ಸಲಾರ್ ಸಿನಿಮಾಕ್ಕಾಗಿ ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಅವರು ಪಡೆದ ಸಂಭಾವನೆ ಎಷ್ಟು ಗೊತ್ತಾ?

ಪ್ಯಾನ್ ಇಂಡಿಯಾ ಸ್ಟಾರ್ ನಟರಲ್ಲಿ ಒಬ್ಬರಾಗಿರುವ ಪ್ರಭಾಸ್ (Prabhas) ಅವರು ಸಿನಿಮಾರಂಗದಲ್ಲಿ ಬ್ಯುಸಿಯಾಗಿರುವ ನಟ. ಬಿಗ್ ಬಜೆಟ್ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿರುವ ನಟ ಪ್ರಭಾಸ್ ಅವರಿಗೆ ಭಾರಿ ಬೇಡಿಕೆಯಿದೆ. ಸದ್ಯಕ್ಕೆ ನಟ ಪ್ರಭಾಸ್ ನಟನೆಯ ಸಲಾರ್ (Salaar) ಸಿನಿಮಾ ತೆರೆಗೆ ಬಂದಿದೆ. ನಾಯಕನಾಗಿ ನಟಿಸಿರುವ ಸಲಾರ್ ಚಿತ್ರಕ್ಕೆ ‘ಕೆಜಿಎಫ್’ (KGF) ಖ್ಯಾತಿಯ ನಿರ್ದೇಶಕ ಪ್ರಶಾಂತ್ ನೀಲ್ (Prashanth Neel) ಆಕ್ಷನ್ ಕಟ್ ಹೇಳಿದ್ದಾರೆ.

ಬಾಹುಬಲಿ ಖ್ಯಾತಿಯ ಡಾರ್ಲಿಂಗ್ ಪ್ರಭಾಸ್ (Prabhas) ನಾಯಕ ನಟನಾಗಿ ಅಭಿನಯಿಸಿದ ಬಹುನಿರೀಕ್ಷಿತ ಸಿನಿಮಾ ಸಲಾರ್ ಡಿಸೆಂಬರ್ 22 ರಂದು ದೇಶದಾದ್ಯಂತ ಬಿಡುಗಡೆಯಾಗಿದೆ. ಸಲಾರ್ ಸಿನಿಮಾಕ್ಕೆ ಸಿನಿಪ್ರೇಕ್ಷಕರಿಂದ ಒಳ್ಳೆಯ ರೆಸ್ಪಾನ್ಸ್ ಸಿಗುತ್ತಿದ್ದೂ, ಥಿಯೇಟರ್‌ಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಹೀಗಿರುವಾಗಲೇ ಈ ಸಿನಿಮಾದ ನಟನೆಗಾಗಿ ನಟ ಪ್ರಭಾಸ್ ಅವರು ಪಡೆದ ಸಂಭಾವನೆಯ ಕುರಿತು ಭಾರಿ ಚರ್ಚೆಯಾಗುತ್ತಿದೆ.

ನಟ ಪ್ರಭಾಸ್ ಅವರು ಬಾಹುಬಲಿ ಸಿನಿಮಾದ ಮೂಲಕ ತಮ್ಮ ಬೇಡಿಕೆಯನ್ನು ಹೆಚ್ಚಿಸಿಕೊಂಡಿದ್ದಾರೆ. ಈ ಸಿನಿಮಾದ ಬಳಿಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರಹೊಮ್ಮಿರುವ ನಟ ಪ್ರಭಾಸ್ ಅವರು ಅತೀ ಹೆಚ್ಚು ಸಂಭಾವನೆಯನ್ನು ಪಡೆಯುವ ನಟರ ಸಾಲಿನಲ್ಲಿ ಸೇರಿದ್ದಾರೆ. ಬಾಹುಬಲಿ ಸಿನಿಮಾದ ಬಳಿಕ ಬಿಗ್ ಬಜೆಟ್ ಸಿನಿಮಾಗಳನ್ನು ಒಪ್ಪಿಕೊಂಡರೂ ಕೂಡ ಅವರ ಸಿನಿಮಾಗಳೆಲ್ಲವು ಸೋಲು ಕಂಡಿವೆ.

ಹೀಗಿರುವಾಗ ಸಲಾರ್ ಸಿನಿಮಾವು ಅವರ ಸಿನಿ ಕೆರಿಯರ್ ಬ್ರೇಕ್ ನೀಡುವ ಸಿನಿಮಾ ಎನ್ನುವ ನಿರೀಕ್ಷೆಯಿದೆ. ಸದ್ಯಕ್ಕೆ ಬಹುನಿರೀಕ್ಷಿತ ಸಿನಿಮಾ ಸಲಾರ್ ಚಿತ್ರವು 400 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದ್ದು, ಆದರೆ ಆ ಮೊತ್ತದಲ್ಲಿಕಾಲು ಭಾಗವನ್ನು ಪ್ರಭಾಸ್ ಅವರಿಗೆ ಸಂಭಾವನೆಯಾಗಿ ನೀಡಲಾಗಿದೆ.

ಹೀಗಾಗಿ ನಟ ಪ್ರಭಾಸ್‌ ಸಲಾರ್‌ ಚಿತ್ರದಲ್ಲಿ ನಟಿಸಿದ್ದಕ್ಕಾಗಿ 100 ಕೋಟಿಯವರೆಗೂ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ. ಸಲಾರ್ ಚಿತ್ರವನ್ನು ಹೊಂಬಾಳೆ ಫಿಲ್ಮ್ಸ್‌ (Hombale Films) ನಿರ್ಮಿಸಲಾಗಿದ್ದು, ಸದ್ಯಕ್ಕೆ ಸಿನಿಮಾಕ್ಕೆ ಒಳ್ಳೆಯ ರೆಸ್ಪಾನ್ಸ್ ಬರುತ್ತಿದೆ.

Leave a Reply

Your email address will not be published. Required fields are marked *