ಅಮ್ಮನ ಜೊತೆಗೆ ಶ್ರೀರಸ್ತು ಶುಭಮಸ್ತು ಖ್ಯಾತಿಯ ನಟ ಶ್ರೀ ಮಹದೇವ್, ಫೋಟೋಗಳು ವೈರಲ್

ಕನ್ನಡ ಕಿರುತೆರೆ ಲೋಕದಲ್ಲಿ ಲವರ್ ಬಾಯ್ ಎಂದೇ ಖ್ಯಾತಿ ಗಳಿಸಿರುವ ನಟ ಶ್ರೀ ಮಹದೇವ್ (Shree Mahadev) ಅವರು ಎಲ್ಲರಿಗೂ ಕೂಡ ಚಿರಪರಿಚಿತರು. ಕನ್ನಡ ಕಿರುತೆರೆ ಮಾತ್ರವಲ್ಲದೇ ಈಗ ಬೆಳ್ಳಿತೆರೆಯಲ್ಲಿ ಬ್ಯುಸಿಯಾಗಿದ್ದು, ಆಗಾಗ ಫ್ಯಾನ್ಸ್ ಗಳನ್ನು ರಂಜಿಸುತ್ತಿರುತ್ತಾರೆ. ಶ್ರೀ ಮಹದೇವ್ ಅವರು ಶ್ರೀರಸ್ತು ಶುಭಮಸ್ತು ಧಾರಾವಾಹಿ ಮೂಲಕ ಮನೆಮಾತಾಗಿದ್ದರು. ಇದೀಗ ನಟ ಶ್ರೀ ಮಹದೇವ್ ಅವರ ಫೋಟೋಗಳು ವೈರಲ್ ಆಗಿವೆ.

ಈ ಫೋಟೋದಲ್ಲಿ ನಟ ಶ್ರೀ ಮಹದೇವ್ (Shree Mahadev) ತನ್ನ ಪ್ರೀತಿಯ ಅಮ್ಮ (Mother) ನ ಜೊತೆಗೆ ಟೈಮ್ ಸ್ಪೆಂಡ್ ಮಾಡಿದ್ದಾರೆ. ಅಮ್ಮ ಕಾಳಜಿ ಹಾಗೂ ಪ್ರೀತಿಯಲ್ಲಿ ನಟ ಮಹದೇವ್ ಮುಳುಗಿದ್ದಾರೆ. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ತಾಯಿ ಹಾಗೂ ಮಗನ ಬಾಂಧವ್ಯವನ್ನು ಮೆಚ್ಚಿಕೊಂಡಿದ್ದಾರೆ. ಅದಲ್ಲದೇ ಈ ಫೋಟೋಗೆ ಏಳು ನೂರಕ್ಕೂ ಅಧಿಕ ಲೈಕ್ಸ್ ಬಂದಿವೆ. ಬಾಲ್ಯದಿಂದಲೂ ನಟನೆಯತ್ತ ಆಸಕ್ತಿಯನ್ನು ಹೊಂದಿದ್ದರು ಮಹದೇವ್.

ಈ ಅವರು ಮೂಲತಃ ಮೈಸೂರಿ (Mysore) ನವರು. ಸಾಫ್ಟ್ ವೇರ್ ಹುದ್ದೆಯಲ್ಲಿದ್ದ ಇವರು ಸೀದಾ ಕಿರುತೆರೆಗೆ ಲಗ್ಗೆ ಇಟ್ಟರು. ಪ್ರಾರಂಭದಲ್ಲಿ ಚಿಟ್ಟೆ ಹೆಜ್ಜೆ (Chitte Hejje) ಎಂಬ ಧಾರಾವಾಹಿಯ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟರು. ಈ ಧಾರಾವಾಹಿಯಲ್ಲಿ ಖಳನಾಯಕನ ಪಾತ್ರದಲ್ಲಿ ಮಹದೇವ್ ನಟಿಸಿದ್ದರು. ಆ ಬಳಿಕ ಶ್ರೀರಸ್ತು ಶುಭಮಸ್ತು (Shreerastu Subhamastu) ಕಾಣಿಸಿಕೊಂಡ ಇವರಿಗೆ ಬೇಡಿಕೆಯು ಹೆಚ್ಚಾಯಿತು. ತದನಂತರದಲ್ಲಿ ಸುವರ್ಣ ವಾಹಿನಿಯಲ್ಲಿ ನೀಲಿ (Neeli) ಧಾರಾವಾಹಿಯಲ್ಲಿ ವಿಭಿನ್ನ ಶೈಲಿಯಲ್ಲಿ ಕಾಣಿಸಿಕೊಂಡರು.

ಹೀಗೆ ಕಿರುತೆರೆ ಲೋಕದಲ್ಲಿ ಸಕ್ರಿಯರಾಗಿದ್ದ ನಟ ಶ್ರೀಮಹದೇವ್ ಅವರಿಗೆ ಬೆಳ್ಳಿತೆರೆಯಲ್ಲಿ ಅವಕಾಶಗಳು ಬಂದವು. ತಮ್ಮ ನಟನಾ ಶೈಲಿಯಿಂದಲೇ ಮಹದೇವ್, ಸಿನಿಮಾ ರಂಗಕ್ಕೂ ಎಂಟ್ರಿಕೊಟ್ಟರು. ನಟಿ ಮೇಘನಾ ರಾಜ್ ಅಭಿನಯದ ಇರುವುದೆಲ್ಲವ ಬಿಟ್ಟು (Eruvudellava Bittu) ಚಿತ್ರದಲ್ಲಿ ನಟಿಸಿದ್ದರು. ಆ ಬಳಿಕ ಪದವಿಪೂರ್ವ, ಲೆಟ್ಸ್ ಬ್ರೇಕಪ್ ಹಾಗೂ ಹೊಂದಿಸಿ ಬರೆಯಿರಿ, ಬೆಂಗಳೂರು ಬಾಯ್ಸ್ ಹಾಗೂ ಗಜಾನನ & ಗ್ಯಾಂಗ್’ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ.

ಅದಲ್ಲದೆ, ಹೊಸ ತಂಡದ ಜೊತೆ ಸೇರಿಕೊಂಡು ಒಂದು ಮ್ಯೂಸಿಕ್​ ವಿಡಿಯೋ (Album Song) ಮಾಡಿದ್ದರು. ‘Saturday ನೈಟಲಿ’ (Saturday Nightly) ಎಂದು ಶೀರ್ಷಿಕೆಯಡಿಯಲ್ಲಿ ಈ ಹಾಡನ್ನು ಬಿಡುಗಡೆ ಮಾಡಲಾಗಿತ್ತು. ‘ಪ್ರಣವ್​ ಆಡಿಯೋ’ (Pranav Audio) ಮೂಲಕ ಈ ಹಾಡು ಬಿಡುಗಡೆಯಾಗಿತ್ತು. ಶ್ರೀ ಮಹದೇವ್​ ಅವರಿಗೆ ಜೋಡಿಯಾಗಿ ನಟಿ ಪೂಜಾ (Pooja) ಅವರು ಹೆಜ್ಜೆ ಹಾಕಿದ್ದರು. ಇದೀಗ ನಟ ಶ್ರೀ ಮಹದೇವ್ ಅವರಿಗೆ ಎಲ್ಲಿಲ್ಲದ ಬೇಡಿಕೆಯಿದ್ದು ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ಬ್ಯುಸಿಯಾಗಿದ್ದಾರೆ.

Leave a Reply

Your email address will not be published. Required fields are marked *