ತನಗಿಂತ 14 ವರ್ಷ ಚಿಕ್ಕ ಮಹಿಳೆ ಅನ್ನು ಮದುವೆ ಆದ ಪ್ರಕಾಶ್ ರೈಯವರ ಮುದ್ದಾದ ಎರಡನೇ ಹೆಂಡತಿ ಮತ್ತು ಮಗು ಹೇಗಿದೆ ಗೊತ್ತಾ? ಇಲ್ಲಿದೆ ಅಪರೂಪದ ಫೋಟೋ

ಸಿನಿಮಾರಂಗದಲ್ಲಿ ಗುರುತಿಸಿಕೊಂಡಿರುವ ಈ ನಟ ಕಮ್ ನಿರ್ದೇಶಕನ ಹೆಸರು ಎಲ್ಲರಿಗೂ ಕೂಡ ಚಿರಪರಿಚಿತವಾಗಿದೆ. ಅದುವೇ ಖ್ಯಾತ ನಟ ಕಮ್ ನಿರ್ದೇಶಕ ನಟ ಪ್ರಕಾಶ್ ರೈ (Prakash Rai). ಇವರ ನಿಜವಾದ ಹೆಸರು ಪ್ರಕಾಶ್ ರಾಜ್ ಆದರೆ ಈ ಹೆಸರನ್ನು ಪ್ರಕಾಶ್ ರೈ ಎಂದು ಬದಲಾಯಿಸಿದವರು ನಿರ್ದೇಶಕ ಕೆ. ಬಾಲಚಂದ್ರ (K Balachandra). ಈಗಾಗಲೇ ಕನ್ನಡ (Kannada), ತಮಿಳು (Tamil), ತೆಲುಗು (Telugu), ಮಲಯಾಳಂ (Malayalam), ಹಿಂದಿ (Hindi) ಚಿತ್ರಗಳಲ್ಲಿ ನಟಿಸುವ ಮೂಲಕ ಎಲ್ಲಾ ಚಿತ್ರರಂಗದಲ್ಲಿಯೂ ಸಕ್ರಿಯರಾಗಿದ್ದಾರೆ. ನಟನೆಯ ಜೊತೆಗೆ ನಿರ್ದೇಶನದತ್ತ ಕೂಡ ಒಲವು ತೋರಿಸಿದ್ದಾರೆ.

ಸಿನಿಮಾರಂಗದಲ್ಲಿ ಯಶಸ್ಸು ಕಂಡಿರುವ ನಟ ಪ್ರಕಾಶ್ ರಾಜ್ ಅವರು ವೈಯುಕ್ತಿಕ ಜೀವನದಲ್ಲಿ ಸಾಕಷ್ಟು ಹೊಡೆತಗಳನ್ನು ತಿಂದಿದ್ದಾರೆ. ಈ ನಡುವೆ ಮಗನ ಅಗಲುವಿಕೆಯು ಪ್ರಕಾಶ್ ರಾಜ್ ಅವರನ್ನು ತೀರಾ ಕುಗ್ಗು ವಂತೆ ಮಾಡಿತ್ತು. ತದನಂತರದಲ್ಲಿ ಮೊದಲ ಪತ್ನಿ ಲಲಿತಾ ಕುಮಾರಿ (Lalitha Kumari) ದೂರವಾದರು.ಆದಾದ ಬಳಿಕ ತನಗಿಂತ ವಯಸ್ಸಿನಲ್ಲಿ ಹತ್ತು ಹನ್ನೆರಡು ವರ್ಷ ಸಣ್ಣ ವಳಾಗಿರುವ ಪೋನಿ ವರ್ಮರವರ ಜೊತೆಗೆ ಹೊಸ ಬದುಕು ಕಟ್ಟಿಕೊಂಡರು. ಪ್ರಕಾಶ್ ರಾಜ್ ಅವರಿಗೆ ಒಂದು ಗಂಡು ಕೂಡ ಆಯಿತು. ಆದರೆ ಮೊದಲ ಪತ್ನಿಯ ಮಕ್ಕಳಾಗಿರುವ ಪೂಜಾ ಹಾಗೂ ಮೇಘನಾರವರ ಜೊತೆಗಿನ ಸಂಬಂಧವನ್ನು ಮಾತ್ರ ಬಿಡಲಿಲ್ಲ. ಇವತ್ತಿಗೂ ಕೂಡ ತನ್ನ ಇಬ್ಬರೂ ಮಕ್ಕಳ ಜೊತೆಗೆ ಒಳ್ಳೆಯ ಬಾಂಧವ್ಯವನ್ನು ಹೊಂದಿದ್ದಾರೆ.

ಸದ್ಯಕ್ಕೆ ನಟ ಪ್ರಕಾಶ್ ರಾಜ್ ಅವರ ಕುಟುಂಬದ ಫೋಟೋವೊಂದು ವೈರಲ್ ಆಗಿವೆ. ಪ್ರಕಾಶ್ ರಾಜ್ ಅವರ ಮುದ್ದಾದ ಫ್ಯಾಮಿಲಿ ಫೋಟೋ (Family Photo) ವೊಂದು ವೈರಲ್ ಆಗಿವೆ. ಈ ಫೋಟೋದಲ್ಲಿ ತನ್ನ ಮುದ್ದಿನ ಮಡದಿ ಪೋನಿ ವರ್ಮಾ (Poni Varma) ಹಾಗೂ ಮಗನ ಜೊತೆಗೆ ಕಾಣಿಸಿಕೊಂಡಿದ್ದಾರೆ. ಖ್ಯಾತ ನಟ ಪ್ರಕಾಶ್ ರಾಜ್ ಅವರ ಫ್ಯಾಮಿಲಿ ಫೋಟೋಗೆ ಮುನ್ನೂರಕ್ಕೂ ಅಧಿಕ ಲೈಕ್ಸ್ ಬಂದಿದ್ದು, ಫ್ಯಾನ್ಸ್ ಈ ಕ್ಯೂಟ್ ಫ್ಯಾಮಿಲಿಯನ್ನು ಮೆಚ್ಚಿಕೊಂಡಿದ್ದಾರೆ.

ಮಗ ಸಿದ್ದು ಆಗಲುವಿಕೆಯ ನಂತರದಲ್ಲಿ ಬದುಕಿನಲ್ಲಿ ಎಲ್ಲವನ್ನು ಕಳೆದುಕೊಂಡಂತೆ ಇದ್ದ ಪ್ರಕಾಶ್ ತಮ್ಮ ಜೀವನಕ್ಕೆ ಪೂರ್ಣವಿರಾಮ ಇಡುವ ನಿರ್ಧಾರಕ್ಕೆ ಬಂದಿದ್ದರು. ಈ ಹಿಂದೆ ಖಾಸಗಿ ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿದ್ದ ನಟ ಪ್ರಕಾಶ್ ರಾಜ್, “ನನ್ನ ಮಗನೇ ಇಲ್ಲದ ಮೇಲೆ ನಾನು ಬದುಕಿ ಏನು ಪ್ರಯೋಜನ ಎಂಬ ಕಾರಣಕ್ಕಾಗಿ ನಾನು ಆ-ತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದೆ. ಆ ಸಮಯದಲ್ಲಿ ನನ್ನ ಆಪ್ತರೊಬ್ಬರು ಈ ರೀತಿ ಮಾಡಿಕೊಳ್ಳಬೇಡ ಅದು ತಪ್ಪು ನೀನು ನಿನ್ನ ಮಗನನ್ನು ಕಳೆದುಕೊಂಡಿರಬಹುದು.

ಆದರೆ ನೀನು ಕೂಡ ಇಂದು ಆ-ತ್ಮಹತ್ಯೆ ಮಾಡಿಕೊಂಡರೆ ಅದರಿಂದ ಏನು ಫಲ. ಅದರ ಬದಲಾಗಿ ಸಮಾಜಕ್ಕೆ ನಾಲ್ಕು ಒಳ್ಳೆಯ ಕೆಲಸವನ್ನು ಮಾಡು ಎಂದು ಬುದ್ಧಿ ಮಾತನ್ನು ಹೇಳಿದ್ದರು. ತದನಂತರ ತಮ್ಮ ನಿರ್ಧಾರವನ್ನು ಬದಲಾಯಿಸಿಕೊಂಡು ಸರ್ಕಾರಿ ಶಾಲೆಗಳು ಹಾಗೂ ಹಳ್ಳಿಯನ್ನು ದತ್ತು ತೆಗೆದುಕೊಳ್ಳುವುದು ಅಭಿವೃದ್ಧಿ ಪಡಿಸುವ ಕೆಲಸ ಮಾಡುತ್ತಿರುವೆ” ಎಂದಿದ್ದರು. ಸದ್ಯಕ್ಕೆ ಸಿನಿಮಾ ಕೆಲಸದಲ್ಲಿ ಬ್ಯುಸಿಯಾಗುವುದರ ಜೊತೆಗೆ ಸಮಾಜ ಮುಖಿ ಕೆಲಸ ಮಾಡುತ್ತಾ ಅದರಲ್ಲಿ ತನ್ನ ಮಗನನ್ನು ಕಾಣುವ ಪ್ರಯತ್ನ ಮಾಡುತ್ತಿದ್ದಾರೆ ನಟ ಪ್ರಕಾಶ್ ರಾಜ್ ಎಂದರೆ ತಪ್ಪಿಲ್ಲ.

Leave a Reply

Your email address will not be published. Required fields are marked *