ಗ್ರೀನ್ ಕಲರ್ ಉಡುಗೆಯಲ್ಲಿ ಸ್ಟೈಲಿಶ್ ಆಗಿ ಫೋಟೋ ಶೂಟ್ ಮಾಡಿಸಿದ ನಟಿ ರಾಗಿಣಿ ಪ್ರಜ್ವಲ್

ಚಂದನವನದ ಮುದ್ದಾದ ದಂಪತಿಗಳಲ್ಲಿ ಪ್ರಜ್ವಲ್ ದೇವರಾಜ್ (Prajwal Devaraj) ಹಾಗೂ ರಾಗಿಣಿ (Ragini) ಯವರು ಕೂಡ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾರೆ. ಸ್ನೇಹಿತರ ಜೊತೆಗೆ ಆಗಾಗ ಔಟಿಂಗ್ ಹೋಗುವ ರಾಗಿಣಿ ಪ್ರಜ್ವಲ್ ಸೋಶಿಯಲ್ ಮೀಡಿಯಾದಲ್ಲಿ ತುಂಬಾನೇ ಆಕ್ಟಿವ್ ಎನ್ನುವುದನ್ನು ಮತ್ತೆ ಮತ್ತೆ ಹೇಳಬೇಕಾಗಿಲ್ಲ. ಜಿಮ್, ಡ್ಯಾನ್ಸ್ ಹಾಗೂ ಔಟಿಂಗ್ ವಿಡಿಯೋಗಳನ್ನು ಅಭಿಮಾನಿಗಳ ಜೊತೆಗೆ ಶೇರ್ ಮಾಡಿಕೊಳ್ಳುತ್ತಿರುತ್ತಾರೆ.

ನಟಿ ಕಮ್ ಮಾಡೆಲ್ ರಾಗಿಣಿ ಪ್ರಜ್ವಲ್ ಅವರು ಆಗಾಗ ಫೋಟೋ ಶೂಟ್ (Photo Shoot) ಮಾಡಿಸಿಕೊಂಡು ಸ್ಟೈಲಿಶ್ ಲುಕ್ ನಲ್ಲಿಯೇ ಗಮನ ಸೆಳೆಯುತ್ತಿರುತ್ತಾರೆ. ಆದರೆ ಇದೀಗ ಹಸಿರು ಬಣ್ಣದ ಶಾರ್ಟ್ ಉಡುಗೆ ತೊಟ್ಟು, ಬ್ಲಾಕ್ ಕಲರ್ ಕೂಲಿಂಗ್ ಗ್ಲಾಸ್ ಹಾಕಿಕೊಂಡು ಕೈಯಲ್ಲೊಂದು ಕಪ್ಪು ಬಣ್ಣದ ವ್ಯಾನಿಟಿ ಬ್ಯಾಗ್ ಹಿಡಿದು ಪೋಸ್ ನೀಡಿದ್ದಾರೆ. ಈ ಫೋಟೋ ಶೇರ್ ಮಾಡಿಕೊಂಡಿರುವ ನಟಿ ರಾಗಿಣಿ ಪ್ರಜ್ವಲ್, “ನಿಮ್ಮ ಮೌಲ್ಯವನ್ನು ಅರಿತುಕೊಳ್ಳಿ ಮತ್ತು ನೀವು ವಿಭಿನ್ನವಾಗಿ ಚಲಿಸುತ್ತೀರಿ” ಎಂದು ಬರೆದುಕೊಂಡಿದ್ದಾರೆ. ನಟಿಯ ಈ ಫೋಟೋಗಳು ವೈರಲ್ ಆಗಿದ್ದು, ಇಪ್ಪತ್ತೆರಡು ಸಾವಿರಕ್ಕೂ ಅಧಿಕ ವ್ಯೂಸ್ ಕಂಡಿದೆ.

ಪ್ರಜ್ವಲ್ ದೇವರಾಜ್ ದಂಪತಿಗಳು ಈ ಇಬ್ಬರೂ ಸಿನಿಮಾರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ರಾಗಿಣಿ ಪ್ರಜ್ವಲ್ ಅವರು ಕೂಡ ನಟಿ ಕಮ್ ಮಾಡೆಲ್. ರಾಗಿಣಿ ಪ್ರಜ್ವಲ್ ಬೆಂಗಳೂರಿನಲ್ಲಿ ಹುಟ್ಟಿ ಬೆಳೆದರು. ಡಾನ್ಸ್ ಎಂದರೆ ರಾಗಿಣಿ ಪ್ರಜ್ವಲ್ ಅವರು ತುಂಬಾನೇ ಇಷ್ಟಪಡುತ್ತಾರೆ ಎನ್ನುವುದಕ್ಕೆ ಈ ವಿಡಿಯೋನೇ ಸಾಕ್ಷಿ. ನಾಲ್ಕು ವರ್ಷದ ಪುಟ್ಟ ಬಾಲಕಿಯಾಗಿರುವಾಗಲೇ ಭರತನಾಟ್ಯ ಕಲಿತರು. ರಾಜೇಂದ್ರರವರ ಅಭಿನವ ಡ್ಯಾನ್ಸ್ ಕಂಪನಿಯಲ್ಲಿ ರಾಗಿಣಿ ಚಂದ್ರನ್ ಕಥಕ್ ಡ್ಯಾನ್ಸ್ ಹಾಗೂ ವಿಶ್ವಾದ್ಯಂತ ಕಥಕ್ ನೃತ್ಯ ಕಾರ್ಯಕ್ರಮಗಳನ್ನು ನೀಡಿ ಸೈ ಎನಿಸಿಕೊಂಡಿದ್ದಾರೆ.

ಈಗಾಗಲೇ ಸ್ಯಾಂಡಲ್ ವುಡ್ ನಲ್ಲಿ ನಟಿಯಾಗಿ ಗುರುತಿಸಿಕೊಂಡಿದ್ದು, ಪುನೀತ್ ರಾಜಕುಮಾರ್ (Puneeth Raj Kumar) ನಿರ್ಮಾಣದ `ಲಾ’ (Laa) ಚಿತ್ರದ ಮೂಲಕ ನಾಯಕಿಯಾಗಿ ಎಂಟ್ರಿ ಕೊಟ್ಟರು. ತದನಂತರದಲ್ಲೂ ರಚಿತಾ ರಾಮ್ ನಿರ್ಮಾಣದ `ರಿ‍ಷಭಪ್ರಿಯ’ (Rishabha Priya) ಚಿತ್ರದಲ್ಲಿ ನಟಿಸಿದ್ದರು. ರಾಗಿಣಿ ಪ್ರಜ್ವಲ್ ಜಾಹೀರಾತಿನಲ್ಲೂ ಕಾಣಿಸಿಕೊಂಡಿದ್ದಾರೆ. ಇದೀಗ ಶಾನುಭೋಗರ ಮಗಳು (Shanubhogara Magalu) ಸಿನಿಮಾದಲ್ಲಿ ಲೀಡ್ ಪಾತ್ರದಲ್ಲಿ ನಟಿಸುತ್ತಿದ್ದು, ಸದ್ಯಕ್ಕೆ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ.

ಕಳೆದ ವರ್ಷವಷ್ಟೇ ಪ್ರಜ್ವಲ್ ದೇವರಾಜ್ ಅವರ ಕುಟುಂಬವು ಮಾಲ್ಡೀವ್ಸ್ (Maldives) ಪ್ರವಾಸಕ್ಕೆ ತೆರಳಿದ್ದರು. ಮಾಲ್ಡೀವ್ಸ್ ಪ್ರವಾಸಕ್ಕೆ ನಟ ಪ್ರಜ್ವಲ್ ದೇವರಾಜ್ , ನಟಿ ರಾಗಿಣಿ ಪ್ರಜ್ವಲ್, ಸಹೋದರ ಪ್ರಣಾಮ್, ತಂದೆ ದೇವರಾಜ್, ತಾಯಿ ಹಾಗೂ ಕೆಲವರು ಸ್ನೇಹಿತರ ಜೊತೆಗೆ ತೆರಳಿತ್ತು. ಮಾಲ್ಡೀವ್ಸ್ ಪ್ರವಾಸವನ್ನು ಎಂಜಾಯ್ ಮಾಡುತ್ತಿದ್ದ ಪ್ರಜ್ವಲ್ ದೇವರಾಜ್ ಅವರ ಕುಟುಂಬ ವಿಡಿಯೋ ಹಾಗೂ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

Leave a Reply

Your email address will not be published. Required fields are marked *