ಸ್ಯಾಂಡಲ್ ವುಡ್ ನಬಹುಬೇಡಿಕೆಯ ನಟಿಯರಲ್ಲಿ ಡಿಂಪಲ್ ಕ್ವೀನ್ ರಚಿತಾ ರಾಮ್ (Dimple Queen Rachitha Ram) ಕೂಡ ಒಬ್ಬರು. ವೃತ್ತಿ ಜೀವನದಲ್ಲಿ ಬ್ಯುಸಿಯಾಗಿರುವ ನಟಿ ರಚಿತಾ ರಾಮ್ ಅವರಿಗೆ ದೊಡ್ಡ ಸಂಖ್ಯೆಯಲ್ಲಿ ಫ್ಯಾನ್ಸ್ ಫಾಲ್ಲೋರ್ಸ್ ಹೊಂದಿದ್ದಾರೆ. ನಟಿ ರಚಿತಾ ರಾಮ್ ಅವರ ಸಿನಿಮಾವೆಂದರೆ ಕಾದು ಕುಳಿತಿರುತ್ತಿರುತ್ತಾರೆ ಅವರ ಅಭಿಮಾನಿಗಳು.
ಆದರೆ ಇದೀಗ ನಟಿ ರಚಿತಾ ರಾಮ್ ಅವರಿಗೆ ನಟ ಶ್ರೀನಗರ ಕಿಟ್ಟಿ (Shreenagar Kitty) ಯವರು ದುಬಾರಿ ಬೆಲೆಯ ಕಾರೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ. ನಟಿಗೆ ಕಾರನ್ನು ಉಡುಗೊರೆಯಾಗಿ ನೀಡಿದ್ದು ನಿಜಾನಾ ಇದೆಲ್ಲದರ ಅಸಲಿ ಮಾಹಿತಿಗಾಗಿ ಈ ಲೇಖನವನ್ನು ಸಂಪೂರ್ಣವಾಗಿ ಓದಿ. ಹೌದು ಎಲ್ಲರಿಗೂ ತಿಳಿದಿರುವಂತೆ ನಟಿ ರಚಿತಾ ರಾಮ್ ಹಾಗೂ ಶ್ರೀನಗರ ಕಿಟ್ಟಿ ಸಂಜು ವೆಡ್ಸ್ ಗೀತಾ ಪಾರ್ಟ್ 2 (Sanju weds Geetha Part 2) ಸಿನಿಮಾದಲ್ಲಿ ಜೊತೆಯಾಗಿ ನಟಿಸುತ್ತಿದ್ದಾರೆ.
ಸಂಜು ವೆಡ್ಸ್ ಗೀತಾ ಮೊದಲ ಪಾರ್ಟ್ ನಲ್ಲಿ ಶ್ರೀನಗರ ಕಿಟ್ಟಿಗೆ ಜೋಡಿಯಾಗಿ ಮೋಹಕ ತಾರೆ ರಮ್ಯಾ (Ramya) ರವರು ನಟಿಸಿದ್ದರು. ಆ ಸಿನಿಮಾ ಯಶಸ್ಸು ಕಂಡಿತ್ತು. ಸದ್ಯಕ್ಕೆ ಎರಡನೇ ಭಾಗವನ್ನು ತೆರೆ ಮೇಲೆ ತರುವ ಪ್ರಯತ್ನದಲ್ಲಿ ತೊಡಗಿಕೊಂಡಿದೆ ಚಿತ್ರತಂಡ. ಈ ನಡುವೆ ನಟಿ ರಚಿತಾ ರಾಮ್ ಅವರಿಗೆ ನಟ ಶ್ರೀನಗರ ಕಿಟ್ಟಿಯವರು ಕಾರನ್ನು ಉಡುಗೊರೆಯಾಗಿ ನೀಡುವ ಮುನ್ನ ಸುದ್ದಿಯಾಗಿದ್ದಾರೆ.

ಸಂಜು ವೆಡ್ಸ್ ಗೀತಾ ಸಿನಿಮಾದ ಚಿತ್ರೀಕರಣವು ಕನಕಪುರ (Kanakapura) ಬಳಿಯ ಫಾರ್ಮ್ ಹೌಸ್ ನಲ್ಲಿ ಸಂಜು ವೆಡ್ಸ್ ಗೀತಾ ಸಿನಿಮಾದ ಚಿತ್ರೀಕರಣವು ಜೋರಾಗಿಯೇ ನಡೆಯುತ್ತಿದೆ. ಈ ವೇಳೆ ನಾಯಕ ವೆಡ್ಡಿಂಗ್ ಆನಿವರ್ಸರಿ ಕಾರಣದಿಂದಾಗಿ ನಾಯಕಿಗೆ 10 ಕೋಟಿ ರೂ. ಬೆಲೆಬಾಳುವ ಕಾರು ಉಡುಗೊರೆ (Gift) ಯಾಗಿ ನೀಡಿದ್ದಾರೆ. ಈ ದೃಶ್ಯ ಚಿತ್ರೀಕರಣ ಮಾಡಲಾಗಿದ್ದು, ಈ ದೃಶ್ಯವನ್ನು ಛಾಯಾಗ್ರಾಹಕ ಸತ್ಯ ಹೆಗಡೆ ಸೆರೆ ಹಿಡಿದಿದ್ದು ಈ ಫೋಟೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಸದ್ಯಕ್ಕೆ ಸಂಜು ವೆಡ್ಸ್ ಗೀತಾ ಪಾರ್ಟ್ 2 ಈ ಸಿನಿಮಾದ ಬಗ್ಗೆ ಅಭಿಮಾನಿಗಳಿಗೆ ಭಾರಿ ನೀರಿಕ್ಷೆಯಿದ್ದು, ನಾಗಶೇಖರ್ ಮೂವೀಸ್ ಹಾಗೂ ಪವಿತ್ರ ಇಂಟರ್ ನ್ಯಾಷನಲ್ ಮೂವೀಮೇಕರ್ಸ್ ಅವರ ಸಹಕಾರದೊಂದಿಗೆ ಮಹಾನಂದಿ ಕ್ರಿಯೇಶನ್ಸ್ ಅವರು ಸಂಜು ವೆಡ್ಸ್ ಗೀತಾ ಪಾರ್ಟ್ 2 ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ಈ ಚಿತ್ರಕ್ಕೆ ನಿರ್ದೇಶಕ ನಾಗಶೇಖರ್ (Nagashekar) ಅವರು ಕಥೆ, ಚಿತ್ರಕಥೆಯನ್ನು ಬರೆದು ಆಕ್ಷನ್ ಕಟ್ ಹೇಳುತ್ತಿದ್ದಾರೆ. ಮುಂದಿನ ವರ್ಷ 2024ರ ಏಪ್ರಿಲ್ 1ರಂದು ಸಿನಿಮಾವು ತೆರೆ ಮೇಲೆ ತರಲು ಪ್ಲಾನ್ ಮಾಡಿಕೊಂಡಿದ್ದು, ಸಿನಿಮಾ ನೋಡಲು ಸಿನಿ ಪ್ರೇಕ್ಷಕರಂತೂ ಕಾದು ಕುಳಿತಿದ್ದಾರೆ.