಟಿಸಿದರು.ಆದಾದ ಬಳಿಕ ಪರಮೇಶಿ ಪಾನ್ ವಾಲ (Parameshi Pan Wala), ಗುಲಾಮ (Gulama) ಅನೇಕ ಸಿನಿಮಾಗಳಲ್ಲಿ ಕಾಣಿಸಿಕೊಂಡರು. ಈ ಹಿಂದೆ ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ರಾಜನಂದಿನಿ ಪಾತ್ರದಲ್ಲಿ ನಟಿಸಿದ್ದರು.

ಸಿನಿಮಾರಂಗದಲ್ಲಿ ಹೆಸರು ಸಂಪಾದಿಸಿಕೊಂಡರೂ ವೈಯುಕ್ತಿಕ ಜೀವನದಲ್ಲಿ ಸಾಕಷ್ಟು ನೋವನ್ನು ಉಂಡು ಸದ್ಯಕ್ಕೆ ವೃತ್ತಿ ಜೀವನದತ್ತ ಗಮನ ಹರಿಸುತ್ತಿದ್ದಾರೆ. ಇದೀಗ ನಟಿ ಸೋನು ಗೌಡರವರಿಗೆ ಸಾಲು ಸಾಲು ಸಿನಿಮಾ ಅವಕಾಶಗಳು ಬರುತ್ತಿದ್ದು, ವೃತ್ತಿ ಜೀವನದಲ್ಲಿ ಬ್ಯುಸಿಯಾಗಿದ್ದಾರೆ.

Leave a Reply

Your email address will not be published. Required fields are marked *