ಸ್ಯಾಂಡಲ್​ವುಡ್ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಅವರ ಮನೆಯಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ ಹೇಗಿತ್ತು ಗೊತ್ತಾ? ಫೋಟೋಗಳು ವೈರಲ್

ಚಂದನವನದ ಮುದ್ದಾದ ಜೋಡಿಗಳ ಪೈಕಿ ರಿಷಬ್ ಶೆಟ್ಟಿ (Rishab Shetty) ಹಾಗೂ ಪ್ರಗತಿ ಶೆಟ್ಟಿ (Pragathi Shetty) ಯವರು ಎಲ್ಲರಿಗೂ ಕೂಡ ಚಿರಪರಿಚಿತರಾಗಿದ್ದಾರೆ. ಕಾಂತಾರ ಸಿನಿಮಾದ ಬಳಿಕ ಈ ಜೋಡಿಯು ದೊಡ್ಡ ಸಂಖ್ಯೆ ಯಲ್ಲಿ ಫ್ಯಾನ್ಸ್ ಗಳನ್ನು ಸಂಪಾದಿಸಿಕೊಂಡಿದ್ದಾರೆ. ಇಬ್ಬರೂ ಮಕ್ಕಳು ಹಾಗೂ ಮುದ್ದಿನ ಮಡದಿಯಿದ್ದು ರಿಷಬ್ ಶೆಟ್ಟಿ ವೃತ್ತಿ ಜೀವನ ಹಾಗೂ ವೈಯುಕ್ತಿಕ ಜೀವನ ಎರಡನ್ನು ಬ್ಯಾಲೆನ್ಸ್ ಮಾಡಿಕೊಂಡು ಹೋಗುತ್ತಿದ್ದಾರೆ.

ಸ್ಯಾಂಡಲ್​ವುಡ್ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಅವರು ಪತ್ನಿ ಹಾಗೂ ಮಕ್ಕಳ ಜೊತೆಗೆ ವರಮಹಾಲಕ್ಷ್ಮಿ ಹಬ್ಬ (Varamahalakshmi Festival) ವನ್ನು ಆಚರಿಸಿದ್ದಾರೆ. ಪತ್ನಿ ಹಾಗೂ ಮಕ್ಕಳೊಂದಿಗೆ ಮನೆಯಲ್ಲಿ ಸಂಭ್ರಮದಿಂದ ವರಮಹಾಲಕ್ಷ್ಮಿ ಹಬ್ಬ ಆಚರಿಸಿಕೊಂಡಿದ್ದು, ಈ ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಈ ಬಾರಿ ತುಂಬ ಖುಷಿಯಿಂದ ಲಕ್ಷ್ಮಿಯ ಪೂಜೆ ಮಾಡಲಾಗಿದ್ದು ಆ ಫೋಟೋಗಳು ವೈರಲ್​ ಆಗಿವೆ.ನಟ ರಿಷಬ್ ಶೆಟ್ಟಿಯವರು ಫೋಟೋಗಳನ್ನು ಹಂಚಿಕೊಂಡು, ʻʻಕಳೆದ ಶುಭ ಶುಕ್ರವಾರ ಸಂಭ್ರಮದ ವರಮಹಾಲಕ್ಷ್ಮೀ ಹಬ್ಬವನ್ನು ಆಚರಿಸಿದ ಕ್ಷಣಗಳು. ಆ ತಾಯಿ, ಎಲ್ಲರಿಗೂ ಆಯುರಾರೋಗ್ಯ ಐಶ್ವರ್ಯವನ್ನು ನೀಡಿ ಹರಸಲಿʼʼ ಎಂದು ಬರೆದುಕೊಂಡಿದ್ದಾರೆ. ಈ ಫೋಟೋಗಳಲ್ಲಿ ರಿಷಬ್ ಶೆಟ್ಟಿ ದಂಪತಿಗಳು ಹಾಗೂ ಮಕ್ಕಳಿಬ್ಬರೂ ಟ್ರಡಿಷನಲ್ ಉಡುಗೆಯಲ್ಲಿ ಕಾಣಿಸಿಕೊಂಡಿದ್ದಾರೆ.

ನಟ ರಿಷಬ್ ಶೆಟ್ಟಿಯವರ ಕುಟುಂಬವು ಹಬ್ಬವನ್ನು ಸಂಭ್ರಮಿಸಿರುವ ಈ ಮುದ್ದಾದ ಫೋಟೋ ನೋಡಿದ ನೆಟ್ಟಿಗರು ನಾನಾ ರೀತಿಯಲ್ಲಿ ಮೆಚ್ಚುಗೆಯ ಕಾಮೆಂಟ್ ಮಾಡುತ್ತಿದ್ದಾರೆ. ರಿಷಬ್ ಹಾಗೂ ಪ್ರಗತಿಯವರದ್ದು ಲವ್ ಮ್ಯಾರೇಜ್ (Love Marriage). ಈ ಮುದ್ದಾದ ಜೋಡಿಯು ಎಲ್ಲಿಯೂ ಕೂಡ ತನ್ನ ಲವ್ ಸ್ಟೋರಿ (Love Story) ಬಗ್ಗೆ ರಿವೀಲ್ ಮಾಡಿರಲಿಲ್ಲ. ಆದರೆ ಕಾಂತಾರ ಸಮಯದಲ್ಲಿ ನಡೆದಿದ್ದ ಸಂದರ್ಶನಗಳಲ್ಲಿ ಈ ಬಗ್ಗೆ ಪ್ರಗತಿ ಶೆಟ್ಟಿಯೇ ಲವ್ ಸ್ಟೋರಿ ಬಗ್ಗೆ ಹೇಳಿದ್ದರು.

ಉಳಿದವರು ಕಂಡಂತೆ ಚಿತ್ರ ನೋಡಿ ರಕ್ಷಿತ್ ಶೆಟ್ಟಿ ಅಭಿಮಾನಿಯಾಗಿದ್ದ ಪ್ರಗತಿ ಶೆಟ್ಟಿ ರಿಕ್ಕಿ (Rikki) ನೋಡಲು ಚಿತ್ರಮಂದಿರಕ್ಕೆ ಹೋಗಿದ್ದರು.ಈ ವೇಳೆಯಲ್ಲಿ ಸ್ನೇಹಿತೆಯರು ಹೇಳಿದ ಕಾರಣಕ್ಕಾಗಿ ರಿಷಬ್ ಶೆಟ್ಟಿ ಬಳಿ ತೆರಳಿ ಮಾತನಾಡಿ ಸೆಲ್ಫಿ ತೆಗೆದುಕೊಂಡಿದ್ದರು. ಇದು ರಿಷಬ್ ಶೆಟ್ಟಿ ಹಾಗೂ ಪ್ರಗತಿ ಶೆಟ್ಟಿಯವರ ಮೊದಲ ಭೇಟಿಯಾಗಿತ್ತು. ಹೌದು, ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿದ್ದ ಪ್ರಗತಿ ಶೆಟ್ಟಿ, “ಎಲ್ಲರೂ ರಕ್ಷಿತ್ ಶೆಟ್ಟಿ (Rakshith Shetty) ಜೊತೆ ಸೆಲ್ಫಿ ತೆಗೆದುಕೊಳ್ಳಲು ಮುಗಿಬೀಳುತ್ತಿದ್ದ ಸಂದರ್ಭದಲ್ಲಿ ಅಲ್ಲಿಯೇ ಒಂಟಿಯಾಗಿ ನಿಂತಿದ್ದ ರಿಷಬ್ ಶೆಟ್ಟಿ ಬಳಿ ತೆರಳಿದೆವು.

ಅವರೂ ಸಹ ನಮ್ಮ ಊರಿನ ಕಡೆಯವರಾದ ಕಾರಣ ಅವರ ಬಳಿ ನಮ್ಮ ಊರಿನವರು ನೀವು, ಅಲ್ಲಿಂದ ಬಂದು ಚಿತ್ರರಂಗದಲ್ಲಿ ಇಷ್ಟೆಲ್ಲಾ ಮಾಡುತ್ತಿರುವುದು ಹೆಮ್ಮೆ ಎನಿಸುತ್ತೆ ಎಂದು ಹೇಳಿದ್ದೆ, ಅದೇ ಮೊದಲ ಬಾರಿಗೆ ಅವರ ಜೊತೆಗೆ ನಾನು ಮಾತನಾಡಿದ್ದು, ಅವರ ಹೆಸರೂ ಸಹ ತಿಳಿದಿದ್ದು. ಆದಾದ ಬಳಿಕ ರಿಷಬ್ ಶೆಟ್ಟಿಯವರೇ ನನ್ನ ಫೇಸ್‌ಬುಕ್ ಖಾತೆ ಹುಡುಕಿ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿ ಬಳಿಕ ಇಬ್ಬರ ನಡುವೆ ಚಾಟಿಂಗ್ ಶುರುವಾಯಿತು. ಹೀಗೆ ಆರಂಭವಾದ ಸ್ನೇಹ ಪ್ರೀತಿಗೆ ತಿರುಗಿ ಒಂದು ವರ್ಷದ ಒಳಗೇ ಇಬ್ಬರೂ ವಿವಾಹವಾದೆವು” ಎಂದಿದ್ದರು.

ಸದ್ಯಕ್ಕೆ ನಟ ರಿಷಬ್ ಶೆಟ್ಟಿಯವರು ಕಾಂತಾರ 2 (Kaantara 2) ಸಿನಿಮಾದ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಕಾಂತಾರ 2 ಚಿತ್ರದ ಶೂಟಿಂಗ್ ಈ ವರ್ಷ ನವೆಂಬರ್ 2023 ರಲ್ಲಿ ನಡೆಯಲಿದೆ. ನವೆಂಬರ್ 1 (November 1) ರಿಂದ ಮೊದಲ ಶೆಡ್ಯೂಲ್ ಶೂಟಿಂಗ್ ಆರಂಭವಾಗಲಿದೆ ಎನ್ನಲಾಗಿದೆ. ಸದ್ಯಕ್ಕೆ ಸ್ಕ್ರಿಪ್ಟ್ ಕೆಲಸಗಳು ಮುಗಿದಿದ್ದು ಪ್ರೀ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ ಎನ್ನಲಾಗಿದೆ.

Leave a Reply

Your email address will not be published. Required fields are marked *