ಚಂದನವನದ ನಟ ಲವ್ಲೀ ಸ್ಟಾರ್ ಪ್ರೇಮ್ (Lovely Star Prem) ಕನ್ನಡ ಸಿನಿಮಾರಂಗದಲ್ಲಿ ಸಕ್ರಿಯರಾಗಿದ್ದಾರೆ. ನೆನಪಿರಲಿ ಪ್ರೇಮ್, ಪ್ರಾಣ (Prana) ಎನ್ನುವ ಚಿತ್ರದ ಮೂಲಕ ಬಣ್ಣದ ಬದುಕಿಗೆ ಕಾಲಿಟ್ಟು, ಇದೀಗ ಬೆಳ್ಳಿತೆರೆ ಹಾಗೂ ಕಿರುತೆರೆಯಲ್ಲಿ ಸಕ್ರಿಯರಾಗಿದ್ದಾರೆ. ಇವರ ಮಗಳು ನಟಿ ಅಮೃತಾ ಕೂಡ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ.
ಸ್ಯಾಂಡಲ್‌ವುಡ್ ಲವ್ಲಿ ಸ್ಟಾರ್ ಪ್ರೇಮ್ ದಾಂಪತ್ಯ ಜೀವನಕ್ಕೆ 23 ವರ್ಷ ಪೂರ್ಣಗೊಂಡಿದ್ದು, ಇದೇ ಆಗಸ್ಟ್-1 ರಂದು ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದರು. ನೆನಪಿರಲಿ ಪ್ರೇಮ್ ದಂಪತಿಗಳಿಗೆ ಆಪ್ತರು, ಸ್ನೇಹಿತರು ಶುಭಾಷಯ ತಿಳಿಸಿದ್ದರು. ಇನ್ನು ವಿಶೇಷವೆನ್ನುವಂತೆ ನೆನಪಿರಲಿ ಪ್ರೇಮ್ ಪತ್ನಿ ಜ್ಯೋತಿಯವರು ವಿಶೇಷ ಪೋಸ್ಟ್ ಹಂಚಿಕೊಂಡಿದ್ದಾರೆ.

ಪ್ರೇಮ್ ಹಾಗೂ ಜ್ಯೋತಿ ಇಬ್ಬರೂ ಜೊತೆಯಾಗಿ ನಿಂತುಕೊಂಡು ವಿವಿಧ ರೀತಿಯಲ್ಲಿ ಪೋಸ್ ನೀಡಿದ ಫೋಟೋಹಂಚಿಕೊಂಡಿದ್ದು, ಮತ್ತೊಂದು ವರ್ಷ ಕಳೆದಿದೆ ಮತ್ತು ನಿಜವಾದ ಪ್ರೀತಿ ಅಸ್ತಿತ್ವದಲ್ಲಿದೆ ಎಂದು ಜಗತ್ತಿಗೆ ತೋರಿಸಲು ನಾವು ಮುಂದುವರಿಯುತ್ತೇವೆ” ಎಂದು ಬರೆದುಕೊಂಡಿದ್ದಾರೆ. ಈ ಫೋಟೋಗೆ ಮೂರು ಸಾವಿರಕ್ಕೂ ಅಧಿಕಲೈಕ್ಸ್ ಗಳು ಬಂದಿವೆ.
ನಟ ನೆನಪಿರಲಿ ಖ್ಯಾತಿಯ ಪ್ರೇಮ್ (Prem) ಅವರದ್ದು ಪತ್ನಿ ಹಾಗೂ ಇಬ್ಬರೂ ಮಕ್ಕಳಿದ್ದಾರೆ. ಸಿನಿಮಾರಂಗಕ್ಕೆ ಎಂಟ್ರಿ ಕೊಡುವ ಮುನ್ನವೇ ಜ್ಯೋತಿ (Jyothi) ಯವರನ್ನು ಪ್ರೀತಿಸಿ ಮದುವೆಯಾಗಿದ್ದರು ನಟ ಪ್ರೇಮ್. ಹೌದು, ನಟ ಪ್ರೇಮ್ ಹಾಗೂ ಜ್ಯೋತಿಯವರದ್ದು ಪ್ರೇಮ ವಿವಾಹವಾಗಿತ್ತು. ಜ್ಯೋತಿ ಮತ್ತು ಪ್ರೇಮ್ ಅವರಿಗೆ ಬಹಳ ವರ್ಷದ ಪರಿಚಯವಿದ್ದ ಕಾರಣ, ಪ್ರೇಮ್ ಅವರನ್ನೇ ಮದುವೆ ಆಗುತ್ತೇನೆ ಎಂದು ಹಠ ಹಿಡಿದಿದ್ದು ಕೊನೆಗೆ ಅವರನ್ನೇ ಮದುವೆಯಾಗಿ ಸುಖ ದಾಂಪತ್ಯ ಜೀವನ ನಡೆಸುತ್ತಿದ್ದಾರೆ.

ಕಳೆದ ಕೆಲವು ತಿಂಗಳ ಹಿಂದೆಯಷ್ಟೇ ಲವ್ಲೀ ಸ್ಟಾರ್ ಪ್ರೇಮ್ (Lovely Star Prem) ಹಾಗೂ ಜ್ಯೋತಿ (Jyothi) ದಂಪತಿಗಳು ತಮ್ಮಿಬ್ಬರ 25 ವರ್ಷ ತುಂಬಿದ್ದ ಸಂಭ್ರಮದಲ್ಲಿದ್ದರು. 25 ರ ನಮ್ಮ ಪ್ರೀತಿಗೆ ಅದರ ರೀತಿಗೆ ಶುಭಾಶಯಗಳು ಜೀವದ ಗೆಳತಿ ಎಂದು ಪ್ರೇಮ್ ಪೋಸ್ಟ್ ಹಾಕಿಕೊಂಡಿದ್ದರು. ಅದರ ಜೊತೆಗೆ ನಟ ಪ್ರೇಮ್ ಜೋಡಿಯು ಬಾಲಿ (Bali) ಗೆ ತೆರಳಿ ಅಲ್ಲಿ ಜೊತೆಯಾಗಿ ಸಮಯ ಕಳೆದಿದ್ದರು. ಇದೀಗ ಪ್ರೇಮ್ ಅವರು ಮಗಳು ಅಮೃತಾ ಟಗರು ಪಲ್ಯ (Tagaru Palya) ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಇತ್ತ ನಟ ಪ್ರೇಮ್ ಅವರು ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ಸಖತ್ ಬ್ಯುಸಿಯಾಗಿದ್ದಾರೆ.