ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಮಗಳು ನಿರೂಪಮಾರವರ ಮದುವೆಯ ಸುಂದರ ಕ್ಷಣ ಹೇಗಿತ್ತು ಗೊತ್ತಾ? ಅಪರೂಪದ ಫೋಟೋಗಳು ಇಲ್ಲಿವೆ

ಕನ್ನಡ ಸಿನಿಮಾರಂಗದ ಎವರ್ ಗ್ರೀನ್ ನಟರಲ್ಲಿ ಒಬ್ಬರು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ (Hyatrik Hero Shivaraj kumar). ಚಂದನವನದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸ್ಯಾಂಡಲ್ ವುಡ್ ಖ್ಯಾತ ನಟ ಕಮ್ ಗಾಯಕ. ಆನಂದ್ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ನಟ ಶಿವರಾಜ್ ಕುಮಾರ್ ಅವರು 125 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡವರು.

ನಟ ಶಿವರಾಜ್ ಕುಮಾರ್ ಅವರ ಪತ್ನಿಯ ಹೆಸರು ಗೀತಾ ಶಿವ ರಾಜ್ ಕುಮಾರ್ (Geetha Shivarajkumar). ಪತಿಯ ಎಲ್ಲಾ ಕೆಲಸಗಳಿಗೂ ಸಾಥ್ ಸಿನಿಮಾ ಕಾರ್ಯಕ್ರಮ ಕಾಣಿಸಿಕೊಳ್ಳುತ್ತಾರೆ. ಅದಲ್ಲದೆ ರಾಜಕೀಯದಲ್ಲಿಯು ಸಕ್ರಿಯರಾಗಿದ್ದಾರೆ. ಶಿವರಾಜ್ ಕುಮಾರ್ (Shivaraj kumar) ಹಾಗೂ ಗೀತಾ (Geetha) ಅವರದ್ದು ಗುರು ಹಿರಿಯರೇ ನೋಡಿ ನಿಶ್ಚಯ ಮಾಡಿ ಸಂಬಂಧ. ಹೀಗಾಗಿ ಇದೊಂದು ಪಕ್ಕಾ ಅರೇಂಜ್ಡ್ ಮ್ಯಾರೇಜ್ ಎನ್ನಬಹುದು.

ಅಂದಹಾಗೆ, 1986 ರಲ್ಲಿ ಮೇ 19 ರಂದು ಶಿವರಾಜ್ ಕುಮಾರ್ ಅವರು ಗೀತಾರವರ ಜೊತೆಗೆ ವಿವಾಹವಾದರು. ಈ ದಂಪತಿಗಳಿಗೆ ಇಬ್ಬರೂ ಮುದ್ದಾದ ಹೆಣ್ಣು ಮಕ್ಕಳಿದ್ದು ದೊಡ್ಡ ಮಗಳಿಗೆ ನಿರೂಪಮಾ (Nirupama) ರವರಿಗೆ ಈಗಾಗಲೇ ಮದುವೆಯಾಗಿದೆ. ಸದ್ಯಕ್ಕೆ ಶಿವರಾಜ್ ಕುಮಾರ್ ಅವರ ಮಗಳ ಮದುವೆಯ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಶಿವರಾಜ್ ಕುಮಾರ್ ಅವರ ಮಗಳ ಮದುವೆ ಫೋಟೋಗೆ ಎಂಟುನೂರಕ್ಕೂ ಅಧಿಕ ಲೈಕ್ಸ್ ಬಂದಿದೆ.

ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಅವರ ಮಗಳ ಮದುವೆಯು 2015 ಆಗಸ್ಟ್ 31 ರಂದು ಬೆಂಗಳೂರಿನ ಅರಮನೆ ಮೈದಾನ (Banglore Palace Ground) ದಲ್ಲಿ ಅದ್ದೂರಿಯಾಗಿ ನಡೆದಿತ್ತು. ಈ ಮದುವೆಗೆ ತ್ರಿಪುರವಾಸಿನಿ ಸಾಕ್ಷಿಯಾಗಿತ್ತು. ಅಂದಹಾಗೆ, ತಿಂಗಳುಗಳ ಹಿಂದೆಯೇ ಮಗಳ ಮದುವೆಗೆ ಸಕಲ ತಯಾರಿ ನಡೆಸಿದ್ದ ಶಿವಣ್ಣ ಕಾಲಿವುಡ್, ಟಾಲಿವುಡ್, ಬಾಲಿವುಡ್ ಮತ್ತು ಸ್ಯಾಂಡಲ್ ವುಡ್ ಗಣ್ಯರಿಗೆ ಆಮಂತ್ರಣ ನೀಡಿದ್ದರು. ಡಾ. ನಿರೂಪಮ (Dr.Nirupama) ಹಾಗೂ ಡಾ. ದೀಲಿಪ್ (Dr Delip) ಅವರ ವಿವಾಹ ಮಹೋತ್ಸವಕ್ಕೆ ಸಿನಿಮಾರಂಗದ ಗಣ್ಯರು ಭಾಗಿಯಾಗಿದ್ದರು.

ಕಳೆದ ಕೆಲ ದಿನಗಳ ಹಿಂದೆಯಷ್ಟೇ ನಟ ಶಿವರಾಜ್ ಕುಮಾರ್ ದಂಪತಿಗಳು ‘ಹಾಸ್ಟೆಲ್​ ಹುಡುಗರು ಬೇಕಾಗಿದ್ದಾರೆ’ ಸಿನಿಮಾ ನೋಡಿದ್ದಾರೆ. ಈ ಸಿನಿಮಾದ ಖುಷಿ ವ್ಯಕ್ತಪಡಿಸಿದ್ದ ಶಿವಣ್ಣ, ‘ನಿಜಕ್ಕೂ ಯಾರನ್ನು ಹೊಗಳಬೇಕು ಅನ್ನೋದೇ ಗೊತ್ತಾಗುತ್ತಿಲ್ಲ. ಎಲ್ಲರೂ ಚೆನ್ನಾಗಿ ಮಾಡಿದ್ದಾರೆ. ಇದೊಂದು ಟೀಂ ವರ್ಕ್​. ಒಂದು ರಾತ್ರಿ, ಒಂದೇ ಲೋಕೆಷನ್​ನಲ್ಲಿ ನಡೆಯುವ ಕಥೆಯನ್ನು ಇಷ್ಟು ಚೆನ್ನಾಗಿ ತೋರಿಸಿದ್ದಾರೆ ಎಂದರೆ ನಂಬೋಕೆ ಆಗಲ್ಲ’ ಎಂದಿದ್ದಾರೆ.

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಘೋಸ್ಟ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ನಿರ್ದೇಶಕ ಶ್ರೀನಿ (Shreeni) ಯವರು ಆಕ್ಷನ್ ಕಟ್ ಹೇಳುತ್ತಿರುವ `ಘೋಸ್ಟ್’ (Ghost) ಚಿತ್ರದಲ್ಲಿ ಶಿವರಾಜ್ ಕುಮಾರ್ ನಟಿಸುತ್ತಿದ್ದಾರೆ. ಘೋಸ್ಟ್‌ ಚಿತ್ರವು ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ತಯಾರಾಗುತ್ತಿದೆ. ಈ ನಡುವೆ ಮತ್ತೊಂದು ಸಿಹಿ ಸುದ್ದಿಯೆಂದರೆ ನಟ ಧನುಷ್ (Dhanush) ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ. ಇದೀಗ ಧನುಶ್ ಜೊತೆ ಶಿವಣ್ಣ ನಟಿಸಿರುವ ಸಿನಿಮಾದ ಪೋಸ್ಟರ್ ಬಿಡುಗಡೆ ಆಗಿದೆ. ಸದ್ಯಕ್ಕೆ ನಟ ಶಿವರಾಜ್ ಕುಮಾರ್ ಅವರ 10 -12 ಸಿನಿಮಾಗಳಿದ್ದು ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ.

Leave a Reply

Your email address will not be published. Required fields are marked *