ಚಂದನವನದ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅವರ ಬರ್ತ್ಡೇ ಸೆಲೆಬ್ರೇಶನ್ ಹೇಗಿತ್ತು ಗೊತ್ತಾ?

ಕನ್ನಡ ಸಿನಿಮಾರಂಗದಲ್ಲಿ ನಟನಾಗಿ ಗುರುತಿಸಿಕೊಂಡವರಲ್ಲಿ ಪ್ರಜ್ವಲ್ ದೇವರಾಜ್ (Prajwal Devaraj) ಕೂಡ ಒಬ್ಬರು. ಇವರ ತಂದೆ ಕನ್ನಡ ಹೆಸರಾಂತ ಹಿರಿಯ ನಟ ದೇವರಾಜ್ (Devaraj) , ತಾಯಿ ಚಂದ್ರಲೇಖಾ (Chandralekha). ರಾಗಿಣಿ ಪ್ರಜ್ವಲ್ (Ragini Prajwal) ಅವರನ್ನು ಮದುವೆಯಾಗಿದ್ದು ಸುಖವಾಗಿ ಸಂಸಾರ ಮಾಡುತ್ತಿದ್ದಾರೆ. ಇತ್ತ ಸಾಲು ಸಾಲು ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಪ್ರಜ್ವಲ್ ದೇವರಾಜ್ ಅವರು ಮತ್ತೆ ಸುದ್ದಿಯಾಗಿದ್ದಾರೆ.

ನಟ ಪ್ರಜ್ವಲ್ ದೇವರಾಜ್ ಅವರ ಹಿನ್ನೆಲೆಯನ್ನು ನೋಡುವುದಾದರೆ, ಶ್ರೀ ಭಗವಾನ್ ಮಹಾವೀರ್ ಕಾಲೇಜಿನಲ್ಲಿ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿದರು. ಪ್ರಜ್ವಲ್ ದೇವರಾಜ್ ಅವರು, 2007 ರಲ್ಲಿ ಬಿಡುಗಡೆಯಾದ ಸಿಕ್ಸರ್ (Sixer) ಚಿತ್ರದ ಮೂಲಕ ನಾಯಕನಾಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ತದನಂತರದಲ್ಲಿ ಗೆಳೆಯ ಚಿತ್ರಕ್ಕೆ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿತು. ಹೀಗೆ ಮೆರವಣಿಗೆ, ಗುಲಾಮ, ಮುರುಳಿ ಮೀಟ್ಸ್ ಮೀರಾ, ಸೂಪರ್ ಶಾಸ್ತ್ರೀ, ಗಲಾಟೆ, ಅನೇಕ ಚಿತ್ರ ಗಳಲ್ಲಿ ನಾಯಕನಾಗಿ ಅಭಿನಯಿಸಿದರು.

ಸ್ಯಾಂಡಲ್‍ವುಡ್ ನಟ ದೇವರಾಜ್ ಪುತ್ರ, ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಜುಲೈ 4 ಕ್ಕೆ ತಮ್ಮ 36ನೇ ವರ್ಷದ ಹುಟ್ಟುಹಬ್ಬ (Birthday) ವನ್ನು ಆಚರಿಸಿಕೊಂಡಿದ್ದಾರೆ. ಐದು ವರ್ಷಗಳ ಬಳಿಕ ಪ್ರಜ್ವಲ್ ದೇವರಾಜ್ ಅವರು ಅಭಿಮಾನಿಗಳ ಜೊತೆ ಬರ್ತ್​ಡೇ ಆಚರಿಸಿಕೊಂಡಿದ್ದಾರೆ. ಇತ್ತ ಪ್ರಜ್ವಲ್ ದೇವರಾಜ್ ಅವರ ಬರ್ತ್ಡೇ ಸೆಲೆಬ್ರೇಶನ್ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಈ ಫೋಟೋದಲ್ಲಿ ಮುದ್ದಾದ ಕುಟುಂಬದವರು ಇರುವುದನ್ನು ಕಾಣಬಹುದು. ನಟನ ಬರ್ತ್ಡೇ ಸೆಲೆಬ್ರೇಶನ್ ಫೋಟೋಗೆ ಏಳುನೂರಕ್ಕೂ ಅಧಿಕ ಲೈಕ್ಸ್ ಬಂದಿದೆ.

ಹುಟ್ಟುಹಬ್ಬದ ದಿನವೇ ಬಹುನಿರೀಕ್ಷಿತ ‘ಗಣ’ (Gana) ಸಿನಿಮಾಗೆ ತಾಯಿ ಚಂದ್ರಲೇಖಾ ಸಾಥ್​ ನೀಡಿದ್ದಾರೆ. ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ಪ್ರಜ್ವಲ್​ಗೆ ಅವರದ್ದೇ ‘ಗಣ’ ಸಿನಿಮಾದ ಟೀಸರ್​ ಅನ್ನು ಬಿಡುಗಡೆಗೊಳಿಸುವ ಮೂಲಕ ಚಂದ್ರಲೇಖಾ ಶುಭಕೋರಿದ್ದಾರೆ. ಈ ವೇಳೆಯಲ್ಲಿ ನಟ ದೇವರಾಜ್, ರಾಗಿಣಿ ಪ್ರಜ್ವಲ್, ಪ್ರಣಾಮ್ ದೇವರಾಜ್ ಹಾಗೂ ಗಣ ಚಿತ್ರತಂಡದವರು ಉಪಸ್ಥಿತರಿದ್ದರು.

ಆ ವೇಳೆಯಲ್ಲಿ ಮಾತನಾಡಿದ ಪ್ರಜ್ವಲ್ ದೇವರಾಜ್, “ಕನ್ನಡದ ಕಲಾವಿದರು ಹಾಗೂ ತಂತ್ರಜ್ಞರ ಜೊತೆ ಸಿನಿಮಾ ಮಾಡಬೇಕೆಂದು ಬಂದ ಪಾರ್ಥು ಅವರಿಗೆ ಅಭಿನಂದನೆಗಳು. ‘ಗಣ’ ನಾನು ಈವರೆಗೂ ಮಾಡಿರುವ ಚಿತ್ರಗಳಲ್ಲೇ ಬೇಗ ಶೂಟಿಂಗ್​ ಮುಗಿಸಿರುವ ಚಿತ್ರ. ಜೊತೆಗೆ ಡಿಫರೆಂಟ್ ಜಾನರ್​ನ ಚಿತ್ರ ಕೂಡ ಹೌದು. 1993 ಹಾಗೂ 2023 ಎರಡು ಕಾಲಘಟ್ಟದಲ್ಲಿ ಈ ಕಥೆ ನಡೆಯುತ್ತದೆ‌. ಸಮಯದ ಜೊತೆ ಹೋರಾಡುವ ಚಿತ್ರ ಎನ್ನಬಹುದು. ಲವ್, ಆಕ್ಷನ್ ಹಾಗು ಫ್ಯಾಮಿಲಿ ಸೆಂಟಿಮೆಂಟ್ ಚಿತ್ರದಲ್ಲಿದೆ. ನನ್ನ ಜೊತೆ ಅಭಿನಯಿಸಿರುವ ಎಲ್ಲಾ ಕಲಾವಿದರ ಅಭಿನಯ ಹಾಗೂ ತಂತ್ರಜ್ಞರ ಕಾರ್ಯವೈಖರಿ ಅದ್ಭುತವಾಗಿದೆ” ಎಂದಿದ್ದಾರೆ. ಸದ್ಯ ನಟ ಪ್ರಜ್ವಲ್ ದೇವರಾಜ್ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಮಾಡುತ್ತಾ ಬ್ಯುಸಿಯಾಗಿದ್ದಾರೆ.

Leave a Reply

Your email address will not be published. Required fields are marked *