ಯುರೋಪ್ ಪ್ರವಾಸ ಫೋಟೋ ಹಂಚಿಕೊಂಡ ನಟ ಕಮ್ ರಾಜಕಾರಣಿ ನಿಖಿಲ್ ಕುಮಾರಸ್ವಾಮಿ

ನಟ ಕಮ್ ರಾಜಕಾರಣಿ ನಿಖಿಲ್ ಕುಮಾರಸ್ವಾಮಿ (Nikhil Kumaraswami) ಯವರು ಬಹಳಷ್ಟು ಖ್ಯಾತಿ ಗಳಿಸಿಕೊಂಡಿದ್ದಾರೆ. ಬಣ್ಣದ ಲೋಕ ಹಾಗೂ ರಾಜಕಾರಣಿದಲ್ಲಿ ಗುರುತಿಸಿಕೊಂಡು ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿಕೊಂಡಿರುವ ನಟ ನಿಖಿಲ್ ಕುಮಾರಸ್ವಾಮಿಯವರು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಆಗಾಗ ತಮ್ಮ ವೈಯುಕ್ತಿಕ ಬದುಕಿನ ಬಗ್ಗೆ ಅಪ್ಡೇಟ್ ನೀಡುವ ನಿಖಿಲ್ ಫೋಟೋ ಹಾಗೂ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುವುದು ಮಾಮೂಲಿ.

ಕಳೆದ 10 ದಿನಗಳಿಂದ ಕುಮಾರಸ್ವಾಮಿ ಫ್ಯಾಮಿಲಿ ಅವರು ಯುರೋಪ್​​ (Europe)ನಲ್ಲಿ ಪ್ರವಾಸ ಕೈಗೊಂಡಿತ್ತು. ಐಲ್ಯಾಂಡ್​ (Island) ಟ್ರಿಪ್ ಅನ್ನು ಕುಟುಂಬದೊಂದಿಗೆ ಎಂಜಾಯ್ ಮಾಡಿದ್ದಾರೆ. ಕಳೆದೊಂದು ವಾರದಿಂದ ಯುರೋಪ್ ಐಸ್ ಲ್ಯಾಂಡ್‌ (Island) ಗೆಕುಟುಂಬದ ಸಮೇತರಾಗಿ ಪ್ರವಾಸವನ್ನು ಎಂಜಾಯ್ ಮಾಡಿದ್ದರು.

ಯುರೋಪ್‌ನಲ್ಲಿ ಹೊಸ ಹೊಸ ಜಾಗಗಳಿಗೆ ಭೇಟಿ ನೀಡುತ್ತಿದ್ದ ವೇಳೆಯಲ್ಲಿ ತೆಗೆಸಿದ್ದ ನಿಖಿಲ್ ಕುಮಾರಸ್ವಾಮಿಯವರ ಫೋಟೋವೊಂದು ವೈರಲ್ ಆಗಿದೆ. ಈ ಫೋಟೋದಲ್ಲಿ ಸಿಂಗಲ್ (Single) ಆಗಿ ನಿಂತುಕೊಂಡು ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. ಈ ಫೋಟೋವನ್ನು ಶೇರ್ ಮಾಡಿಕೊಂಡು ಐಸ್ ಲ್ಯಾಂಡ್ ಎಂದು ಬರೆದುಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಫೋಟೋವನ್ನು ಶೇರ್ ಮಾಡಿಕೊಳ್ಳುತ್ತಿದ್ದಂತೆ ನಲವತ್ತು ಸಾವಿರಕ್ಕೂ ಅಧಿಕ ಲೈಕ್ಸ್ ಬಂದಿದೆ.

ಅದಲ್ಲದೇ ವೈರಲ್ ಆಗಿರುವ ಫೋಟೋದಲ್ಲಿ ಕುಮಾರಸ್ವಾಮಿ, ಪತ್ನಿ ಅನಿತಾ ಕುಮಾರಸ್ವಾಮಿ, ಪುತ್ರ ನಿಖಿಲ್ ಕುಮಾರಸ್ವಾಮಿ, ಸೊಸೆ, ಮೊಮ್ಮಗನು ಇರುವುದನ್ನು ಕಾಣಬಹುದು. ಕುಟುಂಬದ ಸದಸ್ಯರೆಲ್ಲರೂ ಜೊತೆ ಸೇರಿಕೊಂಡ ವಿದೇಶಿ ಪ್ರವಾಸಿ ತಾಣಗಳನ್ನು ಕಣ್ತುಂಬಿಸಿಕೊಂಡಿದ್ದಾರೆ.

2020 ಲಾಕ್ಡೌನ್ ನಲ್ಲಿ ಅಂದರೆ ಏಪ್ರಿಲ್ 17 ರಲ್ಲಿ ನಿಖಿಲ್ ಕುಮಾರಸ್ವಾಮಿ (Nikhil Kumaraswami) ರವರು ರೇವತಿ ( Revathi) ಯವರ ಜೊತೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. 2021 ಸೆಪ್ಟೆಂಬರ್ 24 ಕ್ಕೆ ಮುದ್ದಿನ ಮಗನಿಗೆ ಅವ್ಯಾನ್ ದೇವ್ (Avyan Dev) ಆಗಮನವಾಗಿತ್ತು. ಇತ್ತ ಮಗನ ಬಗೆಗೆ ಕೂಡ ಅಪ್ಡೇಟ್ ನೀಡುತ್ತಾ ಅಭಿಮಾನಿಗಳನ್ನು ಖುಷಿ ಪಡಿಸುತ್ತಿರುತ್ತಾರೆ.

ಜಾಗ್ವಾರ್ (jagvar) ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ನಾಯಕನಾಗಿ ಎಂಟ್ರಿ ಕೊಟ್ಟ ನಿಖಿಲ್ ಕುಮಾರ್ (Nikhil Kumaraswami) ಸಿನಿಮಾರಂಗದಲ್ಲಿ ಹೇಳಿಕೊಳ್ಳುವಷ್ಟೇನು ಯಶಸ್ಸು ಕಂಡಿಲ್ಲ. ರೈಡರ್ ಸಿನಿಮಾದ ಬಳಿಕ ಇದೀಗ ಮತ್ತೊಂದು ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ. ಹೌದು, ಧನುಷ್ (Dhanush) ಮತ್ತು ಯದುವೀರ (Yaduveer) ಎಂಬೆರಡು ಚಿತ್ರಗಳನ್ನು ನಿಖಿಲ್ ಒಪ್ಪಿಕೊಂಡಿದ್ದಾರೆ. ಸದ್ಯಕ್ಕೆ ಈ ಎರಡು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

Leave a Reply

Your email address will not be published. Required fields are marked *