ಕಾಮಿಡಿ ಕಿಲಾಡಿಗಳು ಖ್ಯಾತಿಯಾ ಸಂಜು ಬಸಯ್ಯರವರ ಮುದ್ದಾದ ಕುಟುಂಬ ಹೇಗಿದೆ ಗೊತ್ತಾ?

ಕಾಮಿಡಿ ಕಿಲಾಡಿಗಳು (Comedy Kiladigalu) ಶೋನಲ್ಲಿ ಕಿಲಾಡಿ ಕುಳ್ಳನಾಡಿ ಪ್ರಸಿದ್ಧಿ ಪಡೆದಿರುವ ಸಂಜು ಬಸಯ್ಯ (Sanju Basayya) ಅವರು ತಮ್ಮ ಬಹುಸಮಯದ ಗೆಳತಿ ಪಲ್ಲವಿ (Pallavi Ballari) ಎನ್ನುವವರವರ ಜೊತೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಕುಟುಂಬದವರಿಗೆ ತಿಳಿಸದೆ ರಿಜಿಸ್ಟರ್ ಮ್ಯಾರೇಜ್ (Registered Marriage) ಆಗಿದ್ದ ಸಂಜು ಬಸಯ್ಯ ಹಾಗೂ ಪಲ್ಲವಿಯು ಕುಟುಂಬದವರ ಒಪ್ಪಿಗೆಗಾಗಿ ಕಾಯುತ್ತಿದ್ದರು.

ಆದರೆ ಕಳೆದ ಜುಲೈ ತಿಂಗಳ ಕೊನೆಯಲ್ಲಿ ಮನೆಯವರ ಒಪ್ಪಿಗೆ ಮೇರೆಗೆ ಹೊಸ ಬದುಕಿಗೆ ಮುನ್ನುಡಿ ಬರೆದರು. ಕಳೆದ ಜುಲೈ 30 ರಂದು ಬೈಲಹೊಂಗಲದ ಶ್ರೀ ವೀರಭದ್ರೇಶ್ವರ ಕಲ್ಯಾಣ ಮಂಟಪ (Shre Veera Bhadreshwara Kalyana Mantapa) ದಲ್ಲಿ ಸಂಜು ಬಸಯ್ಯ ಹಾಗೂ ಪಲ್ಲವಿ ಬಳ್ಳಾರಿಯವರು ಮದುವೆಯಾಗಿದ್ದರು. ಅದಲ್ಲದೇ ಈ ಜೋಡಿಯು ಅದ್ದೂರಿ ಆರತಕ್ಷತೆಯನ್ನು ಏರ್ಪಡಿಸಿತ್ತು.

ತದನಂತರದಲ್ಲಿ ಸಂಜು ಬಸಯ್ಯ ಹಾಗೂ ಪಲ್ಲವಿಯವರು ತಮ್ಮ ಮದುವೆ ಆರತಕ್ಷತೆಯ ಒಂದಷ್ಟು ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್‌ ಮಾಡಿಕೊಂಡಿದ್ದರು. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಕೊನೆಗೂ ತಮ್ಮಿಬ್ಬರ ಪ್ರೀತಿಗೆ ಮದುವೆಯ ಮುದ್ರೆ ಒತ್ತಿರುವ ಈ ಜೋಡಿಯ ಫೋಟೋಗಳನ್ನು ನೋಡಿದ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಅದಲ್ಲದೇ, ಸಂಜು ಬಸಯ್ಯ (Sanju Basayya) ರವರು ಶುಭ ಹಾರೈಸಿದ ಬಂಧು ಬಾಂಧವರು ಹಾಗೂ ಸ್ನೇಹಿತರಿಗೆ ಧನ್ಯವಾದಗಳನ್ನು ತಿಳಿಸುವ ಮೂಲಕ ಫ್ಯಾಮಿಲಿ ಜೊತೆಗಿನ ಫೋಟೋವನ್ನು ಶೇರ್ ಮಾಡಿಕೊಂಡಿದ್ದರು. ನಟ ಸಂಜು ಬಸಯ್ಯ ಹಾಗೂ ಪಲ್ಲವಿಯವರದ್ದು ಪಕ್ಕಾ ಲವ್ ಮ್ಯಾರೇಜ್ (Love Marriage) ಎನ್ನುವುದನ್ನು ಮತ್ತೆ ಮತ್ತೆ ಹೇಳಬೇಕಾಗಿಲ್ಲ.

ಈ ಹಿಂದೆ ಕಾಮಿಡಿ ಕಿಲಾಡಿಗಳು ವೇದಿಕೆಯ ಮೇಲೆ ತಮ್ಮಿಬ್ಬರ ಲವ್ ಸ್ಟೋರಿಯ ಕುರಿತು ಇಡೀ ಕರ್ನಾಟಕದ ಜನತೆಯ ಮುಂದೆ ಬಿಚ್ಚಿಟ್ಟಿದ್ದರು. ಹೌದು, ನಾಟಕ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ವೇಳೆಯಲ್ಲಿ ಸ್ನೇಹ ಬೆಳೆದಿತ್ತಂತೆ. ಈ ಸ್ನೇಹದಿಂದ ಪ್ರೀತಿ ಮೊಳಕೆಯೊಡೆದು ಆರು ವರ್ಷಗಳಾಗಿವೆ ಎನ್ನುವುದನ್ನು ಹೇಳಿದ್ದರು. ಕೊನೆಗೆ ಈ ಜೋಡಿಯು ಮದುವೆ ಮಾಡಿಕೊಂಡಿದ್ದು ಸುಖವಾಗಿ ಸಂಸಾರ ಮಾಡಲಿ ಎನ್ನುವುದೇ ಆಶಯ.

Leave a Reply

Your email address will not be published. Required fields are marked *