ಹ್ಯಾಟ್ರಿಕ್​ ಹೀರೋ ಶಿವರಾಜ್ ಕುಮಾರ್ ಅವರ ಹುಟ್ಟುಹಬ್ಬ ಸೆಲೆಬ್ರೇಶನ್ ಹೇಗಿತ್ತು ಗೊತ್ತಾ? ಇಲ್ಲಿದೆ ನೋಡಿ ಸುಂದರ ಕ್ಷಣದ ದೃಶ್ಯಗಳು

ಹ್ಯಾಟ್ರಿಕ್​ ಹೀರೋ (Hyatric Hero), ಸೆಂಚುರಿ ಸ್ಟಾರ್​ (Century Star), ಕರುನಾಡ ಚಕ್ರವರ್ತಿ (Karunada Chakravarti) ಹೀಗೆ ನಾನಾ ಹೆಸರುಗಳಿಂದ ಕರೆಯುವ ಡಾ. ಶಿವರಾಜ್​ಕುಮಾರ್​ ಅವರಿಗೆ ಎಲ್ಲಿಲ್ಲದ ಬೇಡಿಕೆಯಿದೆ. 60 ರ ಆಸುಪಾಸಿನಲ್ಲಿ ಎನರ್ಜಿಟಿಕ್ ಆಗಿರುವ ನಟ ಶಿವರಾಜ್ ಕುಮಾರ್ (Shivaraj Kumar) ಅವರಿಗೆ ನಿನ್ನೆ ಜುಲೈ 12 ಹುಟ್ಟುಹಬ್ಬದ ಸಂಭ್ರಮ. 61 ವರ್ಷಗಳನ್ನು ಪೂರೈಸಿ 62ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಸ್ಯಾಂಡಲ್ ವುಡ್ ನ ಹ್ಯಾಟ್ರಿಕ್ ಹೀರೋ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್(Actor Shivarajkumar) ಗೆ ಈ ಬಾರಿಯ ಬರ್ತ್ಡೇ ಸೆಲೆಬ್ರೇಶನ್ ಜೋರಾಗಿಯೇ ಇತ್ತು ಎನ್ನಬಹುದು.

ಕಳೆದ ಮೂರು ವರ್ಷಗಳಿಂದ ಅದ್ದೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಂಡಿರಲಿಲ್ಲ ಶಿವಣ್ಣ. ಕೊರೊನಾ ಹಾಗೂ ಅಪ್ಪು ಅಗಲಿಕೆಯ ಕಾರಣ ಮೂರು ವರ್ಷಗಳಿಂದ ಬರ್ತಡೇ ಆಚರಿಸಿಕೊಂಡಿರದ ಶಿವಣ್ಣ ಈ ಬಾರಿ ಅಭಿಮಾನಿಗಳ ಜೊತೆಗೆ ಬರ್ತ್ಡೇ ಸೆಲೆಬ್ರೇಶನ್ ಮಾಡಿಕೊಂಡರು. ಮಧ್ಯರಾತ್ರಿ 12 ಗಂಟೆಗೆ ಅಭಿಮಾನಿಗಳು ಮಾನ್ಯತಾ ಟೆಕ್​ ಪಾರ್ಕ್​ ( Manyatha Teck Park) ಬಳಿ ಇರುವ ಶಿವರಾಜ್​ ಕುಮಾರ್​ ಮನೆ ಬಳಿ ಜಮಾಯಿಸಿದ್ದು, ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬವನ್ನು ಹಬ್ಬದಂತೆ ಆಚರಿಸಿದ್ದರು.

ಹೌದು, ನಟ ಶಿವರಾಜ್​ ಕುಮಾರ್​ ಕೈಯಲ್ಲಿ ಕೇಕ್​ ಕಟ್​ ಮಾಡಿಸಿ, ಶಿವಣ್ಣ ಮನೆ ಸುತ್ತ ಸ್ಕೈಶಾಟ್ಸ್ ಪಟಾಕಿ ಸಿಡಿಸಿ ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬವನ್ನು ಸಂಭ್ರಮಿಸಿದ್ದರು. ಅದಲ್ಲದೇ, ನಿನ್ನೆ ಬೆಳಗ್ಗೆಯಿಂದಲೇ ನಾಗವಾರದಲ್ಲಿರುವ ಶಿವಣ್ಣನ ನಿವಾಸದ ಮುಂದೆ ಫ್ಯಾನ್ಸ್ ಜಮಾಯಿಸಿದ್ದು, ಬೆಳ್ಳಂ ಬೆಳಗ್ಗೆಯಿಂದಲೇ ಅಭಿಮಾನಿಗಳ ಕ್ಯೂ ನಿಂತಿದ್ದರು.

ಇತ್ತ ನೆಚ್ಚಿನ ನಟನ ಜನ್ಮದಿನದ ಅಂಗವಾಗಿ ಅಭಿಮಾನಿಗಳು, ರಾಜಕೀಯ ಗಣ್ಯರು, ಸಿನಿಮಾ ತಾರೆಯರು ಸೇರಿದಂತೆ ಅನೇಕರು ಶಿವಣ್ಣನ ಹುಟ್ಟುಹಬ್ಬಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಶುಭ ಹಾರೈಸಿದ್ದರು. ಅದಲ್ಲದೇ, ಇತ್ತ ಕುಟುಂಬದವರು, ಸಿನಿರಂಗದವರು ಹಾಗೂ ಅಭಿಮಾನಿಗಳ ಜೊತೆಗೆ ಬರ್ತ್ಡೇ ಸೆಲೆಬ್ರೇಶನ್ ಮಾಡಿರುವ ಶಿವಣ್ಣನವರ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

ಈ ವಿಡಿಯೋ ನಟ ಯುವರಾಜ್ ಕುಮಾರ್ ( Yuvaraj Kumar) ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದು, ಈ ಪೋಸ್ಟ್ ಗೆ ಎರಡು ಸಾವಿರಕ್ಕೂ ಅಧಿಕ ವ್ಯೂಸ್ ಬಂದಿದೆ. ಅದರ ಜೊತೆಗೆ, ಶಿವರಾಜ್ ಕುಮಾರ್ ಹುಟ್ಟುಹಬ್ಬದ ಸಂಭ್ರಮದ ನಡುವೆ ಅವರ ‘ಘೋಸ್ಟ್’ (Ghost) ಚಿತ್ರದ ಟೀಸರ್ ಬೆಂಗಳೂರಿನ ಸಂತೋಷ್ ಚಿತ್ರಮಂದಿರದಲ್ಲಿ ಬಿಡುಗಡೆ ಮಾಡಿತು. ಒಟ್ಟಿನಲ್ಲಿ ಈ ಬಾರಿಯ ನಟ ಶಿವರಾಜ್ ಕುಮಾರ್ ಅವರ ಬರ್ತ್ಡೇ ಸೆಲೆಬ್ರೇಶನ್ ಬಹಳ ಕಲರ್ ಫುಲ್ ಆಗಿತ್ತು ಎಂದರೆ ತಪ್ಪಾಗಲಾರದು.

Leave a Reply

Your email address will not be published. Required fields are marked *