ಪಾಂಡು ರಂಗ ವಿಠಲ ಚಿತ್ರದಲ್ಲಿ ರವಿ ಮಾಮ ಜೋತೆ ರೋಮ್ಯಾನ್ಸ್ ಮಾಡಿದ್ದ ಖ್ಯಾತ ನಟಿ ರಂಭಾರವರ ಮುದ್ದಾದ ಕುಟುಂಬ ಹೇಗಿದೆ ನೋಡಿ!!

ದಕ್ಷಿಣ ಭಾರತ ಸಿನಿಮಾರಂಗದಲ್ಲಿ ಗುರುತಿಸಿಕೊಂಡಿರುವ ನಟ ನಟಿಯರು ಇವತ್ತಿಗೂ ಕೂಡ ಅಷ್ಟೇ ಬೇಡಿಕೆಯನ್ನು ಹೊಂದಿದ್ದಾರೆ. ಅಂತಹವರ ಸಾಲಿಗೆ ದಕ್ಷಿಣ ಭಾರತ ಖ್ಯಾತಿಯ ನಟಿ ರಂಭಾ (Rambha) ಕೂಡ ಒಬ್ಬರು. ತಮ್ಮ ನಟನೆ ಹಾಗೂ ಸೌಂದರ್ಯದಿಂದಲೇ ಎಲ್ಲರ ಮನಸ್ಸು ಗೆದ್ದುಕೊಂಡಿದ್ದಾರೆ. ಒಂಬತ್ತರ ದಶಕದಲ್ಲಿ ಪ್ರಮುಖ ನಟಿಯರಲ್ಲಿ ಒಬ್ಬರಾಗಿದ್ದ ರಂಭಾರವರ ಮುದ್ದಾದ ಕುಟುಂಬದ ಫೋಟೋವೊಂದು ಸೋಶಿಯಲ್ ಮೀಡಿಯಾ (Social Media) ದಲ್ಲಿ ವೈರಲ್ ಆಗಿವೆ.

ಈ ಫೋಟೋದಲ್ಲಿ ಮುದ್ದಿನ ಪತಿ ಹಾಗೂ ಮಕ್ಕಳು ಜೊತೆಗೆ ರಂಭಾ ಕಾಣಿಸಿಕೊಂಡಿದ್ದಾರೆ. ಈ ಫೋಟೋವನ್ನು ನೋಡಿದರೆ ನಟಿ ರಂಭಾರವರ ಕುಟುಂಬವು ಯಾವುದೋ ಸಮಾರಂಭದಲ್ಲಿ ಭಾಗಿಯಾಗಿದ್ದಾರೆ ಎನ್ನುವುದನ್ನು ಸೂಚಿಸುತ್ತದೆ. ನಟಿಯ ಈ ಮುದ್ದಾದ ಕುಟುಂಬದ ಫೋಟೋಗೆ ಮುನ್ನೂರಕ್ಕೂ ಹೆಚ್ಚು ವ್ಯೂಸ್ ಕಂಡಿದೆ.

ನಟಿ ರಂಭಾರವರು ಕನ್ನಡ (Kannada), ಹಿಂದಿ (Hindi), ತೆಲುಗು (Telugu), ತಮಿಳು (Tamil) ಹಾಗೂ ಮಲಯಾಳಂ (Malayalam) ಸಿನಿಮಾಗಳಲ್ಲಿ ಭಾಷೆಯಲ್ಲಿ ಸೇರಿದಂತೆ ಸುಮಾರು ಏಳು ಭಾಷೆಯಾ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡವರು. ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ಎಲ್ಲಾ ಭಾಷೆಯ ಚಿತ್ರರಂಗದಲ್ಲಿಯೂ ಬಹುಬೇಡಿಕೆಯನ್ನು ಹೊಂದಿದ್ದದವರು. ನಟಿ ರಂಭಾರವರ ಹಿನ್ನಲೆಯನ್ನು ಗಮನಿಸುವುದಾದರೆ, ಹುಟ್ಟಿದ್ದು ಆಂಧ್ರಪ್ರದೇಶ (Andhrapradesh) ದಲ್ಲಿ, ನಟಿ ರಂಭಾರವರ ಮೂಲ ಹೆಸರು ವಿಜಯಲಕ್ಷ್ಮಿ (Vijaya Lakshmi). ತಮ್ಮ ಹದಿನೈದನೇ ವಯಸ್ಸಿನಲ್ಲಿ ಮಲಯಾಳಂ (Malayalam) ಸಿನಿಮಾಕ್ಕೆ ಎಂಟ್ರಿ ಕೊಟ್ಟರು.

ತೆಲುಗಿನ ಆ ಒಕ್ಕಟಿ ಅಡಕ್ಕು (Okkati Adakku) ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದರು. ಈ ಸಿನಿಮಾದ ಬಳಿಕ ನಟಿಗೆ ಅವಕಾಶಗಳು ಬಂದವು. ಸಿನಿಮಾರಂಗದಲ್ಲಿ ಬಹುಬೇಡಿಕೆಯ ನಟಿಯಾಗಿದ್ದ ರಂಭಾರವರು ವೈವಾಹಿಕ ಜೀವನಕ್ಕೆ ಕಾಲಿಟ್ಟರು.2010 ರಲ್ಲಿ ನಟಿ ರಂಭಾ ಕೆನಾಡಾ ಮೂಲದ ತಮಿಳು ಉದ್ಯಮಿ ಇಂದ್ರನ್ (Indran) ಜೊತೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು.

ನಟಿ ರಂಭಾ ಅದ್ದೂರಿಯಾಗಿ ತಿರುಮಲ (Tirumala) ದಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿ ವಿವಾಹವಾದರು. ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಳಿಕ ಅವಕಾಶಗಳು ಕಡಿಮೆಯಾದವು.ರಂಭಾ ದಂಪತಿಗಳಿಗೆ ಎರಡು ಹೆಣ್ಣು ಮಕ್ಕಳು ಹಾಗೂ ಒಂದು ಗಂಡು ಮಗು ಜನಿಸಿದರು. ತನ್ನ ಪತಿ ಹಾಗೂ ಮಕ್ಕಳ ಜೊತೆ ನಟಿ ರಂಭಾ ಟೊರೊಂಟೊ (Toronto) ದಲ್ಲಿ ನೆಲೆಸಿದ್ದರು.ನಟಿ ರಂಭಾರವರ ದಾಂಪತ್ಯ ಜೀವನದಲ್ಲಿ ಬಿ-ರುಕು ಮೂಡಿತ್ತು. ನಟಿ ರಂಭಾ ತಮ್ಮ ಪತಿಯಿಂದ ದೂರವಾದರು.

ಇತ್ತ ಪತಿ ಇಂದ್ರನ್ ನಟಿ ರಂಭಾ ಅವರಿಗೆ ಪ್ರತಿ ತಿಂಗಳು ಎರಡು ಲಕ್ಷ ಸಹಾಯಧನ ನೀಡುವುದಾಗಿ ತಿಳಿಸಿದ್ದರು. ಆದರೆ ಆ ಹಣವನ್ನು ಸರಿಯಾದ ಸಮಯಕ್ಕೆ ನೀಡುತ್ತಿರಲಿಲ್ಲ. ಈ ಕಾರಣದಿಂದಾಗಿ ರಂಭಾರವರು ಪತಿಯ ಬಗ್ಗೆ ಆರೋಪ ಮಾಡಿದ್ದರು. ವೈವಾಹಿಕ ಜೀವನದಿಂದ ದೂರ ಉಳಿದ ಬಳಿಕ ಮತ್ತೆ ತಮಿಳುಹಾಗೂ ತೆಲುಗು ಶೋ (Tamil And Telugu Show) ನಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಳ್ಳುವ ಸಕ್ರಿಯರಾಗಿದ್ದು ಇವತ್ತಿಗೂ ಕೂಡ ಅಷ್ಟೇ ಬೇಡಿಕೆಯನ್ನು ಹೊಂದಿದ್ದಾರೆ.

Leave a Reply

Your email address will not be published. Required fields are marked *