ಕಾಮಿಡಿ ಕಿಲಾಡಿಗಳು ಖ್ಯಾತಿಯ ನಟಿ ನಯನಾರವರ ಮದುವೆಯ ಸುಂದರ ಕ್ಷಣಗಳು ಹೇಗಿತ್ತು ಗೊತ್ತಾ? ಇಲ್ಲಿದೆ ವಿಶೇಷ ಫೋಟೋಗಳು

ಕಿರುತೆರೆಯಲ್ಲಿ ಸಾಕಷ್ಟು ರಿಯಾಲಿಟಿ ಶೋ ಗಳು ಆರಂಭಗೊಂಡಿದೆ. ಈ ಶೋಗಳಿಂದ ಈಗಾಗಲೇ ಕಲಾವಿದರು ವೇದಿಕೆಗಳು ಸಿಕ್ಕಿವೆ. ರಿಯಾಲಿಟಿ ಶೋಗಳಿಂದ ತಮ್ಮ ಜೀವನಕ್ಕೆ ನೆಲೆ ಕಂಡುಕೊಂಡಿದ್ದಾರೆ. ಈ ಶೋಗಳು ಸಾಮಾನ್ಯ ಜನರನ್ನು ಫೇಮಸ್ ಮಾಡಿದೆ ಎನ್ನುವುದರಲ್ಲಿ ಯಾವುದೇ ಡೌಟ್ ಇಲ್ಲ.

ಈಗಾಗಲೇ ಕಿರುತೆರೆಯಲ್ಲಿ ಎಲ್ಲಾ ವಾಹಿನಿಯಲ್ಲೂ ಕೂಡ ಸಾಕಷ್ಟು ರಿಯಾಲಿಟಿ ಶೋ ಗಳು ಆರಂಭವಾಗಿ ಪ್ರೇಕ್ಷಕ ಮನಸ್ಸು ಗಗೆದ್ದುಕೊಂಡಿದೆ. ಕಾಮಿಡಿ ಕಿಲಾಡಿಗಳು ಶೋ ಮೂಲಕ ಫೇಮಸ್ ಆದವರು ನಟಿ ನಯನಾ (Nayana). ನಟಿ ನಯನಾ ಯಾವುದೇ ನಟನೆಯ ಬ್ಯಾಕ್ ಗ್ರೌಂಡ್ ಇಲ್ಲದೇನೆ ಕಾಮಿಡಿ ಕಿಲಾಡಿಗಳು ಶೋಗೆ ಎಂಟ್ರಿ ಕೊಟ್ಟವರು.

ನೇರ ನುಡಿಯ ವ್ಯಕ್ತಿತ್ವ ಹೊಂದಿರುವ ನಯನಾ ಹುಬ್ಬಳ್ಳಿ (Hubbali) ಯವರು. ತನ್ನ ಅದ್ಭುತ ಹಾಸ್ಯದ ಮೂಲಕ ನಯನಾ ಕನ್ನಡಿಗರ ಹೃದಯ ಗೆದ್ದರು. ವೃತ್ತಿ ಜೀವನದಲ್ಲಿ ಯಶಸ್ಸು ಸಾಧಿಸುತ್ತಿದ್ದಂತೆ ವೈಯುಕ್ತಿಕ ಜೀವನದಲ್ಲಿ ತಾನು ಇಷ್ಟ ಪಟ್ಟ ಹುಡುಗನನ್ನು ಮದುವೆ ಮಾಡಿಕೊಂಡರು.ಕಳೆದ ಕೆಲವು ವರ್ಷಗಳ ಹಿಂದೆಯಷ್ಟೇ ನಯನಾ ಬೆಂಗಳೂರು ಮೂಲದ ಉದ್ಯಮಿ ಶರತ್ (Sharath) ಜೊತೆ ದಾಂಪತ್ಯಕ್ಕೆ ಕಾಲಿಟ್ಟರು.

ಅಂದಹಾಗೆ ಇವರದ್ದು ಲವ್ ಮ್ಯಾರೇಜ್. 9 ವರ್ಷಗಳ ಕಾಲ ಪ್ರೀತಿಸಿ ಮದುವೆಯಾದವರು. ಈ ನಯನಾ ದಂಪತಿಗಳ ಮದುವೆಯ ಫೋಟೋವೊಂದು ವೈರಲ್ ಆಗಿವೆ. ಈ ಫೋಟೋದಲ್ಲಿ ವಧು ವರರಂತೆ ರೆಡಿಯಾಗಿದ್ದು, ಈ ಫೋಟೋ ನೋಡಿದ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಫೋಟೋ ನೂರ ತೊಂಭತ್ತಕ್ಕೂ ಅಧಿಕ ವ್ಯೂಸ್ ಬಂದಿದೆ.ಅದಲ್ಲದೇ ಕಾಮಿಡಿ ಕಿಲಾಡಿಗಳು (Comdey Kiladi) ಖ್ಯಾತಿಯ ನಟಿ ನಯನಾ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

ಕಳೆದ ನಾಲ್ಕೈದು ದಿನಗಳ ಹಿಂದೆಯಷ್ಟೇ ತಾಯಿಯಾಗುತ್ತಿರುವ ನಯನಾ ಅವರಿಗೆ ಸ್ಟಾರ್ ಸುವರ್ಣಾ (Star Suvarna) ವಾಹಿನಿಯಲ್ಲಿ ಪ್ರಸಾರವಾಗುವ ಬೊಂಬಾಟ್ ಭೋಜ (Bombat Bojana) ನ ಕಾರ್ಯಕ್ರಮದಲ್ಲಿ ಬಸರಿ ಬಯಕೆ ಈಡೇರಿಸಲಾಗಿದೆ. ಸಿಹಿ ಕಹಿ ಚಂದ್ರು (Sihi Kahi Chandru) ನಡೆಸಿಕೊಡುವ ಬೊಂಬಾಟ್ ಭೋಜನ ಕಾರ್ಯಕ್ರಮದಲ್ಲಿ ನಯನಾ ಭಾಗಿಯಾಗಿದ್ದರು.

ಕಾರ್ಯಕ್ರಮದಲ್ಲಿ ನಯನಾ ಇಷ್ಟದ ಪಾನಿಪೂರಿ ಮಾಡಿಕೊಟ್ಟಿದ್ದು ನಟಿಯ ಬಯಕೆಯನ್ನು ಈಡೇರಿಸಲಾಗಿದೆ. ಇತ್ತ 6 ತಿಂಗಳ ಗರ್ಭಿಣಿಯಾಗಿರುವ ನಟಿ ನಯನಾರವರು. ಗರ್ಭಿಣಿಯಾಗಿದ್ದರೂ ಶೂಟಿಂಗ್ ನಲ್ಲಿ ಭಾಗಿಯಾಗುತ್ತಿದ್ದಾರೆ. ಅದಲ್ಲದೆ ಕಾರ್ಯಕ್ರಮಗಳನ್ನು ನಿರೂಪಣೆ ಮಾಡುತ್ತಿದ್ದು, ಈಗಾಗಲೇ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

Leave a Reply

Your email address will not be published. Required fields are marked *