ನೋಡಲು ಅಷ್ಟೊಂದು ಸುಂದರವಾಗಿದ್ದ ನಟ ಪ್ರಭಾಸ್ ಮುಖಕ್ಕೆ ಏನಾಯ್ತು ಗೊತ್ತಾ? ಒಮ್ಮೆಲೆ ಈ ರೀತಿ ಆಗಲು ಇದೇ ಕಾರಣ ನೋಡಿ!!

ನಟ ಪ್ರಭಾಸ್ ಪಾಲಿಗೆ ಬಾಹುಬಲಿ ಸಿನಿಮಾ ದೊಡ್ಡ ಮಟ್ಟದ ಯಶಸ್ಸು ತಂದು ಕೊಟ್ಟ ಸಿನಿಮಾ. ಈ ‘ಬಾಹುಬಲಿ’ ಚಿತ್ರದಿಂದ ಪ್ರಭಾಸ್​ಗೆ ಒಂದು ನಷ್ಟ ಆಗಿದೆ ಎನ್ನುವ ಮಾಹಿತಿ ರಿವೀಲ್ ಮಾಡಿದ್ದರು. ರಾಧೆ ಶ್ಯಾಮ್ ಸಿನಿಮಾದ ಪ್ರಚಾರದಲ್ಲಿ, ಈ ವಿಚಾರವನ್ನು ಬಹಿರಂಗ ಪಡಿಸಿದ್ದ ಪ್ರಭಾಸ್, ಕೆಲವು ಅಚ್ಚರಿಯ ವಿಚಾರವನ್ನು ತಿಳಿಸಿದ್ದರು. ಬಾಹುಬಲಿ’ ಬಳಿಕ ಪ್ರಭಾಸ್​ ಅವರು ಪ್ಯಾನ್​ ಇಂಡಿಯಾ ಸಿನಿಮಾಗಳನ್ನೇ ಆಯ್ಕೆ ಮಾಡಿಕೊಳ್ಳುವುದು ಅನಿವಾರ್ಯವಾಯಿತು.

ಎಲ್ಲ ಸಿನಿಮಾಗಳು ಕೂಡ ‘ಬಾಹುಬಲಿ’ ರೀತಿಯೇ ಅದ್ಭುತವಾಗಿ ಕಲೆಕ್ಷನ್​ ಮಾಡಬೇಕು ಎಂದು ಜನರು ನಿರೀಕ್ಷಿಸಲು ಆರಂಭಿಸಿದರು. ಆ ಒತ್ತಡವನ್ನು ಎದುರಿಸುವುದು ಸುಲಭವಲ್ಲ. ಬೇರೆ ಎಲ್ಲ ಸಿನಿಮಾಗಳನ್ನು ‘ಬಾಹುಬಲಿ’ಗೆ ಜನರು ಹೋಲಿಸಲು ಆರಂಭಿಸಿದ್ದಾರೆ. ಆ ಒತ್ತಡದ ಕಾರಣಕ್ಕೆ ಪ್ರಭಾಸ್​ ಅವರಿಗೆ ಬೇರೆ ಸಿನಿಮಾದಲ್ಲಿ ಹಿನ್ನಡೆ ಆಗುತ್ತಿದೆ. ಬಾಹುಬಲಿ’ ಚಿತ್ರದಿಂದ ಹೊಸ ಐಡೆಂಟಿಟಿ ಸಿಕ್ಕಿತು.

ಎಲ್ಲೇ ಹೋದರೂ ಅವರನ್ನು ಬಾಹುಬಲಿ ಎಂದೇ ಜನರು ಗುರುತಿಸುತ್ತಾರೆ. ಆ ಬಗ್ಗೆ ಅವರಿಗೆ ಖುಷಿ ಇದೆ. ಆದರೆ ಮತ್ತೆ ಮತ್ತೆ ಪ್ರಭಾಸ್​ ಅವರು ಆ ರೀತಿಯ ಆ್ಯಕ್ಷನ್​ ಸಿನಿಮಾಗಳನ್ನೇ ಮಾಡಬೇಕು ಅಂತ ಜನರು ಬಯಸುತ್ತಾರೆ. ‘ಅಂಥ ಕಮರ್ಷಿಯಲ್​ ಸಿನಿಮಾಗಳನ್ನು ಮಾಡುವುದು ಸುಲಭ. ಆದರೆ ನಾನು ಪ್ರಯೋಗ ಮಾಡಲು ಬಯಸುತ್ತೇನೆ’ ಎಂದಿದ್ದರು. ಬಾಹುಬಲಿ ಸಿನಿಮಾದ ಬಳಿಕ ನಟ ಪ್ರಭಾಸ್ ಅವರ ಯಾವ ಸಿನಿಮಾಗಳು ಅಷ್ಟಾಗಿ ಯಶಸ್ಸು ಕಾಣುತ್ತಿಲ್ಲ.

ನಟ ಪ್ರಭಾಸ್ ಅವರನ್ನು ಸರಿಯಾಗಿ ಗಮನಿಸಿದರೆ ಅವರ ಮುಖವು ಕಳೆಗುಂದಿದೆ. ಮೊದಲಿನಷ್ಟು ಚಾರ್ಮ್ ಅವರ ಮುಖದಲ್ಲಿ ಕಾಣುತ್ತಿಲ್ಲ. ಮುಖ ಕಾಂತಿಯೂ ಕಡಿಮೆಯಾಗುತ್ತಿರುವ ಕಾರಣ ನಾನಾ ರೀತಿಯ ಕಾಮೆಂಟ್ ಗಳು ವ್ಯಕ್ತವಾಗಿತ್ತು. ಹೌದು ಯವ್ವನ ಕರಗಿ ತಮ್ಮ ಮುಖದ ಕಾಂತಿ ಕರಗಿದೆಯೋ ಅಥವಾ ತಮ್ಮ ಡಯಟ್ ನಿಂದಾಗಿ ಈ ರೀತಿ ಮುಖಕಳೆಯನ್ನು ಕಳೆದುಕೊಂಡಿದ್ದೀಯೋ ಹೀಗೆ ನಾನಾ ರೀತಿಯ ಮಾತುಗಳು ಕೇಳಿ ಬಂದಿತ್ತು.

ಇನ್ನು, ಪ್ರಭಾಸ್ ಅವರ ಮಹಿಳಾ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿ ಈ ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದರು. ಇನ್ನು ನಮ್ಮ ಮನೆಯಲ್ಲಿ ತಂದಿಡುವ ಕೆಲಸ ಮಾಡುವ ಅಂಕಲ್ ಅವರ ಮುಖವೇ ಚೆನ್ನಾಗಿದೆ ಎಂದು ಕೆಲವರು ಆಡಿಕೊಂಡಿದ್ದರು. ಅದರ ಜೊತೆಗೆ ಕೆಲವರು ಪ್ರಭಾಸ್ ಡ್ರಗ್ಸ್ ಸೇವನೆ ಮಾಡುತ್ತಾರೆ ಎಂದು ಕೂಡ ಮಾತನಾಡಿಕೊಂಡಿದ್ದರು.

ಆದರೆ ಪ್ರಭಾಸ್ ಅವರ ಅಭಿಮಾನಿಗಳು ಮಾತ್ರ ಆರೋಗ್ಯದ ಕಡೆಗೆ ಗಮನ ಕೊಡಿ ಎಂದು ಹೇಳಿದ್ದರು.. ಪ್ರಭಾಸ್ ಮುಖವು ಕಾಂತಿ ಕಳೆದುಕೊಂಡಿದ್ದರ ಬಗ್ಗೆ ಪತ್ರಿಕೆ ಯೊಂದರಲ್ಲಿ ಮಾಹಿತಿಯೊಂದು ಪ್ರಕಟವಾಗಿತ್ತು. ಈ ಮಾಹಿತಿಯ ಪ್ರಕಾರ ಸಲಾರ್ ಸಿನಿಮಾದ ಶೂಟಿಂಗ್ ಸಮಯದಲ್ಲಿ ಬಿದ್ದು ಗಾಯ ಮಾಡಿಕೊಂಡಿದ್ದರು. ತದನಂತರದಲ್ಲಿ ತಮ್ಮ ಮುಖದ ಚಿಕಿತ್ಸೆಗೆ ಸ್ಪೇನ್ ಗೆ ತೆರಳಿದ್ದ ಪ್ರಭಾಸ್ ಫೇಷಿಯಲ್ ಟ್ರೀಟ್ ಮೆಂಟ್ ಪಡೆದುಕೊಂಡಿದ್ದರು. ಹೀಗಾಗಿ ನಟ ಪ್ರಭಾಸ್ ಅವರ ಮುಖವು ಬದಲಾಗಿದೆ ಎನ್ನಬಹುದು.

Leave a Reply

Your email address will not be published. Required fields are marked *