ಮಗಳಿಗೆ ಎರಡನೇ ಮದುವೆ ಮಾಡಿದ ನಟ ಪ್ರಭು!! ಎರಡನೇ ಮದುವೆ ಗೆ ಒಪ್ಪಿಕೊಂಡ ಪತಿ!! ಈ ಮಹಿಳೆಯನ್ನು ಒಪ್ಪಿಕೊಂಡಿದ್ದಕ್ಕೆ ಆತನಿಗೆ ಸಿಕ್ಕಿದ್ದು ಎಷ್ಟು ಕೋಟಿ ಗೊತ್ತಾ ? ಇಲ್ಲಿದೆ ನೋಡಿ!!

ಸೆಲೆಬ್ರಿಟಿಗಳು ಎಂದ ಮೇಲೆ ಕೇಳಬೇಕೇ, ನಿಂತರೂ ತಪ್ಪು ಕುಂತರು ತಪ್ಪು ಎನ್ನುವಂತಾಗಿ ಬಿಡುತ್ತದೆ. ಹೀಗಾಗಿ ಸೆಲೆಬ್ರಿಟಿಗಳು ಹಾಗೂ ಅವರ ಮಕ್ಕಳ ವೈಯಕ್ತಿಕ ಜೀವನದ ಕುರಿತಾಗಿ ಆಗಾಗ ಸುದ್ದಿಗಳು ಕೇಳಿಬರುವುದು ಮಾಮೂಲಿ. ಆದರೆ ಇತ್ತೀಚೆಗಷ್ಟೇ ತಮಿಳಿನ ಖ್ಯಾತ ನಟ ಪ್ರಭು ಮಗಳ ಮದುವೆಯನ್ನು ಅದ್ಧೂರಿಯಾಗಿ ಮಾಡಿದ್ದು, ಈ ಮದುವೆಗೆ ಸಂಬಂಧ ಪಟ್ಟ ವಿಚಾರವೊಂದು ಸಿಕ್ಕಾಪಟ್ಟೆ ಸೌಂಡ್ ಮಾಡುತ್ತಿವೆ.

ಹೌದು, ತಮಿಳು ಖ್ಯಾತ ನಟ ಪ್ರಭು (Prabhu) ರವರ ಮಗಳ ಮದುವೆ ಫೋಟೋ (Daughter marriage photo) ಗಳು ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳು ಹರಿದಾಡಿದ್ದು, ಪ್ರಭು ಮಗಳಿಗೆ ಇದು 2ನೇ ಮದುವೆ ಆಗಿದ್ದಾರೆ. ನಿರ್ದೇಶಕ ಅಧಿಕ್ ರವಿಚಂದ್ರನ್ (Adhik Ravichandran) ಅವರ ಜೊತೆಗೆ ಸಪ್ತಪದಿ ತುಳಿದಿದ್ದಾರೆ. ಆದರೆ ನಿರ್ದೇಶಕ ಅಧಿಕ್ ರವಿಚಂದ್ರನ್ ಹಣಕ್ಕಾಗಿ ಮದುವೆಯಾಗಿದ್ದಾರೆ ಎನ್ನುವ ಸುದ್ದಿಯೊಂದು ಕೇಳಿ ಬರುತ್ತಿದೆ.

ಇತ್ತೀಚೆಗಷ್ಟೇ ಖ್ಯಾತ ನಟ ಪ್ರಭು ಪುತ್ರಿ ಐಶ್ವರ್ಯಾ ಹಾಗೂ ನಿರ್ದೇಶಕ ಅಧಿಕ್ ರವಿಚಂದ್ರನ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಸೆಲೆಬ್ರಿಟಿ ಮಗಳ ವಿವಾಹದಲ್ಲಿ ನಟ ರಜನಿಕಾಂತ್ (Rajanikanth) , ನಟ ವಿಶಾಲ್ (Vishal) ಸೇರಿದಂತೆ ತಮಿಳಿನ ಅನೇಕ ನಟ-ನಟಿಯರು ಆಗಮಿಸಿದ್ದರು. ಹೊಸ ಜೀವನಕ್ಕೆ ಕಾಲಿಟ್ಟ ನವಜೋಡಿಗಳಿಗೆ ಶುಭ ಹಾರೈಸಿದ್ದರು.

ಮಾಜಿ ಚಲನಚಿತ್ರ ಮಾಧ್ಯಮ ಕಾರ್ಯಕರ್ತನಾಗಿರುವ ಕಿಕರ್ ಬಾಲು (Kikar Balu) ಮದುವೆ ಬಗ್ಗೆ ಕಾಮೆಂಟ್ ಮಾಡಿದ್ದರು. 500 ಕೋಟಿ ಕೊಟ್ಟು ಪ್ರಭು ತನ್ನ ಮಗಳ ಮದುವೆ ಮಾಡಿದ್ದಾರೆ ಎಂದು ಹೇಳಿಕೆ ನೀಡಿದ್ದು ಆದರೆ ಇದೀಗ ತಮ್ಮ ಹೇಳಿಕೆಯನ್ನು ಸುಳ್ಳು ಎಂದಿದ್ದಾರೆ. ಅದು ಆ ರೀತಿ ಅಲ್ಲ ಪ್ರಭು ಬೇಕಾದರೆ 500 ಕೋಟಿ ಕೊಡಬಹುದು ಎಂದು ಹೇಳಿದೆ ಅಷ್ಟೇ ಎಂದಿದ್ದಾರೆ.

ನಿರ್ದೇಶಕ ಅಧಿಕ್ ತನಗಿಂತ ಮೂರು ವರ್ಷ ದೊಡ್ಡವಳಾದ ಐಶ್ವರ್ಯಾಳನ್ನು ಹಣದ ಆಸೆಗಾಗಿ ಮದುವೆಯಾಗಿದ್ದಾನೆ ಅಂದರೆ ಅಧಿಕ್ ರವಿಚಂದ್ರನ್ ಅವರ ವೃತ್ತಿಜೀವನ ಮತ್ತು ಜೀವನ ಲಾಭವು ದೊಡ್ಡದಾಗಿದೆ. ಶಿವಾಜಿ ಗಣೇಶನ ಮನೆಯ ಅಳಿಯ ಎಂದು ಹೇಳುವುದು ಸಣ್ಣ ಮಾತಲ್ಲ ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ಸದ್ಯಕ್ಕೆ ಈ ವಿಚಾರವೊಂದು ಚರ್ಚೆಗೆ ಕಾರಣವಾಗಿದ್ದು ಅಭಿಮಾನಿಗಳು ಮಾತ್ರ ಈ ಸುದ್ದಿಯನ್ನು ಕೇಳಿ ಅಚ್ಚರಿ ಪಟ್ಟಿದ್ದಾರೆ.

Leave a Reply

Your email address will not be published. Required fields are marked *