ಸತ್ಯ ಧಾರಾವಾಹಿ ಖ್ಯಾತಿಯ ಸಿರಿರಾಜುರವರ ಮುದ್ದಾದ ಕುಟುಂಬ ಹೇಗಿದೆ ಗೊತ್ತಾ? ಇಲ್ಲಿದೆ ಅಪರೂಪದ ಫೋಟೋಸ್

ಕಳೆದ ಕೆಲವು ವರ್ಷಗಳಿಂದ ಕಿರುತೆರೆಯ ನಟ ನಟಿಯರು ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಆದರೆ ಈ ವರ್ಷದ ಮೊದಲ ತಿಂಗಳಿನಲ್ಲಿಯೇ ಹೊಸ ಜೀವನಕ್ಕೆ ಕಾಲಿಟ್ಟವರಲ್ಲಿ ʻಸತ್ಯʼ ಧಾರಾವಾಹಿ (Sathya Serial)ಖ್ಯಾತಿಯ ನಟ ಸಾಗರ್‌ ಬಿಳಿಗೌಡ (Sagar Biligowda) ಕೂಡ ಒಬ್ಬರು. ಸದ್ಯಕ್ಕೆ ನಟ ಸಾಗರ್ ಅವರು ಸಿರಿ ರಾಜುರವರ ಜೊತೆಗೆ ಸುಖವಾಗಿ ಸಂಸಾರ ಮಾಡುತ್ತಿದ್ದು, ಜೊತೆಗೆ ವೃತ್ತಿ ಜೀವನದಲ್ಲಿ ಬ್ಯುಸಿಯಾಗಿದ್ದಾರೆ.

ಇದೀಗ ಸಾಗರ್ ದಂಪತಿಗಳ ವಿಶೇಷವಾದ ವಿವಿಧ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ನಟ ಸಾಗರ್ ಹಾಗೂ ಸಿರಿ ರಾಜರವರು ಟ್ರಡಿಷನಲ್ ಉಡುಗೆ ತೊಟ್ಟು ಮುದ್ದಾಗಿ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. ಈ ಫೋಟೋ ನೋಡಿದ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುವ ಮೂಲಕ ನೂರಕ್ಕೂ ಅಧಿಕ ಲೈಕ್ಸ್ ಗಳು ಬಂದಿವೆ.

ಕಳೆದ ವರ್ಷ 2022 ರ ನವೆಂಬರ್ ತಿಂಗಳಿನಲ್ಲಿ ನಲ್ಲಿ ನಟಿ ಸಿರಿ ರಾಜು ಹಾಗೂ ಸಾಗರ್ ಬಿಳಿಗೌಡ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇದೇ ವರ್ಷ ಜನವರಿ 26ರಂದು ಸಾಗರ್ ಬಿಳಿಗೌಡ ಖ್ಯಾತ ನಟಿ ಕಮ್ ಮಾಡೆಲ್ ಸಿರಿ ರಾಜುರವರ ಜೊತೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಸಾಗರ್ ಮತ್ತು ಸಿರಿ ರಾಜು ಭೇಟಿ ಅನಿರಿಕ್ಷಿತ ಭೇಟಿಯು ಮದುವೆಯವ ರೆಗೂ ತಲುಪಿತ್ತು.

ಖಾಸಗಿ ವಾಹಿನಿಯ ಇವೆಂಟ್‌ (Event) ನಲ್ಲಿ ಸಾಗರ್- ಸಿರಿ ಪರಿಚಯವಾಗಿತ್ತು. ಇಬ್ಬರ ನಡುವೆ ಒಳ್ಳೆಯ ಫ್ರೆಂಡ್‌ಶಿಪ್‌ಯಿತ್ತು. ಆದರೆ ಮದುವೆ ಆಗುವ ಆಲೋಚನೆ ಇಬ್ಬರಿಗೂ ಇರಲಿಲ್ಲ. ಕೊನೆಗೆ ಸದ್ದಿಲ್ಲದೇ ಪ್ರೀತಿ ಚಿಗುರಿ ಮದುವೆಯಾದರು. ಹೀಗಾಗಿ ಸಿರಿ ಮತ್ತು ಸಾಗರ್ ಅವರದ್ದು ಲವ್ ಕಮ್ ಅರೇಂಜ್ಡ್ ಮ್ಯಾರೇಜ್ ಆಗಿತ್ತು.

ಸಾಗರ್ ಬಿಳಿ ಗೌಡ ಹಾಗೂ ಸಿರಿರಾಜು ಇಬ್ಬರೂ ಕೂಡ ಕಿರುತೆರೆಯಲ್ಲಿ ಗುರುತಿಸಿಕೊಂಡವರು. ಸದ್ಯಕ್ಕೆ ಸಾಗರ್ ಅವರು ಸತ್ಯ ಸೀರಿಯಲ್ ನಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. ನಟ ಸಾಗರ್ ಅವರಿಗೆ ನಟನೆಯ ಮೇಲಿನ ಆಸಕ್ತಿಯಿದ್ದ ಕಾರಣ ನಟನಾ ತರಬೇತಿ ಪಡೆದುಕೊಂಡರು. ನಂತರದಲ್ಲಿ ಕಿನ್ನರಿ (Kinnari) ಧಾರಾವಾಹಿ ಮೂಲಕ ಕಿರುತೆರೆ ಲೋಕಕ್ಕೆ ಎಂಟ್ರಿ ಕೊಟ್ಟ ಇವರು ಬಳಿಕ ‘ಮನಸಾರೆ’ (Manasare) ಧಾರಾವಾಹಿಯಲ್ಲಿಯು ಬಣ್ಣ ಹಚ್ಚಿದರು. ತದನಂತರದಲ್ಲಿ ‘ಸತ್ಯ’ ಧಾರಾವಾಹಿಯಲ್ಲಿ ಲೀಡ್ ರೋಲ್ ನಲ್ಲಿ ನಟಿಸುವ ಅವಕಾಶ ಸಿಕ್ಕಿತ್ತು.

ಇತ್ತ ನಟ ಸಾಗರ್ ಬಿಳಿಗೌಡರವರನ್ನು ಮದುವೆಯಾಗಿರುವ ಸಿರಿ ರಾಜು (Siriraju) ಕೂಡ ಮಾಡೆಲ್ ಕಮ್ ಕಿರುತೆರೆ ನಟಿಯಾಗಿದ್ದಾರೆ. ಅದರ ಜೊತೆಗೆ ಸ್ವಂತ ಬ್ಯುಸಿನೆಸ್ ಕೂಡ ಹೊಂದಿದ್ದಾರೆ. ಸಿರಿ ರಾಜು ಧಾರಾವಾಹಿ, ಸಿನಿಮಾ ಹಾಗೂ ವೆಬ್ ಸಿರೀಸ್ ನಲ್ಲಿಯೂ ನಟಿಸಿದ್ದಾರೆ. ಇದೀಗ ಈ ಜೋಡಿಯು ಒಬ್ಬರಿಗೊಬ್ಬರು ಸಾಥ್ ನೀಡುವ ಮೂಲಕ ವೃತ್ತಿ ಜೀವನದಲ್ಲಿ ಬ್ಯುಸಿಯಾಗಿದ್ದಾರೆ.

Leave a Reply

Your email address will not be published. Required fields are marked *