ತನಗಿಂತ 22 ವರ್ಷ ಚಿಕ್ಕ ವಯಸ್ಸಿನ ಹುಡುಗಿಯನ್ನು ಪಟಾಯ್ಸಿ ಎರಡನೇ ಮದುವೆ ಆದ ಸಲ್ಮಾನ್ ಖಾನ್ ತಮ್ಮ , ಹುಡುಗಿ ಯಾರು ಗೊತ್ತಾ?..

ಸಿನಿಮಾರಂಗ ಎಂದ ಮೇಲೆ ಸಿನಿಮಾ ಹೊರತು ಪಡಿಸಿ ವೈಯುಕ್ತಿಕ ವಿಚಾರಗಳಿಂದಲೂ ಸುದ್ದಿಯಾಗುವುದೇ ಹೆಚ್ಚು. ಆದರಲ್ಲಿಯು ಆಗಾಗ ಸೆಲೆಬ್ರಿಟಿಗಳ ಮದುವೆ ಸುದ್ದಿಗಳು ಹರಿದಾಡುತ್ತಿರುತ್ತವೆ. ಆದರೆ ಇದೀಗ ಬಾಲಿವುಡ್ (Bollywood) ಖ್ಯಾತ ನಟ ಸಲ್ಮಾನ್ ಖಾನ್ ಕಿರಿಯ ಸಹೋದರ ಅರ್ಬಾಜ್ ಖಾನ್ (Arbaaz Khan) ಅವರು ಇನ್ನೇನು ಒಂದೆರಡು ದಿನಗಳಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ ಎನ್ನಲಾಗಿದೆ.

ಹೌದು, ಇದೇ ಡಿಸೆಂಬರ್ 24ರಂದು ಮೇಕಪ್ ಆರ್ಟಿಸ್ಟ್ ಶುರಾ ಖಾನ್ (Shura Khan) ಜೊತೆ ಅರ್ಬಾಜ್ ಮದುವೆ (Marriage) ನಡೆಯಲಿದ್ದು, ಕುಟುಂಬದ ಸದಸ್ಯರು ಮತ್ತು ಆತ್ಮೀಯರಿಗೆ ಮಾತ್ರ ಆಹ್ವಾನ ನೀಡಲಾಗಿರುವ ಕಾರಣ ಆಪ್ತರಷ್ಟೇ ಮದುವೆಯಲ್ಲಿ ಭಾಗಿಯಾಗಲಿದ್ದಾರೆ ಎನ್ನಲಾಗಿದೆ. ಅದಲ್ಲದೇ ಅರ್ಬಾಜ್ ಅವರಿಗೆ ಇದು ಎರಡನೇ ಮದುವೆಯಾಗಿದ್ದು, ತನಗಿಂತ 20 ವರ್ಷಕ್ಕೂ ವಯಸ್ಸಿನಲ್ಲಿ ಕಿರಿಯಳಾಗಿರುವಳನ್ನು ವರಿಸಲಿದ್ದಾರೆ ಎನ್ನಲಾಗಿದೆ.

ಅಂದಹಾಗೆ, ಮಲೈಕಾ ಅರೋರಾ (Malaika Arora) ಜೊತೆ ಅರ್ಬಾಜ್ 1998ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಆದಾದ ಬಳಿಕ ಇವರ ದಾಂಪತ್ಯ ಜೀವನದಲ್ಲಿ ಭಿನ್ನಾಭಿಪ್ರಾಯಗಳು ಮೂಡಿದವು. ಹೀಗಾಗಿ ಇಬ್ಬರೂ ಕೂಡ 19 ವರ್ಷಗಳ ಕಾಲ ದಾಂಪತ್ಯ ಜೀವನ ನಡೆಸಿ ದೂರವಾಗಿಬಿಟ್ಟರು. ಮಲೈಕಾ ಮತ್ತು ಅರ್ಬಾಜ್ ಅವರಿಗೆ ಒಬ್ಬ ಮಗ ಕೂಡ ಇದ್ದಾನೆ.

ತದನಂತರದಲ್ಲಿ ಸ್ವಲ್ಪ ಸಮಯದವರೆಗೆ ಒಂಟಿಯಾಗಿಯೇ ಇದ್ದ ಅರ್ಬಾಜ್ ಅವರು ರೂಪದರ್ಶಿ ಜಾರ್ಜಿಯಾ ಜೊತೆ ಡೇಟ್ ಮಾಡುತ್ತಿದ್ದರು. ಆದರೆ ಕಾಲ ಕ್ರಮೇಣವಾಗಿ ಆ ಸಂಬಂಧವು ಮುರಿದು ಬಿದ್ದಿತ್ತು. ಆದರೆ ಇದೀಗ ಮತ್ತೆ ಹೊಸ ಜೀವನಕ್ಕೆ ಕಾಲಿಡುವ ಮೂಲಕ ತಾನು ಮೆಚ್ಚಿದ ಹುಡುಗಿಯನ್ನು ಮದುವೆಯಾಗುತ್ತಿದ್ದಾರೆ.

ಅರ್ಬಾಜ್ ಖಾನ್ ಅವರು ಮದುವೆಯಾಗಲಿರುವ ಶುರಾ ಖಾನ್ ಅವರು ಮೇಕಪ್ ಕಲಾವಿದೆಯಾಗಿದ್ದು, 22 ವರ್ಷ ಅಂತರ ಎನ್ನಲಾಗುತ್ತಿದೆ. ಪಟ್ನಾ ಶುಕ್ಲಾ’ (Patna Shukla) ಸಿನಿಮಾದ ಚಿತ್ರೀಕರಣದ ವೇಳೆ ಇಬ್ಬರೂ ಭೇಟಿಯಾಗಿತ್ತು. ಆ ಬಳಿಕ ಇಬ್ಬರ ಪರಿಚಯವು ಪ್ರೀತಿಗೆ ತಿರುಗಿದ್ದು ಇದೀಗ ವೈವಾಹಿಕ ಜೀವನಕ್ಕೆ ಕಾಲಿಡುವವರೆಗೂ ಬಂದು ತಲುಪಿದೆ ಎನ್ನಲಾಗಿದೆ.

Leave a Reply

Your email address will not be published. Required fields are marked *