ವೈವಾಹಿಕ ಜೀವನಕ್ಕೆ ಕಾಲಿಟ್ಟ ಕಾಮಿಡಿ ಕಿಲಾಡಿಗಳು ಖ್ಯಾತಿಯ ಸಂಜು ಬಸಯ್ಯ, ಅರಿಶಿನ ಶಾಸ್ತ್ರ ಕಾರ್ಯಕ್ರಮದಲ್ಲಿ ಹೆಂಡತಿ ಜೋತೆ ಕುಣಿದು ಕುಪ್ಪಳಿಸಿದ ಸಂಜು

ಕನ್ನಡ ಕಿರುತೆರೆ ಲೋಕದ ಜನಪ್ರಿಯ ಶೋ ಕಾಮಿಡಿ ಕಿಲಾಡಿ ಶೋ ಮೂಲಕ ಖ್ಯಾತಿಗಳಿಸಿಕೊಂಡವರು ಸಂಜು ಬಸಯ್ಯಾ (Sanju Basayya) ಹೊಸ ಬದುಕಿಗೆ ಕಾಲಿಟ್ಟಿದ್ದಾರೆ. ಎಲ್ಲರಿಗೂ ನಗುವಿನ ಕಚಗುಳಿ ಬಡಿಸುತ್ತಿದ್ದ ಸಂಜು ಬಸಯ್ಯ ಪ್ರೀತಿಸಿದ ಹುಡುಗಿ ಪಲ್ಲವಿಯ ಕೈ ಹಿಡಿದಿದ್ದರು. ಕಾಮಿಡಿ ಕಿಲಾಡಿಗಳು ವೇದಿಕೆಯ ಮೇಲೆ ತಮ್ಮ ಲವ್ ಸ್ಟೋರಿ ಹಾಗೂ ಪ್ರೀತಿಸುತ್ತಿರುವ ಹುಡುಗಿಯ ಬಗ್ಗೆ ಸಂಜು ಬಸಯ್ಯ ಮುಕ್ತವಾಗಿ ಹೇಳಿಕೊಂಡಿದ್ದರು.

ಇತ್ತೀಚೆಗಷ್ಟೇ ತಮ್ಮ ಬಹುಕಾಲದ ಪ್ರೇಯಸಿಯ ಜೊತೆಗೆ ರಿಜಿಸ್ಟರ್ ಮ್ಯಾರೇಜ್ (Register Marriage) ಆಗಿದ್ದರು. ಆದರೆ ಇದೀಗ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು ಮದುವೆಯ ಫೋಟೋಗಳು ವೈರಲ್ ಆಗಿವೆ. ಕಾಮಿಡಿ ಕಿಲಾಡಿ ಖ್ಯಾತಿಯ ನಟ ಸಂಜು ಬಸಯ್ಯ ಜುಲೈ-30 ರಂದು ಮದುವೆ ಆಗಿದ್ದಾರೆ. ಡ್ಯಾನ್ಸರ್ ಕಮ್ ಮಾಡೆಲ್ ಪಲ್ಲವಿ ಬಳ್ಳಾರಿ (Pallavi Ballari) ಎಂಬುವರನ್ನ ಸಂಜು ಬಸಯ್ಯ ಪ್ರೀತಿಸಿ ಮದುವೆಯಾಗಿದ್ದಾರೆ. ಸಂಜು ಬಸಯ್ಯ ಹಾಗೂ ಪಲ್ಲವಿ ಗ್ರಾಂಡ್ ರಿಸೆಪ್ಟನ್ ನಡೆದಿದೆ.

ಹೌದು, ಜುಲೈ 30 ರಂದು ಬೈಲಹೊಂಗಲದ ಶ್ರೀ ವೀರಭದ್ರೇಶ್ವರ ಕಲ್ಯಾಣ ಮಂಟಪ ( Shre Veera Bhadreshwara Kalyana Mantapa) ದಲ್ಲಿ ಸಂಜು ಬಸಯ್ಯ ಹಾಗೂ ಪಲ್ಲವಿ ಬಳ್ಳಾರಿ ಅವರ ಅದ್ಧೂರಿ ಆರತಕ್ಷತೆ ಜರುಗಿದೆ. ಜೊತೆಗೆ ಸಂಜು ಬಸಯ್ಯ ಅವರ ಹುಟ್ಟುಹಬ್ಬವನ್ನೂ ಆಚರಿಸಿಕೊಂಡಿದ್ದಾರೆ. ಸಂಜು ಬಸಯ್ಯ ಹಾಗೂ ಪಲ್ಲವಿಯವರ ಮದುವೆಯ ಸುಂದರ ಕ್ಷಣದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ.

ಸಂಜು ಬಸಯ್ಯ ಹಾಗೂ ಪಲ್ಲವಿಯವರು ಒಂದೇ ನಾಟಕದ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಒಟ್ಟಿಗೆ ಕಾರ್ಯಕ್ರಮಗಳನ್ನು ನೀಡುತ್ತಿದ್ದ ಸಂಜು ಬಸಯ್ಯ ಹಾಗೂ ಪಲ್ಲವಿ ಬಳ್ಳಾರಿ ಆತ್ಮೀಯ ಸ್ನೇಹಿತರಾಗಿದ್ದರು. ಬಳಿಕ ಇಬ್ಬರ ಮಧ್ಯೆ ಪ್ರೀತಿ ಚಿಗುರಿತ್ತು. ಕಳೆದ 6 ವರ್ಷಗಳಿಂದ ಪರಸ್ಪರ ಸಂಜು ಬಸಯ್ಯ ಹಾಗೂ ಪಲ್ಲವಿ ಪ್ರೀತಿಸುತ್ತಿದ್ದರು.

ಕೊನೆಗೂ ಇಬ್ಬರೂ ಮನೆಯವರನ್ನು ಒಪ್ಪಿಸಿ ತಮ್ಮಿಬ್ಬರ ಪ್ರೀತಿಗೆ ಮದುವೆಯ ಮುದ್ರೆ ಒತ್ತಿದ್ದಾರೆ. ಈ ಹಿಂದೆ ಆರತಕ್ಷತೆ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿರುವ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದು ಕೆಲವು ಸಾಲುಗಳನ್ನು ಬರೆದುಕೊಂಡಿದ್ದರು. ಈ ಪೋಸ್ಟ್ ನಲ್ಲಿ ಇನ್ವಿಟೇಶನ್ ಕಾರ್ಡ್ ಅನ್ನು ಶೇರ್ ಮಾಡಿಕೊಂಡಿದ್ದರು.

ಅದರ ಜೊತೆಗೆ, “ಜುಲೈ 30/07/2023 ರಂದು ಬೆಳಿಗ್ಗೆ 12 ಗಂಟೆ ಬೈಲಹೊಂಗಲ ಬೈ ಪಾಸ್ ರೋಡ್ ಶ್ರೀ ವೀರಭದ್ರೇಶ್ವರ ಕಲ್ಯಾಣ ಮಂಟಪ ಬೈಲಹೊಂಗಲ ಮಹಾ ನಗರದಲ್ಲಿ ನಮ್ಮ ಆರತಕ್ಷತೆ ಕಾರ್ಯಕ್ರಮ ಮತ್ತು ಸಂಜು ಬಸಯ್ಯ ಅವರ ಹುಟ್ಟು ಹಬ್ಬದ ಕಾರ್ಯಕ್ರಮ ದಯವಿಟ್ಟು ಎಲ್ಲರೂ ಬಂದು ನಮ್ಮ ಗೆ ಆಶೀರ್ವದಿಸಬೇಕೆಂದು ಕೇಳಿಕೊಳ್ಳುತ್ತೇವೆ. ಇಂತಿ ನಿಮ್ಮ ಪ್ರೀತಿಯ ಸಂಜು ಬಸಯ್ಯ ಮತ್ತು ಪಲ್ಲವಿ” ಎಂದು ಬರೆದುಕೊಂಡಿದ್ದರು.

ಸಂಜು ಬಸಯ್ಯರವರ ಬಗ್ಗೆ ಹೇಳುವುದಾದರೆ ಉತ್ತರ ಕರ್ನಾಟಕ (North Karnataka) ಮೂಲದ ಸಂಜುರವರು ನಟನೆಯಲ್ಲಿ ತೊಡಗಿಸಿಕೊಂಡವರು. ಬೆಳಗಾವಿ ಜಿಲ್ಲೆಯ ಮುರುಗೋಡು ಗ್ರಾಮದ ಸಂಜುರವರು , ನಾಟಕ ಕಂಪೆನಿಗಳಲ್ಲಿ ಸಕ್ರಿಯರಾಗಿದ್ದರು. ಕಾಮಿಡಿ ಕಿಲಾಡಿಗಳು ಖ್ಯಾತಿಯ ಸಂಜು ಬಸಯ್ಯ ಸ್ಯಾಂಡಲ್ ವುಡ್ ಗೂ ಎಂಟ್ರಿ ಕೊಟ್ಟು ಹಲವು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಈಗಾಗಲೇ ಸಂಜು ಬಸಯ್ಯರವರಿಗೆ ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳಿದ್ದಾರೆ.

Leave a Reply

Your email address will not be published. Required fields are marked *