ಜೋಗದ ಪೀಕ್ ಪಾಯಿಂಟ್ ಅಪ್ಪು ವರ್ಕ್ಔಟ್, ಮೈ ಜುಮ್ ಎನ್ನಿಸುವಂತಹ ವಿಡಿಯೋ ಇಲ್ಲಿದೆ ನೋಡಿ!! ಅಬ್ಬಾ ನಿಜಕ್ಕೂ ಅಪ್ಪು ಗೆ ಎರಡು ಗುಂಡಿಗೆ ಇತ್ತು..

ನಟ ಪುನೀತ್ ರಾಜ್ ಕುಮಾರ್ (Punith Rajkumar) ವೈಯುಕ್ತಿಕ ಜೀವನ ಹಾಗೂ ವೃತ್ತಿ ಜೀವನದಲ್ಲಿಯೂ ಎಲ್ಲರಿಗೂ ಮಾದರಿಯಾಗಿದ್ದ ವ್ಯಕ್ತಿ. ಆದರೆ ಇಂದು ಅಪ್ಪು ನೆನಪಿಗೆ ಮಾತ್ರ ಸೀಮಿತ ಎನ್ನುವುದನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆದರೆ, ಅಪ್ಪು ಎಲ್ಲರ ಮನಸ್ಸಿನಲ್ಲಿ ಶಾಶ್ವತವಾಗಿದ್ದಾರೆ. ಅಪ್ಪು ಅವರು ಸ್ಟಾರ್ ನಟ, ಅದ್ಭುತವಾದ ಡ್ಯಾನ್ಸರ್ ಮಾತ್ರವಲ್ಲದೆ ಒಳ್ಳೆಯ ಮನಸ್ಸಿನ ವ್ಯಕ್ತಿ ಕೂಡ ಆಗಿದ್ದರು.

ಅಪ್ಪುವಿನದು ಮಗುವಿನ ಮನಸ್ಸು, ಹೃದಯ ಶ್ರೀಮಂತಿಕೆ, ಸಮಾಜ ಸೇವೆಗಳು, ಮೈಗೂಡಿಸಿಕೊಂಡಿರುವ ಆದರ್ಶಗಳು ಇವತ್ತಿಗೂ ಈ ಆದರ್ಶಗಳನ್ನು ಅನೇಕರು ಅಳವಡಿಸಿಕೊಂಡಿದ್ದಾರೆ. ನಟ ಪುನೀತ್ ರಾಜ್ ಅವರಿಗೆ ಜಿಮ್, ವರ್ಕೌಟ್ (Work Out) ಎಂದು ಸಿಕ್ಕಾಪಟ್ಟೆ ಬ್ಯುಸಿಯಾಗಿರುತ್ತಿದ್ದರು. ಪುನೀತ್ ರಾಜ್‌ಕುಮಾರ್ ಅವರಿಗೆ ವರ್ಕೌಟ್ ಎಂದರೆ ಹೆಚ್ಚು ಪ್ರೀತಿ. ಹೀಗಾಗಿ ವರ್ಕ್ ಔಟ್ ವಿಚಾರದಲ್ಲಿ ಚಿಕ್ಕಂದಿನಿಂದಲೂ ಸಿಕ್ಕಾಪಟ್ಟೆ ಕ್ರೇಜ್ ಬೆಳಸಿಕೊಂಡಿದ್ದರು. ಬ್ಯಾಕ್ ಫ್ಲಿಪ್ (Back Flip) ಅನ್ನು ಲೀಲಾಜಾಲವಾಗಿ ಮಾಡುತ್ತಿದ್ದರು.

ಬಿಡುವು ಸಿಕ್ಕಾಗಲೆಲ್ಲಾ ಒಂದಲ್ಲ ಒಂದು ರೀತಿಯಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ (Puneeth Rajkumar Video) ಅಪರೂಪದ ವಿಡಿಯೋ ವೊಂದು ಎಲ್ಲರ ಗಮನ ಸೆಳೆಯುತ್ತಿದೆ. ಗಾಯಕ ನವೀನ್ ಸಜ್ಜು ಈ ಒಂದು ವಿಡಿಯೋವನ್ನ ತಮ್ಮ ಇನ್‌ಸ್ಟಾಗ್ರಾಮ್ ಪೇಜ್‌ ನಲ್ಲಿ ಶೇರ್ ಮಾಡಿಕೊಂಡಿದ್ದು, ಈ ವಿಡಿಯೋದಲ್ಲಿ ಅಪ್ಪುವಿನ ವರ್ಕ್ ಔಟ್ (Workout Video Got Viral) ವಿಶೇಷವಾಗಿದೆ.

ಈ ಹಿಂದೆ ಗೆಳೆಯರ ಜೊತೆಗೆ ಜೋಗ (Jog) ದ ಪೀಕ್ ಪಾಯಿಂಟ್‌ (Peek Point) ಗೂ ಹೋಗಿದ್ದರು. ಈ ಪೀಕ್ ಪಾಯಿಂಟ್ ನಲ್ಲಿ ವರ್ಕ್ ಔಟ್ ಮಾಡಿದ್ದರು. ಈ ವಿಡಿಯೋ ನೋಡಿದರೆ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ವರ್ಕೌಟ್‌ ಕ್ರೇಜ್ ಎಷ್ಟಿದೆ ಎಂದು ತಿಳಿಯುತ್ತದೆ. ಜೋಗದ ತುತ್ತತುದಿಯಲ್ಲಿ ಅಪ್ಪು Pushaps ಮಾಡಿದ್ದಾರೆ. ಜೋಗದ ಪೀಕ್ ನಲ್ಲಿ ಸರಿಸುಮಾರು 50 Pushaps ಹೊಡೆದಿದ್ದಾರೆ. ಆದರೆ ಈ ವಿಡಿಯೋ ಅಪ್ಪು ಇದ್ದಾಗಲೂ ವೈರಲ್ ಆಗಿತ್ತು. ಆದರೆ ಇದೀಗ ಮತ್ತೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಈ ವಿಡಿಯೋ ನೋಡಿದ ಅಪ್ಪು ಫ್ಯಾನ್ಸ್ ಗಳು, “ಅಪ್ಪು ಬಾಸ್” ಎಂದು ಕಾಮೆಂಟ್ ಮಾಡಿದ್ದಾರೆ. ಬೆಂಕಿ ಎನ್ನುವ ಇಮೋಜಿಗಳನ್ನ ಕೂಡ ಕಾಮೆಂಟ್ ಬಾಕ್ಸ್ ನಲ್ಲಿ ಹಾಕಿದ್ದಾರೆ. ಈ ವಿಡಿಯೋ ನೋಡಿದರೆ ಅಪ್ಪು ನಮ್ಮ ಜೊತೆಗೆ ಇಲ್ಲ ಎಂದು ಅನಿಸುವುದಿಲ್ಲ. ಈ ವರ್ಕ್ ಔಟ್ ವಿಡಿಯೋದಲ್ಲಿ ಆ ನಗು ಆ ಮಾತು ನಗು ನೋಡಿದರೆ ಅಪ್ಪು ನಮ್ಮ ಜೊತೆಗೆ ಇದ್ದಾರೆ ಅನಿಸುವುದರಲ್ಲಿ ಯಾವುದೇ ಡೌಟ್ ಇಲ್ಲ.

Leave a Reply

Your email address will not be published. Required fields are marked *