ತಾಯಿ ಕಳೆದುಕೊಂಡು ತಬ್ಬಲಿಯಾದ ವಿನೋದ್ ರಾಜ್ ಅವರನ್ನು ನೆನೆದು ಭಾವುಕರಾದ ಶಿವಣ್ಣ, ಏನು ಹೇಳಿದ್ರು? ಇಲ್ಲಿದೆ ನೋಡಿ..

ಕನ್ನಡ ಚಿತ್ರರಂಗದ ಮೇರು ನಟಿ ಲೀಲಾವತಿ (Leelavathi) ಯವರು ಇನ್ನಿಲ್ಲವಾಗಿದ್ದಾರೆ. ಕಳೆದ ಕೆಲವು ತಿಂಗಳಿನಿಂದ ವಯೋಸಹಜ ಖಾಯಿಲೆಯಿಂದ ಹಾಸಿಗೆ ಹಿಡಿದಿದ್ದರು. ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಲೀಲಾವತಿ ಅವರನ್ನು ನೆಲಮಂಗಲದ ಖಾಸಗಿ ಆಸ್ಪತ್ರೆ (Nelamangala Private Hospital) ಯಲ್ಲಿ ಸೇರಿಸಲಾಗಿತ್ತು. ಆದರೆ ನಿನ್ನೆ ಸಂಜೆ (ಡಿಸೆಂಬರ್ 8) ಅಷ್ಟೋತ್ತಿಗೆ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ.

ಹಿರಿಯ ನಟಿ ಲೀಲಾವತಿ ಅವರ ಆರೋಗ್ಯ ಸ್ಥಿ- ತಿ ಗಂ-ಭೀರವಾಗಿದೆ ಎನ್ನುವ ವಿಚಾರ ತಿಳಿಯುತ್ತಿದ್ದಂತೆ ನೆಲಮಂಗಲದಲ್ಲಿರುವ ಲೀಲಾವತಿ ಅವರ ಮನೆಗೆ ಶಿವರಾಜ್​ ಕುಮಾರ್​, ನಟ ದರ್ಶನ್​, ದೊಡ್ಡಣ, ಅರ್ಜುನ್​ ಸರ್ಜಾ, ಶ್ರುತಿ, ಸುಧಾರಾಣಿ, ಮಾಳವಿಕಾ ಅವಿನಾಶ್​ ಸೇರಿದಂತೆ ಚಿತ್ರರಂಗದ ಗಣ್ಯರು ಭೇಟಿ ನೀಡಿ, ಆರೋಗ್ಯವನ್ನು ವಿಚಾರಿಸಿ ವಿನೋದ್ ರಾಜ್ ಅವರಿಗೆ ಧೈರ್ಯ ತುಂಬಿದ್ದರು.

ಆದರೆ 85 ರ ಹರೆಯದ ಲೀಲಾವತಿಯವರು ನಿನ್ನೆ ಸಂಜೆಯ ವೇಳೆ ಇಹಲೋಕ ತ್ಯಜಿಸಿದ್ದು, ಅವರನ್ನು ನೆನೆದು ನಟ ಶಿವರಾಜ್ ಕುಮಾರ್ (Shivarajkumar) ಅವರು ಭಾ-ವುಕರಾಗಿದ್ದಾರೆ. ನೆಲಮಂಗಲದ ಖಾಸಗಿ ಆಸ್ಪತ್ರೆಯಲ್ಲಿ ಮಾಧ್ಯಮ ಮಿತ್ರರೊಂದಿಗೆ ಮಾತನಾಡಿದ ಶಿವರಾಜ್​ಕುಮಾರ್​, ‘ನನಗೆ ಏನು ಹೇಳಬೇಕು ಅಂತಾ ಗೊತ್ತಾಗುತ್ತಿಲ್ಲ. ಮನಸ್ಸಿಗೆ ತುಂಬಾ ಬೇಜಾರಾಗುತ್ತಿದೆ.

ಕಳೆದವಾರವಷ್ಟೇ ಅವರ ಮನೆಗೆ ಭೇಟಿ, ಮಾತನಾಡಲು ಪ್ರಯತ್ನಿಸಿದ್ದೆ. ವಿನೋದ್​ ಜತೆಯಲ್ಲೂ ಮಾತನಾಡಿದ್ದೆ. ಆದರೆ, ಇಂದು ಅವರು ಅಗಲಿದ್ದಾರೆ. ಅವರ ನಿಧನ ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟ. ಮನಸ್ಸಿಗೆ ತುಂಬಾ ಬೇಜಾರಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ’ ಎಂದಿದ್ದಾರೆ.

‘ನಾವು ಯಾವಾಗಲೂ ವಿನೋದ್​ ಜತೆಯಲ್ಲಿ ಇರುತ್ತೇವೆ. ವಿನೋದ್​ಗೂ ಸಹ ಈ ಬಗ್ಗೆ ಹೇಳಿದ್ದೇನೆ. ವಿನೋದ್​ ಅವರು ತಮ್ಮ ತಾಯಿಯನ್ನು ತುಂಬಾ ಅಚ್ಚುಕೊಂಡಿದ್ದರು. ಅವರಿಬ್ಬರ ಬಾಂಧವ್ಯವೇ ಬೇರೆ ರೀತಿ ಇತ್ತು. ಎಂದಿಗೂ ತಾಯಿಯನ್ನು ಬಿಟ್ಟು ವಿನೋದ್​ ಇರಲಿಲ್ಲ. ಇದನೆಲ್ಲ ನೋಡಿದಾಗ ಮನಸ್ಸಿಗೆ ತುಂಬಾ ಬೇಜಾರಾಗುತ್ತದೆ. ಮುಂದೆ ವಿನೋದ್​ ಹೇಗಿರುತ್ತಾರೆ ಎಂಬುದು ಚಿಂತೆಯಾಗಿದೆ.

ವಿನೋದ್​ ಜೊತೆಗೆ ಮಾತನಾಡಿದ್ದೇನೆ. ಎಲ್ಲ ಕಾರ್ಯ ಮುಗಿಯಲಿ, ಆ ಬಳಿಕ ವಿನೋದ್​ರನ್ನು ಒಮ್ಮೆ ಭೇಟಿ ನೀಡಿ ಮಾತನಾಡುತ್ತೇನೆ’ ಎಂದು ಹೇಳಿದ್ದಾರೆ. ಇಂದು ಬೆಳಗ್ಗೆ ನೆಲಮಂಗಲದ ಅಂಬೇಡ್ಕರ್ ಮೈದಾನದಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿತ್ತು. ಆದರೆ ಇದೀಗ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿದೆ. ಮಧ್ಯಾಹ್ನ 3.30 ಗಂಟೆಗೆ ಸೋಲದೇವನಹಳ್ಳಿ (Soladevanahalli) ಯ ತೋಟದಲ್ಲಿ ಲೀಲಾವತಿಯವರ ಅಂ-ತ್ಯಕ್ರಿಯೆ ನಡೆಯಲಿದೆ.

Leave a Reply

Your email address will not be published. Required fields are marked *