ಮುದ್ದಿನ ಅಣ್ಣ ರಕ್ಷಿತ್ ಶೆಟ್ಟಿಗೆ ರಾಖಿ ಕಟ್ಟಿ ಸಂಭ್ರಮಿಸಿದ ರಿಷಬ್ ಶೆಟ್ಟಿ ಮಡದಿ ಪ್ರಗತಿ ಶೆಟ್ಟಿ, ಫೋಟೋಗಳು ವೈರಲ್

ಸೋದರ ಸೋದರಿಯರ ಬಂಧವನ್ನು ಸಾರುವ ಈ ರಕ್ಷಾ ಬಂಧನ ಹಬ್ಬವನ್ನು ದೇಶಾದ್ಯಂತ ಎಲ್ಲರೂ ಕೂಡ ಸಂಭ್ರಮದಿಂದ ಆಚರಿಸಿಕೊಂಡಿದ್ದಾರೆ. ಅದರಲ್ಲಿಯು ಸೆಲೆಬ್ರಿಟಿಗಳ ಮನೆಯಲ್ಲಿ ರಕ್ಷಾ ಬಂಧನ ಹಬ್ಬದ ಸಂಭ್ರಮವು ಜೋರಾಗಿಯೇ ಇತ್ತು. ನಟ ಕಮ್ ನಿರ್ದೇಶಕ ರಿಷಭ್ ಶೆಟ್ಟಿ ಪತ್ನಿ ಪ್ರಗತಿ ಶೆಟ್ಟಿ (Rishab Shetty Wife Pragati Shetty) ರಕ್ಷಾ ಬಂಧನ ಹಬ್ಬವನ್ನು ನಟ, ಸೋದರ ರಕ್ಷಿತ್ ಶೆಟ್ಟಿ (Rakshit Shetty) ಜೊತೆ ಸಂಭ್ರಮದಿಂದ ಆಚರಿಸಿದ್ದಾರೆ. ಈ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ನನ್ನ ಚಿಂಟು ಅಣ್ಣನ ಜೊತೆ ರಕ್ಷಾಬಂಧನದ ಕ್ಷಣಗಳು ಎಲ್ಲರಿಗೂ ರಕ್ಷಾಬಂಧನ ಹಬ್ಬದ ಶುಭಾಶಯಗಳು” ಎಂದು ಪ್ರಗತಿ ಶೆಟ್ಟಿ ಬರೆದುಕೊಂಡಿದ್ದಾರೆ. ಸದ್ಯಕ್ಕೆ ಪ್ರಗತಿ ಶೆಟ್ಟಿ ಹಾಗೂ ರಕ್ಷಿತ್ ಶೆಟ್ಟಿಯವರ ರಕ್ಷಾ ಬಂಧನವನ್ನು ಸಡಗರದಿಂದ ಆಚರಿಸಿಕೊಂಡಿರುವ ಫೋಟೋವೊಂದು ವೈರಲ್ ಆಗಿವೆ. ನೆಟ್ಟಿಗರು ಈ ಫೋಟೋ ನೋಡಿ ಅಣ್ಣ ತಂಗಿಯು ಹೀಗೆ ಸಂತೋಷದಿಂದ ಇರಲಿ ಎಂದು ಕಾಮೆಂಟ್ ಮಾಡಿದ್ದಾರೆ.

ನಟ ಕಮ್ ನಿರ್ದೇಶಕ ರಿಷಬ್ ಶೆಟ್ಟಿ (Rishab Shetty) ಮಡದಿ ಪ್ರಗತಿ ಶೆಟ್ಟಿ ಹಾಗೂ ರಕ್ಷಿತ್ ಶೆಟ್ಟಿಯವರು ಒಳ್ಳೆಯ ಸ್ನೇಹಿತರು. ಸಿನಿಮಾ ಕಾರ್ಯಕ್ರಮ ಹೊರತು ಪಡಿಸಿ, ಬಿಡುವು ಸಿಕ್ಕಾಗಲೆಲ್ಲಾ ಭೇಟಿಯಾಗುತ್ತಿರುತ್ತಾರೆ. ರಿಷಭ್ ನನಗೆ ಬರೀ ಸ್ನೇಹಿತ ಮಾತ್ರವಲ್ಲ ಆತ ನನ್ನ ಪ್ರೀತಿಯ ಅಣ್ಣ ಎಂದು ಪ್ರಗತಿ ಶೆಟ್ಟಿ ಹೇಳಿಕೊಂಡದ್ದು ಇದೆ.

ನಟಿ ಪ್ರಗತಿ ಶೆಟ್ಟಿಯವರುಈ ಹಿಂದೆ ರಕ್ಷಿತ್ ಶೆಟ್ಟಿ ಹುಟ್ಟುಹಬ್ಬದ ವೇಳೆ ತುಂಬಾ ವಿಶೇಷವಾಗಿ ವಿಶ್ ಮಾಡಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದ ಪ್ರಗತಿಯವರು, ಕಷ್ಟ ಸುಖ ಏನೇ ಬಂದರೂ ಮೊದಲಿಗೆ ನನಗೆ ನೆನಪಾಗೋದು ನೀನೆ, ನಿನ್ನಿಂದಲೇ ನನಗೆ ಆಧ್ಯಾತ್ಮದ ಮೇಲೆ ಆಸಕ್ತಿ ಬಂದಿದೆ. ನನಗೆ ಸದಾ ಭಾವನಾತ್ಮಕ ಬೆಂಬಲ ನೀಡುವ ನನಗಾಗಿ ಸದಾ ಇರುವ ನನ್ನ ಪ್ರೀತಿಯ ಚಿಂಟು ಅಣ್ಣ ಎಂದು ಬರೆದುಕೊಂಡಿದ್ದರು. ನಟಿಯ ಪ್ರಗತಿ ಶೆಟ್ಟಿಯವರ ಈ ಸಾಲುಗಳೇ ಇವರಿಬ್ಬರ ಬಾಂಧವ್ಯವು ಎಷ್ಟು ಸಾಂಗ್ ಆಗಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ.

ಸದ್ಯಕ್ಕೆ ನಟ, ನಿರ್ದೇಶಕ ಹಾಗೂ ನಿರ್ಮಾಪಕ ರಕ್ಷಿತ್ ಶೆಟ್ಟಿಯವರು ತಮ್ಮ ಸಿನಿ ಕೆರಿಯರ್ ನಲ್ಲಿ ಬ್ಯುಸಿಯಾಗಿದ್ದಾರೆ. ರಕ್ಷಿತ್‌ ಶೆಟ್ಟಿ ಅವರ ಸಪ್ತಸಾಗರದಾಚೆ ಎಲ್ಲೊ (Sapta Sagaradache Yello) ಸಿನಿಮಾ ಬಿಡುಗಡೆಗೆ ರೆಡಿಯಾಗಿದೆ. ಸೆಪ್ಟೆಂಬರ್ 1 (September 1) ರಂದು ಸಿನಿಮಾ ತೆರೆ ಕಾಣಲಿದೆ. ಸದ್ಯಕ್ಕೆ ಸಿನಿಮಾ ತಂಡ ಸಿನಿಮಾದ ಪ್ರಮೋಷನ್‌ (Pramotion) ನಲ್ಲಿ ಬ್ಯುಸಿಯಾಗಿದ್ದು, ಸಿನಿಮಾದ ಬಗ್ಗೆ ಬಹಳ ನಿರೀಕ್ಷೆಯಿದೆ.

Leave a Reply

Your email address will not be published. Required fields are marked *