ಕಿರುತೆರೆ ಹಾಗೂ ಬೆಳ್ಳಿತೆರೆಯನ್ನು ಸಾಕಷ್ಟು ನಟ ನಟಿಯರು ನಂಬಿಕೊಂಡು ಬದುಕು ಸಾಗಿಸುತ್ತಿದ್ದಾರೆ. ಕೆಲವರಿಗೆ ಈ ಕ್ಷೇತ್ರವು ಅವಕಾಶಗಳನ್ನು ನೀಡಿ ಕೈ ಹಿಡಿಡಿದ್ದು ಸಾಲು ಸಾಲು ಅವಕಾಶಗಳನ್ನು ನೀಡುತ್ತಿದೆ. ಸಿನಿಮಾರಂಗದಲ್ಲಿ ಅವಕಾಶ ಸಿಗದೇ ಇರುವ ಕಾಲದಲ್ಲಿ ಸಣ್ಣ ಪುಟ್ಟ ಪಾತ್ರವನ್ನು ಮಾಡುತ್ತಿದ್ದಾರೆ. ಆ ನಟ ಪ್ರಮೋದ್ ಶೆಟ್ಟಿ (Pramod Shetty) ಕೂಡ ಒಬ್ಬರು. ಆದರೆ ಇದೀಗ ನಟ ಪ್ರಮೋದ್ ಶೆಟ್ಟಿಗೆ ಚಂದನವನದಲ್ಲಿ ಬಾರಿ ಬೇಡಿಕೆಯಿದೆ ಎನ್ನುವುದನ್ನು ಒಪ್ಪಿಕೊಳ್ಳಲೇಬೇಕು.
ಇದೀಗ ಪ್ರಮೋದ್ ಶೆಟ್ಟಿ ಕುಟುಂಬದ ಮುದ್ದಾದ ಫೋಟೋ ವೊಂದು ವೈರಲ್ ಆಗಿದೆ. ಈ ಫೋಟೋವನ್ನು ನೋಡಿದರೆ ನಟ ಪ್ರಮೋದ್ ಶೆಟ್ಟಿಯವರ ಮಡದಿಯ ಸೀಮಂತ ಶಾಸ್ತ್ರದ ಫೋಟೋವಾಗಿದೆ. ಈ ಫೋಟೋದಲ್ಲಿ ಪ್ರಮೋದ್ ಶೆಟ್ಟಿ, ಪತ್ನಿ ಸುಪ್ರೀತಾ ಶೆಟ್ಟಿ ಹಾಗೂ ಇಬ್ಬನಿ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. ಈ ಫೋಟೋಗೆ ಫ್ಯಾನ್ಸ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಫೋಟೋಗೆ ಎರಡು ಸಾವಿರಕ್ಕೂ ಅಧಿಕ ಲೈಕ್ಸ್ನ ಬಂದಿವೆ.

ನಟ ಪ್ರಮೋದ್ ಶೆಟ್ಟಿಯವರ ಮಡದಿ ಕೂಡ ಸಿನಿಮಾ ಹಾಗೂ ಧಾರಾವಾಹಿ ನಟಿಸಿ ಸೈ ಎನಿಸಿಕೊಂಡವರು. `ಕುಲವಧು’ (Kulavadhu) ಧಾರಾವಾಹಿಯಲ್ಲಿನ ಅಭಿನಯದಿಂದ ಪ್ರಸಿದ್ಧರಾಗಿದ್ದು, ಸಾಕಷ್ಟು ಅಭಿಮಾನಿಗಳನ್ನು ಗಳಿಸಿಕೊಂಡಿದ್ದಾರೆ. 2010 ರಲ್ಲಿ ಸುಪ್ರೀತಾ ಶೆಟ್ಟಿ ಎಂಬುವರ ಜೊತೆಗೆ ಸಪ್ತಪದಿ ತುಳಿದ ಪ್ರಮೋದ್ ಶೆಟ್ಟಿ ದಂಪತಿಗಳಿಗೆ ಇಬ್ಬನಿ ಎಂಬ ಮುದ್ದಾದ ಒಂದು ಹೆಣ್ಣು ಹಾಗೂ ಒಂದು ಗಂಡು ಮಗಳಿದ್ದಾರೆ.
ಆದರೆ 2019 ರಲ್ಲಿ ಸುಪ್ರೀತಾ ಶೆಟ್ಟಿಯವರು ಗಂಡು ಮಗುವಿಗೆ ಜನ್ಮ ನೀಡಿದ್ದರು. ಗಂಡು ಮಗುವಿಗೆ ಮನೋಜ್ ಶೆಟ್ಟಿ ಎಂದು ಹೆಸರಿಟ್ಟಿದ್ದಾರೆ. ಸದ್ಯಕ್ಕೆ ಸತಿ ಪತಿಗಳಿಬ್ಬರೂ ನಟನೆಯಲ್ಲಿ ಬ್ಯುಸಿಯಾಗಿದ್ದಾರೆ. ಇನ್ನು ನಟ ನಟ ಪ್ರಮೋದ್ ಶೆಟ್ಟಿಯವರ ಹಿನ್ನಲೆ ನೋಡುವುದಾದರೆ, ನಿರ್ದೇಶಕ ರಿಷಬ್ ಶೆಟ್ಟಿ ನಿರ್ದೇಶನದ ಸರ್ಕಾರಿ ಹಿರಿಯ ಪ್ರಾಥಾಮಿಕ ಶಾಲೆ ಸಿನಿಮಾದಲ್ಲಿ ಶಾಂತಾರಾಮ ಉಪಾಧ್ಯಾಯ ಪಾತ್ರದಲ್ಲಿ ನಟಿಸಿದ್ದರು.

ತದನಂತರದಲ್ಲಿ ಸಾಲು ಸಾಲು ಸಿನಿಮಾದಲ್ಲಿ ಬ್ಯುಸಿಯಾಗಿದ್ದು ಪ್ರಮೋದ್ ಶೆಟ್ಟಿ ಉಳಿದವರು ಕಂಡಂತೆ, ರಿಕ್ಕಿ, ಕಿರಿಕ್ ಪಾರ್ಟಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಹಾಗೂ ಕಾಂತಾರ ಸಿನಿಮಾ ನಟಿಸಿದ್ದಾರೆ. ಈ ಸಿನಿಮಾ ಬಳಿಕ ಅವಕಾಶಗಳು ಬರುತ್ತಿದ್ದು, ರಿಷಬ್ ಶೆಟ್ಟಿ ಅವರ ನಿರ್ಮಾಣ ಸಂಸ್ಥೆಯಡಿಯಲ್ಲಿ ನಿರ್ಮಾಣ ಆಗುತ್ತಿರುವ ಲಾಫಿಂಗ್ ಬುದ್ದ ಎಂಬ ಚಿತ್ರದಲ್ಲಿ ನಟಿಸಿದ್ದಾರೆ.