ಸ್ಯಾಂಡಲ್ ವುಡ್ ನ ಮುದ್ದಾದ ಜೋಡಿ ಈ ರಾಕಿಂಗ್ ಸ್ಟಾರ್ ಯಶ್ (Rocking Star Yash) ಹಾಗೂ ರಾಧಿಕಾ ಪಂಡಿತ್ (Radhika Pandith). ಸುಖಕರವಾದ ದಾಂಪತ್ಯ, ಈ ದಾಂಪತ್ಯ ಜೀವನಕ್ಕೆ ಇಬ್ಬರೂ ಮುದ್ದಾದ ಮಕ್ಕಳು. ಈ ಜೋಡಿಯ ಮುದ್ದಾದ ಕುಟುಂಬವನ್ನು ನೋಡಿದರೆ ರೋಲ್ ಮಾಡೆಲ್ ಎಂದೆನಿಸುತ್ತದೆ. ಸದ್ಯಕ್ಕೆ ರಾಧಿಕಾ ಪಂಡಿತ್ ಮಕ್ಕಳಾದ ಮೇಲೆ ಸಿನಿಮಾದಲ್ಲಿ ಕಾಣಿಸಿಕೊಳ್ಳಲೇ ಇಲ್ಲ. ಆದರೆ ಮಕ್ಕಳ ಲಾಲನೆ ಪಾಲನೆ, ಪತಿಯ ಕೆಲಸಕ್ಕೆ ಬೆನ್ನೆಲುಬಾಗಿ ಸಾಥ್ ನೀಡುತ್ತಾ ಬಂದಿದ್ದಾರೆ.
ಇತ್ತ ಯಶ್ ಅವರು ಕೂಡ ಕೆಜಿಎಫ್ 2 (KGF 2) ಸಿನಿಮಾದ ಬಳಿಕ ಯಾವ ಸಿನಿಮಾವನ್ನು ಒಪ್ಪಿಕೊಂಡಿಲ್ಲ. ಹೀಗಾಗಿ ಸಿನಿಮಾರಂಗದವರು ಹಾಗೂ ಫ್ಯಾನ್ಸ್ ಗಳಲ್ಲಿಯು ಕೂಡ ಯಶ್ ಅವರ ಮುಂದಿನ ಸಿನಿಮಾ ಯಾವಾಗ ಅನ್ನೋ ಪ್ರಶ್ನೆ ಇದ್ದೇ ಇದೆ. ಆದರೆ ಇದೀಗ ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಒಂದು ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ.
ಇದೀಗ ಕುಕಿಂಗ್ ಆಯಿಲ್ (Cooking Oil)ನ ಜಾಹೀರಾತಿಗೆ ಮತ್ತೊಮ್ಮೆ ಶೂಟಿಂಗ್ ಮಾಡಿದ್ದಾರೆ. ಈ ಶೂಟಿಂಗ್ ಫೋಟೋಗಳು ಎಲ್ಲೆಡೆ ಹರಿದಾಡುತ್ತಿದೆ. ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಅವರು ಹೊಸ ಜಾಹೀರಾತಿನಲ್ಲಿ ಆಟೋ ಡ್ರೈವರ್ ಆಗಿದ್ದಾರೆ. ಈ ಮುದ್ದಾದ ಜೋಡಿ ಹೊಸ ಜಾಹೀರಾತಿನ ಮೂಲಕ ಮತ್ತೆ ಸ್ಮಾಲ್ ಸ್ಕ್ರೀನ್ ನಲ್ಲಿ ಕಾಣಿಸಿಕೊಂಡಿದೆ.
ಅಂದಹಾಗೆ, ರಾಕಿ ಭಾಯ್ ಹಾಗೂ ರಾಧಿಕಾ ಪಂಡಿತ್ ಅವರ ಜಾಹೀರಾತಿನ ಚಿತ್ರೀಕರಣ (Shooting) ದ ವೇಳೆಯಲ್ಲಿ ಒಂದಷ್ಟು ಫೋಟೋಗಳನ್ನ ಕೂಡ ತೆಗೆಯಲಾಗಿದ್ದು, ಆ ಫೋಟೋಗಳನ್ನ ಯಶ್ ಫ್ಯಾನ್ಸ್ ತಮ್ಮ ಪೇಜ್ (Fans Page) ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ಫೋಟೋಗಳು ಸದ್ಯಕ್ಕೆ ವೈರಲ್ ಆಗುತ್ತಿದ್ದು, ಮೆಚ್ಚುಗೆ ವ್ಯಕ್ತವಾಗಿದೆ. ಅದಲ್ಲದೇ ಈ ಫೋಟೋಗಳಿಗೆ ನಾನಾ ರೀತಿಯ ಕಕಾಮೆಂಟ್ ಗಳು ಬರುತ್ತಿದೆ.
ಇತ್ತ ರಾಕಿಂಗ್ ಸ್ಟಾರ್ ಯಶ್ ಅವರು ತಮ್ಮ 19 ನೇ ಸಿನಿಮಾದ ಬಗ್ಗೆಯು ಬಗ್ಗೆ ಎಲ್ಲೂ ಏನೂ ಹೇಳಿಕೊಂಡಿಲ್ಲ. ಆದರೆ ತನ್ನ ಮುಂದಿನ ಸಿನಿಮಾವನ್ನು ದೊಡ್ಡಮಟ್ಟದಲ್ಲಿಯೇ ಬರೋ ಪ್ಲಾನ್ ಇದೆ. ಎಲ್ಲ ತಯಾರಿ ಕೂಡ ನಡೆಯುತ್ತಿದೆ. ಅತಿ ಶೀಘ್ರದಲ್ಲಿಯೇ ಎಲ್ಲ ಹೇಳುವುದಾಗಿ ತಿಳಿಸಿದ್ದರು. ಇತ್ತ ಯಶ್ ಫ್ಯಾನ್ಸ್ ತನ್ನ ಮುಂದಿನ ಸಿನಿಮಾದ ಬಗ್ಗೆ ಬಹಳ ನಿರೀಕ್ಷೆಯನ್ನುಟ್ಟುಕೊಂಡಿದ್ದು ಯಾವಾಗ ಅನೌನ್ಸ್ (Announce) ಮಾಡಲಿದ್ದಾರೆ ಎಂದು ಕಾಯುತ್ತಿದ್ದಾರೆ.