ಬ್ಲಾಕ್ ಕಲರ್ ಉಡುಗೆಯಲ್ಲಿ ಬೋಲ್ಡ್ ಲುಕ್ ನಲ್ಲಿ ಗಮನ ಸೆಳೆದ ಪ್ರಿಯಾಂಕಾ ಉಪೇಂದ್ರ! ವಿಡಿಯೋ ನೋಡಿ ವಾವ್ ಎಂದ ಕನ್ನಡಿಗರು!!

ಸ್ಯಾಂಡಲ್ ವುಡ್ ನ ಬಹುಬೇಡಿಕೆಯ ನಟಿಯರ ಸಾಲಿಗೆ ಪ್ರಿಯಾಂಕಾ ಉಪೇಂದ್ರ (Priyanka Upendra) ಕೂಡ ಸೇರಿಕೊಳ್ಳುತ್ತಾರೆ. ಮದುವೆಯಾಗಿ ಇಬ್ಬರೂ ಮಕ್ಕಳಿದ್ದರೂ ಕೂಡ ನಟಿ ಪ್ರಿಯಾಂಕಾ ಸಾಲು ಸಾಲು ಅವಕಾಶಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಸಿನಿಮಾದ ಜೊತೆಗೆ ಸಂಸಾರವನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದು ಬೇಡಿಕೆಯ ನಟಿಮಣಿಯರಲ್ಲಿ ಒಬ್ಬರಾಗಿದ್ದಾರೆ.

ಇದೀಗ ನಟಿ ಪ್ರಿಯಾಂಕಾ ಉಪೇಂದ್ರರವರ ಮಗಳ ರೀಲ್ಸ್ ವಿಡಿಯೋವೊಂದು ವೈರಲ್ ಆಗಿವೆ. ಈ ವಿಡಿಯೋದಲ್ಲಿ ಬ್ಲಾಕ್ ಕಲರ್ (Black Colour) ಉಡುಗೆಯಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದು ಮೇಕ್ ಅಪ್ ಕೂಡ ಹೈ ಲೈಟ್ ಆಗಿದೆ. ಸದ್ಯಕ್ಕೆ ಈ ವಿಡಿಯೋವೊಂದು ಫ್ಯಾನ್ಸ್ ವಲಯದಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರು ಫಿದಾ ಆಗಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಸಿನಿ ಬದುಕಿನಲ್ಲಿ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ್ದು, ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಬಂಗಾಳಿ ಕುಟುಂಬದವರಾದ ಪ್ರಿಯಾಂಕಾ ಬಾಲ್ಯ ವಿದ್ಯಾ ಬ್ಯಾಸವೆಲ್ಲ ಕೋಲ್ಕತ (Kolkatta) ದಲ್ಲಿ ಪೂರ್ಣಗೊಳಿಸಿದ ಇವರು ತದನಂತರದಲ್ಲಿ ಪ್ರಿಯಾಂಕ ತ್ರಿವೇದಿ ಮಾಡೆಲಿಂಗ್ (Modeling) ನಲ್ಲಿ ಆಸಕ್ತಿ ತೋರಿ 1996 ರಲ್ಲಿ ಮಿಸ್ ಕೊಲ್ಕತ್ತಾ ಆಗಿ ಹೊರಹೊಮ್ಮಿದರು.

ಎಜುಕೇಶನ್ ಮುಗಿಯುತ್ತಿದ್ದಂತೆ ಮಾಡೆಲ್ ನತ್ತ ಮುಖ ಮಾಡಿದ ನಟಿಗೆ ಸಾಲು ಸಾಲು ಅವಕಾಶಗಳು ಬರುತ್ತಿದ್ದಂತೆ ತೆರೆ ಮೇಲೆ ಕಾಣಿಸಿಕೊಂಡರು. ಕನ್ನಡ (Kannada), ತಮಿಳು (Tamil), ತೆಲುಗು (Telugu), ಬೆಂಗಾಲಿ (Bengali) ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಬಣ್ಣ ಹಚ್ಚಿದರು. ನಾಯಕಿ ಕಮ್ ನಿರ್ಮಾಪಕಿಯಾಗಿ ಬಣ್ಣದ ಲೋಕದಲ್ಲಿ ಬದುಕು ಕಟ್ಟಿಕೊಂಡಿದ್ದಾರೆ. ನಟಿ ಪ್ರಿಯಾಂಕಾ ಉಪೇಂದ್ರರವರ ಕೈತುಂಬಾ ಸಾಲು ಸಾಲು ಸಿನಿಮಾಗಳಿದ್ದು ಪತಿಯ ಕೆಲಸಕ್ಕೂ ಸಾಥ್ ನೀಡುತ್ತಿದ್ದಾರೆ.

ಇತ್ತ ನಟ ರಿಯಲ್ ಸ್ಟಾರ್ ಉಪೇಂದ್ರರವರು ಏಳು ವರ್ಷಗಳ ಬಳಿಕ ಯುಐ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಪ್ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ತಯಾರಾಗುತ್ತಿರುವ ಈ ಸಿನಿಮಾಕ್ಕೆ ನಿರ್ಮಾಪಕರಾದ ಲಹರಿ ಸಂಸ್ಥೆಯ ಮನೋಹರ್ (Manohar ) ಹಾಗೂ ಕೆ.ಪಿ ಶ್ರೀಕಾಂತ್ (KP Shreekant) ಬಂಡವಾಳ ಹೂಡಿದ್ದಾರೆ. ಕಬ್ಜ 2 (Kabza 2) ಸಿನಿಮಾದ ಬಗ್ಗೆ ಅಧಿಕೃತ ಮಾಹಿತಿಯೂ ಹೊರ ಬಿದ್ದಿದ್ದು ಶೂಟಿಂಗ್ ಆರಂಭವಾಗಿದೆ. ಹೀಗಾಗಿ ಉಪ್ಪಿ ಫ್ಯಾನ್ಸ್ ಗಳ ಚಿತ್ತ ಯುಐ ಹಾಗೂ ಕಬ್ಜ 2 ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

Leave a Reply

Your email address will not be published. Required fields are marked *