ಬಿಗ್ ಬಾಸ್ ಕೊಟ್ಟ ಸಂಭಾವನೆ ಬಗ್ಗೆ ನಟ ರಕ್ಷಕ್ ಬುಲೆಟ್ ಸ್ಫೋಟಕ ಹೇಳಿಕೆ ವೈರಲ್

ಕನ್ನಡದ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್(Bigg Boss) ಒಂದಾಗಿದ್ದು ಇದು ಅನೇಕ ನಟ ನಟಿಯರಿಗೆ ಮತ್ತು ಸೆಲೆಬ್ರಿಟಿಗಳಿಗೆ ಒಂದೊಳ್ಳೆ ವೇದಿಕೆ ನೀಡಿದೆ. ಅನೇಕ ಯುವ ಪ್ರತಿಭೆಗಳು ಕೂಡ ಸ್ಥಾನ ಗಿಟ್ಟಿಸಿಕೊಳ್ಳುವ ನೆಲೆಯಾಗಿ ಈ ಒಂದು ರಿಯಾಲಿಟಿ ಶೋ ಮುಂಚುಣಿಯಲ್ಲಿದ್ದು ಅನೇಕ ಜನರು ಈ ರಿಯಾಲಿಟಿ ಶೋ ನಲ್ಲಿ ಸ್ಪರ್ಧಿಸಲು ಕಾತುರರಾಗಿದ್ದಾರೆ.

ಇದೇ ರೀತಿ ಈ ಬಾರಿ ಸೀಸನ್ 10 ಕೂಡ ಕಿಚ್ಚ ಸುದೀಪ್ ಸಾರಥ್ಯದಲ್ಲಿ ಅತ್ಯುತ್ತಮವಾಗಿ ಮೂಡಿ ಬರುತ್ತಿದ್ದು ಕಂಟೆಸ್ಟೆಂಟ್ ವಿಚಾರಗಳು ಆಗಾಗ ಸುದ್ದಿ ಆಗುತ್ತಲೇ ಇದೆ. ಈ 10ನೇ ಸೀಸನ್ ಆರಂಭವಾಗು ಯಾರು ಸ್ಪರ್ಧಿಗಳು ಎಂಬ ಕುತೂಹಲಕ್ಕೆ ತೆರೆ ಬಿದ್ದು ಒಳ್ಳೊಳ್ಳೆ ಸ್ಪರ್ಧಿಗಳೇ ಈ ಸೀಸನ್ ನಲ್ಲಿ ಚಾಪು ಮೂಡಿಸಿದ್ದರು. ಇನ್ನೇನು ಕೆಲ ದಿನದಲ್ಲಿ ಈ ಬಾರಿಯ ಸೀಸನ್ ಮುಗಿಯುವ ಹಂತದಲ್ಲಿದ್ದು ಯಾರು ವಿನ್ ಆಗಬಹುದು ಎಂಬ ಗೊಂದಲ ನಿರ್ಮಾಣವಾಗುತ್ತಿದೆ.

ಅದರ ನಡುವಲ್ಲೇ ಎಲಿಮಿನೆಟ್ ಆಗುವ ಸದಸ್ಯರು ಎಷ್ಟು ಸಂಭಾವನೆ ಪಡಿತಾರೆ ಎಂಬ ಬಗ್ಗೆ ಕುತೂಹಲ ಮಾಹಿತಿಯೊಂದು ಇದೀಗ ಹೊರಬಿದ್ದಿದೆ.ಈಗಾಗಲೇ ಬಿಗ್ ಬಾಸ್ ಸೀಸನ್ 10ರಿಂದ ಅನೇಕರು ಮನೆಯಿಂದ ಹೊರನಡೆದಿದ್ದು ಅವರಿಗೆ ಎಷ್ಟು ಸಂಭಾವನೆ ಸಿಕ್ಕಿರಬಹುದು ಎಂಬ ಕುತೂಹಲಕ್ಕೆ ಇತ್ತೀಚೆಗಷ್ಟೇ ತೆರೆ ಬಿದ್ದಿತ್ತು. ಮೈಕಲ್ ಅಜಯ್(Michael) ಸ್ನೇಹಿತ್ (Snehith) ರಕ್ಷಕ್ ಬುಲೆಟ್ (Rakshak) ನೀತು ವನಜಾಕ್ಷಿ (Nithu Vanajekshi) ಸಹಿತ ಅನೇಕರು ಈ ಸಂಭಾವನೆ ಬಗ್ಗೆ ಇತ್ತೀಚೆಗೆ ಮಾಧ್ಯಮದ ಮುಂದೆ ಮಾತಾಡಿದ್ದಾರೆ.

ಅದರಲ್ಲಿ ನಟ ಬುಲೆಟ್ ಪ್ರಕಾಶ್ ಮಗ ರಕ್ಷಕ್(Rakshak) ನೀಡಿದ್ದ ಹೇಳಿಕೆ ಮಾತ್ರ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಗುರುಶಿಷ್ಯರು (Guru shishyaru) ಸಿನಿಮಾ ಮೂಲಕ ಬುಲೆಟ್ ಪ್ರಕಾಶ್ ಮಗ ರಕ್ಷಕ್ ಅವರು ಟ್ರೆಂಡ್ ಸೃಷ್ಟಿ ಮಾಡಿದ್ದು ಆ ಸಿನೆಮಾ ಅವರಿಗೊಂದು ಉತ್ತಮ ಅವಕಾಶ ನೀಡಿತ್ತು. ಬಳಿಕ ಅವರಿಗೆ ಬಿಗ್ ಬಾಸ್ ನಂತಹ ದೊಡ್ಡ ವೇದಿಕೆಯೇ ಸಿಕ್ಕಿದೆ.

ಆದರೆ ಹೆಚ್ಚು ಕಾಲ ಮನೆಯ ಒಳಗೆ ಇರಲು ಅವಕಾಶ ಸಿಗದೆ ಕೆಲವೇ ವಾರದಲ್ಲಿ ಮನೆಯಿಂದ ಹೊರ ನಡೆದಿದ್ದರು. ಆದರೆ ಈಗ ಅವರಿಗೆ ಅನೇಕ ಸಾಮಾಜಿಕ ಕಾರ್ಯಕ್ರಮದಲ್ಲಿ ಅವಕಾಶ ಸಿಗುತ್ತಿದೆ. ಇತ್ತೀಚಿನ ಒಂದು ಸಂದರ್ಶನದಲ್ಲಿ ಬಿಗ್ ಬಾಸ್ ಸಂಭಾವನೆ ಬಗ್ಗೆ ಹೇಳಿಕೆ ಸಹ ನೀಡಿದ್ದಾರೆ.ಇತ್ತೀಚೆಗೆ ಖಾಸಗಿ ವಾಹಿನಿಯೊಂದರ ಸಂದರ್ಶನದಲ್ಲಿ ಬಿಗ್ ಬಾಸ್ ನಿಂದ ನಾನು ಮನೆ ಅಥವಾ ಜಾಗ ಖರೀದಿ ಮಾಡಿರಬಹುದೆಂದು ಜನ ಮಾತಾಡಿಕೊಳ್ಳುತ್ತಾರೆ. ಆದರೆ ನನಗೆ ಒಂದು ಟನ್ ಇಟ್ಟಿಗೆ ಖರೀದಿ ಮಾಡಲು ಸಹ ಆಗಲಿಲ್ಲ.

ವಾಸ್ತವ ವಿಚಾರ ಬೇರೆನೇ ಇದೆ. ನನಗೆ ಬಿಗ್ ಬಾಸ್ ಸ್ಪರ್ಧಿಸಲು ಕಾಲ್ ಬಂದಾಗ ನಾನು ಬೇರೆ ಒಂದು ಕೆಲಸದಲ್ಲಿ ಬ್ಯುಸಿ ಇದ್ದೆ. ಆಗ ನನಗೆ ಕೊಡಬೇಕೆಂದಿದ್ದ ಸಂಭಾವನೆ ಬಗ್ಗೆ ನಾನು ಸರಿಯಾಗಿ ಯೋಚನೆ ಮಾಡಿಲ್ಲ. ನಮ್ಮ ಮನೆಯಲ್ಲಿಯೂ ಹೋಗು ಎಂದೆ ತಿಳಿಸಿದ್ದರು.ಸರಿಯಾಗಿ ಯೋಚನೆ ಮಾಡದೆ ಕಡಿಮೆ ಸಂಭಾವನೆಗೆ ಬಿಗ್ ಬಾಸ್ ಬರಲು ಒಪ್ಪಿ ಬಕ್ರಾ ಆಗಿ ಬಿಟ್ಟೆ. ಕೆಲವರಿಗೆ ಸಿಕ್ಕ ಸಂಭಾವನೆ ಕೇಳಿದರೆ ಹೊಟ್ಟೆ ಉರಿಯುತ್ತದೆ. ಈಗ ಅಷ್ಟು ಹಣವನ್ನು ಹೊರಗಿನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮೂಲಕ ರಿಕವರಿ ಮಾಡುತ್ತಿರುವೆ. ಕಡಿಮೆ ಸಂಭಾವನೆ ನೀಡಿದ್ದಕ್ಕೆ ಬೇಸರ ಇದೆ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *