ಬಿಗ್ ಬಾಸ್ ಮನೆಯಿಂದ ಔಟ್ ಆಗಿ ಹೊರ ಬಂದಿರುವ ಸ್ನೇಹಿತ್ ಗೌಡ ಪಡೆದ ಸಂಭಾವನೆ ಎಷ್ಟು ಗೊತ್ತಾ? ಅಬ್ಬಾ ಲಾಟರಿ!!

ಬಿಗ್ ಬಾಸ್ ಸೀಸನ್ 10 (Bigg Boss Sisan 10) ಕ್ಕೆ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದ ಸ್ನೇಹಿತ್ ಬಗ್ಗೆ ಎಲ್ಲರಿಗೂ ಕೂಡ ಚಿರಪರಿಚಿತರಾಗಿದ್ದಾರೆ. ಹೌದು, ನಟ, ಮಾಡೆಲ್ ಸ್ನೇಹಿತ್ ಗೌಡ (Snehith Gowda) ಬಿಗ್ ಬಾಸ್ ಮನೆಯಲ್ಲಿ ಚೆನ್ನಾಗಿ ಆಟ ಆಡಿದ್ದಾರೆ. ಈ ಬಾರಿಯ ಸೀಸನ್’ನ ಮೊದಲ ಕ್ಯಾಪ್ಟನ್ ಆಗಿಯೂ ಆಯ್ಕೆಯಾಗಿದ್ದ ಸ್ನೇಹಿತ್ ಅವರು ಬಿಗ್ ಬಾಸ್ ಮನೆಯಿಂದ ಹೊರ ಬರುವಾಗಲೂ ಕ್ಯಾಪ್ಟನ್ ಆಗಿದ್ದರು.

ಆದರೆ ಬಿಗ್ ಬಾಸ್ ಮನೆಯಲ್ಲಿ ತಮ್ಮ ಆಟದ ರೀತಿಯಿಂದ ಹಾಗೂ ವಿನಯ್ ಅವರಿಗೆ ಚಮಚ ಗಿರಿ ಮಾಡುತ್ತಿದ್ದಾರೆ ಎನ್ನುವ ಕಾರಣಕ್ಕೆ ಟ್ರೋಲ್ ಆಗಿದ್ದ ಇವರು ಕೊನೆಗೂ ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದಾರೆ. ಬಿಗ್ ಬಾಸ್​ ಕನ್ನಡದ ಸೀಸನ್​ 10ರಲ್ಲಿ 9ನೇ ವಾರದಲ್ಲಿ ಮನೆಯಿಂದ ಎಲಿಮಿನೇಟ್ ಆಗಿ ಹೊರಬಂದ ಸ್ನೇಹಿತ್​, ಅವರು ಸುದ್ದಿ ಮಾಧ್ಯಮಗಳಿಗೆ ಸಂದರ್ಶನ (Interview) ನೀಡುತ್ತಿದ್ದಾರೆ.

ಈ ವೇಳೆಯಲ್ಲಿ ಬಿಗ್ ಬಾಸ್ ಮನೆಯಲ್ಲಿ ತಮಗಾದ ಅನುಭವವನ್ನು ಬಿಚ್ಚಿಟ್ಟಿದ್ದು, 64 ದಿನ ಬಿಗ್‌ಬಾಸ್ ಮನೆಯಲ್ಲಿದ್ದು ಹೊರಗೆ ಬಂದಿದ್ದೀನಿ. ಒಂದು ಮೊಮೆಂಟ್‌ನಲ್ಲಿಯೂ ನನಗೆ ಪಶ್ಚಾತ್ತಾಪ ಕಾಡ್ತಿಲ್ಲ. ಪ್ರತಿ ವಾರವನ್ನು ನಾನು ನನ್ನ ಕೊನೆಯ ವಾರ ಎಂದುಕೊಂಡೇ ಆಡಿದ್ದೇನೆ. ಒಂದು ವಾರ ಗೆದ್ದಿರಬಹುದು, ಒಂದು ವಾರ ಸೋತಿರಬಹುದು. ಎಲ್ಲೋ ಒಳಗಡೆ ಫೀಲಿಂಗ್ ಇತ್ತು. ಸಂಜೆ ಅಲ್ಲಿ ಕೂತಾಗ, ಈವತ್ತು ಹೊರಗೆ ಹೋಗಿ ತಾಜಾ ಗಾಳಿ ಉಸಿರಾಡುತ್ತೇನೆ ಎಂದು ಅನಿಸಿತ್ತು.

ನನ್ನ ಇನ್‌ಸ್ಟಿಂಕ್ಟ್‌ ತುಂಬ ಸ್ಟ್ರಾಂಗ್ ಇದೆ. ಆ ಇನ್‌ಸ್ಟಿಂಕ್ಟ್‌ ಈವತ್ತು ಎಲ್ಲೋ ಹೊಡಿತಿತ್ತು, ಈವತ್ತೇ ನನ್ನ ಲಾಸ್ಟ್‌ ಡೇ ಅಂತ. ಅದೇ ರೀತಿ ಆಯಿತು’ ಎಂದಿದ್ದಾರೆ. ‘ನನಗೆ ಕ್ಯಾಪ್ಟನ್ ಆಗಿ ದುಪ್ಪಟ್ಟು ಅಧಿಕಾರ ಕೊಟ್ಟಾಗ ಒಂದಷ್ಟು ತಪ್ಪುಗಳನ್ನು ಮಾಡಿದ್ದೇನೆ. ಆ ತಪ್ಪುಗಳಿಂದ ಕೆಲವರು ತೊಂದರೆಯನ್ನೂ ಅನುಭವಿಸಿದ್ದಾರೆ. ಆ ನೋವು ನನಗೆ ಕೊನೆಯತನಕ ಕಾಡುತ್ತದೆ. ಅದೊಂದನ್ನು ಬಿಟ್ಟರೆ, ನನ್ನ ಪ್ರಕಾರ ನನ್ನ ಫ್ರೆಂಡ್ಸ್ ಜತೆ ಹೇಗಿರ್ತೀನೋ ಹಾಗೇ ಇರ್ತಾಯಿದ್ದೆ. ಅವರಿಗೋಸ್ಕರ ಜೀವಕೊಡಲೂ ಸಿದ್ಧವಾಗ್ತಿದ್ದೆ.

ಯಾರು ಆಗಲ್ವೋ ಅವ್ರು ಆಗಲ್ಲ ಅಷ್ಟೆ. ತೀರಾ ಗೇಮ್‌ಗೋಸ್ಕರ ರಾಜಿ ಮಾಡಿಕೊಂಡಿಲ್ಲ.ನನ್ನ ಫ್ರೆಂಡ್ಸ್‌ಗೆ ಕೊನೆ ಕ್ಷಣದ ತನಕವೂ ನಿಷ್ಠನಾಗಿದ್ದೆ. ನಂಗೆ ಯಾರು ಆಗಲ್ವೋ ಅವರನ್ನು ಅವಾಯ್ಡ್ ಮಾಡ್ತಿದ್ದೆ’ ಎಂದು ಹೇಳಿದ್ದಾರೆ. ಬಿಗ್ ಬಾಸ್ ಮನೆಯಿಂದ ಹೊರ ಬಂದಿರುವ ಸ್ನೇಹಿತ್ ಗೌಡರವರು ಪಡೆದಿರುವ ಸಂಭಾವನೆ (Remuneration) ಯ ಬಗ್ಗೆ ಚರ್ಚೆಯಾಗುತ್ತಿವೆ. ಬಲ್ಲ ಮೂಲಗಳ ಪ್ರಕಾರ ಸ್ನೇಹಿತ್ ಪ್ರತೀ ವಾರಕ್ಕೆ 2 ಲಕ್ಷ ರೂ ಸಂಭಾವನೆ ಪಡೆಯುತ್ತಿದ್ದರು. ಹೀಗಾಗಿ 9 ವಾರಗಳಿಗೆ ಸ್ನೇಹಿತ್ ಬರೋಬ್ಬರಿ 21 ಲಕ್ಷ ರೂ. ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ.

Leave a Reply

Your email address will not be published. Required fields are marked *