ಸ್ಯಾಂಡಲ್ ವುಡ್ ಕ್ಯೂಟ್ ಕಪಲ್ ರಾಕಿಂಗ್ ಸ್ಟಾರ್ ಯಶ್ (Rocking Star Yash) ಹಾಗೂ ರಾಧಿಕಾ ಪಂಡಿತ್ (Radhika Pandit) ಎಲ್ಲರಿಗೂ ಕೂಡ ಇಷ್ಟವಾದ ಜೋಡಿ. ಪ್ರೀತಿಸಿ ಮದುವೆಯಾಗಿ ಸುಖವಾಗಿ ಸಂಸಾರ ಮಾಡುತ್ತಿರುವ ಈ ಜೋಡಿಯು ಆಗಾಗ ಸುದ್ದಿಯಲ್ಲಿರುತ್ತಾರೆ. ಕಿರುತೆರೆಯಿಂದ ಪ್ರಾರಂಭವಾದ ಈ ಇಬ್ಬರ ಪಯಣ, ಬೆಳ್ಳಿತೆರೆ ಆದಾದ ಬಳಿಕ ದಾಂಪತ್ಯ ಜೀವನಕ್ಕೂ ಮುಂದುವರೆದು ಇಬ್ಬರ ಮಕ್ಕಳ ಜೊತೆಗೆ ಸುಖ ದಾಂಪತ್ಯ ನಡೆಸುತ್ತಿದ್ದಾರೆ.
ಪ್ರತಿಹಬ್ಬವನ್ನು ಸ್ಯಾಂಡಲ್ ವುಡ್ ಜೋಡಿ ಯಶ್ ಹಾಗೂ ರಾಧಿಕಾ ತನ್ನ ಮಕ್ಕಳ ಜೊತೆಗೆ ಗ್ರ್ಯಾಂಡ್ ಆಗಿ ಆಚರಿಸುತ್ತಾರೆ. ಈ ಬಾರಿಯ ವರಮಹಾಲಕ್ಷ್ಮಿ ಹಬ್ಬವನ್ನು ಅದ್ದೂರಿಯಾಗಿ ಆಚರಿಸಿರುವ ಈ ಜೋಡಿಯು, ಹಬ್ಬದ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಪ್ಯಾನ್ ಇಂಡಿಯಾ ಸ್ಟಾರ್ ರಾಕಿಂಗ್ ಸ್ಟಾರ್ ಯಶ್ (Rocking Star Yash) ಅವರು ಪತ್ನಿ ರಾಧಿಕಾ ಪಂಡಿತ್ (Radhika Pandith) ಹಾಗೂ ಮಕ್ಕಳೊಂದಿಗೆ ಅದ್ಧೂರಿಯಾಗಿ ವರಮಹಾಲಕ್ಷ್ಮಿ ಹಬ್ಬವನ್ನು ಆಚರಿಸಿದ್ದಾರೆ.


ಮಹಾಲಕ್ಷ್ಮಿ ಮಂಟಪ ಮಾಡಿ, ಅದಕ್ಕೆ ಸುಂದರವಾಗಿ ಅಲಂಕಾರ ಮಾಡಿದ್ದಾರೆ. ಈ ಮಂಟಪದಲ್ಲಿ ಲಕ್ಷ್ಮಿಯನ್ನು ಕೂರಿಸಿದ್ದು ಹೂವಿನ ಅಲಂಕಾರದ ಜೊತೆಗೆ ಹಣ್ಣು ಹಂಪಲನ್ನು ಇಟ್ಟು ಲಕ್ಷ್ಮಿಯನ್ನು ಪೂಜಿಸಿದ್ದಾರೆ. ಈ ಫೋಟೋಗಳನ್ನು ರಾಧಿಕಾ ಪಂಡಿತ್ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಯಶ್, ರಾಧಿಕಾ ಪಂಡಿತ್ ಹಾಗೂ ಇಬ್ಬರೂ ಮುದ್ದಾದ ಮಕ್ಕಳು ಟ್ರಡಿಷನಲ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ರಾಧಿಕಾ ಪಂಡಿತ್ ಅವರು ಹಳದಿ ಬಣ್ಣದ ನೇರಳೆ ಬಾರ್ಡರ್ ಸೀರೆ ಉಟ್ಟಿದ್ದು, ಯಶ್ ಅವರು ಪಂಚೆ ಧರಿಸಿದ್ದು, ಮಕ್ಕಳ ಕೂಡ ಟ್ರಡಿಷನಲ್ ಔಟ್ ಫಿಟ್ (Traditional Outfit) ನಲ್ಲಿ ಗಮನ ಸೆಳೆದಿದ್ದಾರೆ. ನಾನಾ ರೀತಿಯ ಫೋಟೋಗಳನ್ನು ಶೇರ್ ಮಾಡಿಕೊಂಡಿರುವ ರಾಧಿಕಾ ಪಂಡಿತ್ ಅವರು ಒಂದರಲ್ಲಿ ದೀಪ ಹಚ್ಚುತ್ತಿದ್ದಾರೆ. ಮತ್ತೊಂದು ಫೋಟೋದಲ್ಲಿ ನಟ ಯಶ್ ಅವರು ಯಥರ್ವ್ (Yatharv) ಜೊತೆ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ.


ಇನ್ನೊಂದರಲ್ಲಿ ಯಶ್ ಅವರು ಕುಟುಂಬ ಸಮೇತರಾಗಿ ಭಕ್ತಿಯಿಂದ ಲಕ್ಷ್ಮಿ ದೇವಿಗೆ ಆರತಿ ಎತ್ತಿ ವರಮಹಾಲಕ್ಷ್ಮಿ ಆರಾಧಿಸಿದ್ದಾರೆ. ಅಷ್ಟೇ ಅಲ್ಲದೇ ಮತ್ತೊಂದರಲ್ಲಿ ರಾಧಿಕಾ ಪಂಡಿತ್ ಅವರ ಮಡಿಲಿನಲ್ಲಿ ಐರಾ (Ira) ಕುಳಿತುಕೊಂಡಿದ್ದು, ಈ ಎಲ್ಲಾ ಫೋಟೋಗಳು ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಈ ಕುಟುಂಬಕ್ಕೆ ಯಾರ ದೃಷ್ಟಿಯು ಬೀಳದಿರಲಿ ಎಂದು ಕಾಮೆಂಟ್ ಮಾಡಿದ್ದಾರೆ. ಫ್ಯಾಮಿಲಿಗೆ ಹೆಚ್ಚು ಸಮಯ ಕೊಡುತ್ತಿರುವ ನಟಿ ರಾಧಿಕಾ ಪಂಡಿತ್ ಅವರನ್ನು ತೆರೆ ಮೇಲೆ ಕಾಣುವ ಕಾತುರ ಫ್ಯಾನ್ಸ್ ಗಳಿಗಿದೆ. ಹೀಗಾಗಿ ತಮ್ಮ ವೃತ್ತಿ ಜೀವನಕ್ಕೆ ಸಂಬಂಧಪಟ್ಟಂತೆ ಯಾವಾಗ ಗುಡ್ ನ್ಯೂಸ್ ನೀಡುತ್ತಾರೆ ಎಂದು ಕಾದು ಕುಳಿತಿದ್ದಾರೆ.