ಥೈಲಾಂಡ್ ಟ್ರಿಪ್ ನಲ್ಲಿ ಮೈ ಮರೆತು ಎಂಜಾಯ್ ಮಾಡುತ್ತಿರುವ ನಟ ನರೇಶ್ ಹಾಗೂ ಪವಿತ್ರಾ ಲೋಕೇಶ್, ಇವರಿಬ್ಬರ ಫೋಟೋ ನೋಡಿ ಮಸ್ತ್!!!

ತೆಲುಗಿನ ಖ್ಯಾತ ಹಿರಿಯ ನಟ ನರೇಶ್ (Naresh) ಮತ್ತು ಪವಿತ್ರಾ ಲೋಕೇಶ್ (Pavitra Lokesh) ಅವರು ಕಳೆದ ಕೆಲವು ವರ್ಷಗಳಿಂದ ಸುದ್ದಿಯಾಗುತ್ತಿರುವುದು ಎಲ್ಲರಿಗೂ ಕೂಡ ತಿಳಿದಿರುವ ವಿಚಾರ. ಅದಲ್ಲದೇ ವರ್ಷದ ಪ್ರಾರಂಭದಲ್ಲಿ ನರೇಶ್ ಪವಿತ್ರ ಅವರ ಹೊಸ ವರ್ಷದ ಸರ್ಪ್ರೈಸ್ ವಿಡಿಯೋ (Surprise Video) ವನ್ನು ಶೇರ್ ಮಾಡಿಕೊಂಡಿದ್ದು ಎಲ್ಲರ ಅಚ್ಚರಿಗೂ ಕಾರಣವಾಗಿತ್ತು.

ಈ ವಿಡಿಯೋದಲ್ಲಿ ಈ ಜೋಡಿ ಲಿ-ಪ್‌ ಲಾಕ್‌ (Lip Lock) ಮಾಡಿದ್ದು, ಇವರಿಬ್ಬರೂ ನಿಜವಾಗಿಯೇ ಮದುವೆಯಾಗಿದ್ದಾರೆ ಎಂದುಕೊಂಡಿದ್ದರು. ಆದರೆ ಕೊನೆಗೆ ಇದು ಸಿನಿಮಾದ ಪ್ರಚಾರಕ್ಕಾಗಿ ಎನ್ನುವುದು ತಿಳಿಯಿತು. ಅದೇನೇ ಇದ್ದರೂ ಇವರಿಬ್ಬರ ನಡುವೆ ಸಂಬಂಧವಿರುವುದು ಪಕ್ಕಾ ಎನ್ನುವುದಕ್ಕೆ ಈಗಾಗಲೇ ಅನೇಕ ಸಾಕ್ಷಿಗಳು ಸಿಕ್ಕಿವೆ. ಕಳೆದ ಕೆಲವು ತಿಂಗಳ ಹಿಂದೆಯಷ್ಟೇ ಈ ಜೋಡಿಯೂ ತಮ್ಮಿಬ್ಬರ ನಡುವೆ ಸಂಬಂಧವಿರುವುದು ನಿಜ ಎನ್ನುವುದನ್ನು ಸ್ಪಷ್ಟ ಪಡಿಸಿತ್ತು.

ಸಿನಿಮಾ ಪ್ರಚಾರದ ವೇಳೆಯಲ್ಲಿ ಸುದ್ದಿ ಮಾಧ್ಯಮದೊಂದಿಗೆ ಮಾತನಾಡಿದ್ದ ನಟ ನರೇಶ್, ‘ಸುಪ್ರೀಂಕೋರ್ಟ್ ಕೂಡ ಲೀವ್ ಇನ್ ರಿಲೇಶನ್ ಶಿಪ್ (Live in relationship) ಅನ್ನು ಮದುವೆಗೆ ಸಮ ಎಂದು ಹೇಳಿದೆ. ಹಾಗಾಗಿ ನಾವು ಸಹಜೀವನ ನಡೆಸುತ್ತಿದ್ದೇವೆ. ನಾನು ಸಿಂಗಲ್ ಆಗಿ ಇದ್ದೀನಿ ಅಂತ ಅಂದ್ಕೊಳ್ಳಬೇಡಿ. ನಾವಿಬ್ಬರೂ ಒಟ್ಟಿಗೆ ಇದ್ದೇವೆ. ಖುಷಿಯಾಗಿದ್ದೇವೆ’ ಎಂದಿದ್ದರು.

ಅಷ್ಟೇ ಅಲ್ಲದೇ, ‘ಬಹುಪತ್ನಿತ್ವ ತಪ್ಪು ಎನ್ನುವುದನ್ನು ನಾನೂ ಒಪ್ಪಿಕೊಳ್ಳುತ್ತೇನೆ. ಹಾಗಂತ ಬಲವಂತವಾಗಿ ಯಾರೊಂದಿಗೂ ಬದುಕುವುದಕ್ಕೆ ಆಗುವುದಿಲ್ಲ. ಸಮಾಜಕ್ಕೆ ಹೆದರಿ ತುಂಬಾ ಜನ ಒಟ್ಟಿಗೆ ಜೀವನ ನಡೆಸುತ್ತಿದ್ದಾರೆ. ಆದರೆ, ಅವರು ಯಾರೂ ಸುಖವಾಗಿ ಇಲ್ಲ. ಕಿರುಕುಳದ ನಡುವೆಯೂ ಬದುಕು ನಡೆಸುವುದು ನನ್ನ ಮಟ್ಟಿಗೆ ತಪ್ಪು’ ಎನ್ನುವುದನ್ನು ಹೇಳಿಕೊಂಡಿದ್ದರು. ಆದರೆ ಇದೀಗ ಈ ಜೋಡಿ ವಿದೇಶಕ್ಕೆ ಹಾರಿದ್ದು ಎಂಜಾಯ್ ಮಾಡುತ್ತಿದ್ದಾರೆ.

ಥಾಯ್ಲೆಂಡ್ (Thailand)ಗೆ ಹಾರಿರುವ ಈ ಜೋಡಿ ಫಾರಿನ್ ಟ್ರಿಪ್ ಎಂಜಾಯ್ ಮಾಡುತ್ತಿರುವ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ. ವಿದೇಶಿ ಟ್ರಿಪ್ ಫೋಟೋಗಳನ್ನು ನಟಿ ಪವಿತ್ರಾ ಲೋಕೇಶ್ ಅವರು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಸಿನಿಮಾ ರಂಗಕ್ಕೆ ಬಂದು ಐವತ್ತು ವರ್ಷಗಳು ತುಂಬಿರುವ ಈ ಸಂದರ್ಭದಲ್ಲಿ ತಮಗೆ ಸಹಾಯಕ್ಕೆ ನಿಂತ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದ್ದಾರೆ. ಈ ಫೋಟೋಗಳನ್ನು ನೋಡಿದ ನೆಟ್ಟಿಗರು ಶಾ-ಕ್ ಆಗಿದ್ದಾರೆ.

Leave a Reply

Your email address will not be published. Required fields are marked *