ಸ್ಯಾಂಡಲ್‍ವುಡ್ ನಟ ನಾಗಭೂಷಣ್ (Nagabhushan) ಮೇಲೆ ಹಿ-ಟ್ ಆಂಡ್ ರನ್ ಆ-ರೋಪ ವೊಂದು ಕೇಳಿ ಬಂದಿದೆ. ಹೌದು ನಟನು ಅತಿ ವೇಗವಾಗಿ ಕಾರು ಚಾಲನೆ ಮಾಡಿಕೊಂಡು ಬರುತ್ತಿದ್ದಾಗ ನಿಯಂತ್ರಣ ತಪ್ಪಿ ದಂಪತಿಗೆ ಡಿ-ಕ್ಕಿ ಹೊ-ಡೆದಿದ್ದಾನೆ. ಈ ಅ-ಪಘಾತದಲ್ಲಿ ಮಹಿಳೆಯು ಸಾ-ವನ್ನಪ್ಪಿದ್ದು, ಈ ಘಟನೆ ಕುಮಾರಸ್ವಾಮಿ ಲೇಔಟ್ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿ (Kumaraswamy Layout Mobile Police Station Area) ಯಲ್ಲಿ ರಾತ್ರಿ ನಡೆದಿದೆ.
ಸದ್ಯಕ್ಕೆ ಸ್ಯಾಂಡಲ್ ವುಡ್ ನಟ ನಾಗಭೂಷಣ್ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.ತಡರಾತ್ರಿ ಬೆಂಗಳೂರಿನ ಕನಕಪುರ ರಸ್ತೆ (Kanakapura Road) ಯಲ್ಲಿ ಕೋಣನಕುಂಟೆ ಅಪಾರ್ಟ್ ಮೆಂಟ್ (Konanakunte Apartment) ಬಳಿ ನಟ ನಾಗಭೂಷಣ್ ಅವರ ಕಾರು ಫುಟ್ ಪಾತ್ ಮೇಲೆ ನಡೆದು ಹೋಗುತ್ತಿದ್ದ ದಂಪತಿಗೆ ಡಿ-ಕ್ಕಿ ಹೊಡೆದ ಪರಿಣಾಮವಾಗಿ ಪ್ರೇಮಾ (Premaa) ಎನ್ನುವ ಮಹಿಳೆಯೂ ಸ್ಥಳದಲ್ಲೇ ಸಾ-ವನ್ನಪ್ಪಿದ್ದರು.

ಆದರೆ ಆಕೆಯ ಗಂಡ ಕೃಷ್ಣ (Krishana) ಗಂ-ಭೀರವಾಗಿ ಗಾಯಗೊಂಡಿದ್ದು, ಆಸ್ಪತೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಈ ಅಪಘಾತ ಪ್ರಕರಣದಡಿಯಲ್ಲಿ ನಟ ನಾಗಭೂಷಣ್ ವಿರುದ್ಧ ಪ್ರಕರಣ ಎಫ್ ಐ ಆರ್ (FIR) ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ನಟ ನಾಗಭೂಷಣ ಅವರನ್ನು ಪೊಲೀಸರು ವ-ಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ. ನಾಗಭೂಷಣ್ ನೀಡಿರುವ ಹೇಳಿಕೆಯನ್ನು ಪೊಲೀಸರು ಬಿಡುಗಡೆ ಮಾಡಿದ್ದು, ಇದರಲ್ಲಿ ನಡೆದ ಘಟನೆಯನ್ನು ನಟ ನಾಗಭೂಷಣ್ ಸಂಕ್ಷಿಪ್ತವಾಗಿ ವಿವರಿಸಿದ್ದಾರೆ.
ನಾನು ಈ ಮೇಲ್ಕಂಡ ವಿಳಾಸದಲ್ಲಿ ವಾಸವಾಗಿದ್ದುಕೊಂಡು ಸಿನಿಮಾ ಇಂಡಸ್ಟ್ರೀಯಲ್ಲಿ ನಟನಾಗಿ ಕೆಲಸ ಮಾಡಿಕೊಂಡು ಜೀವನ ಮಾಡಿಕೊಂಡಿರುತ್ತೇನೆ. ದಿನಾಂಕ:30-09-2023 ರಂದು ನಾನು ನನ್ನ ಸ್ನೇಹಿತರನ್ನು ನೋಡಲು ಆರ್.ಆರ್ ನಗರಕ್ಕೆ ಹೋಗಿ ಸ್ನೇಹಿತರನ್ನು ಭೇಟಿ ಮಾಡಿಕೊಂಡು ವಾಪಸ್ಸು ಜೆ.ಪಿ ನಗರದಲ್ಲಿರುವ ನಮ್ಮ ಮನೆಗೆ ಹೋಗಲು ನನ್ನ ಮಾಲೀಕತ್ವದ ಕೀಯ ಸೆಲ್ವೇಸ್ ಕಾರ್ ನಂಬರ್ ಕೆಎ-09-ಎಂಜಿ-5335ರ ವಾಹನವನ್ನು ಚಲನೆ ಮಾಡಿಕೊಂಡು ವಸಂತಪುರ ಮುಖ್ಯರಸ್ತೆಯಲ್ಲಿ ಉತ್ತರಹಳ್ಳಿ ಕಡೆಯಿಂದ ಕೋಣನಕುಂಟೆ ಕ್ರಾಸ್ ಕಡೆಗೆ ಹೊರಟಿದ್ದೆ.
ವಸಂತಪುರ ಮುಖ್ಯರಸ್ತೆಯ ಸುಪ್ರಭಾತ ಶ್ರೀಂ ಬೀಜ್ ಅಪಾರ್ಟಮೆಂಟ್ ಹತ್ತಿರ ರಾತ್ರಿ ಸುಮಾರು 09-45 ಗಂಟೆಯ ಸಮಯದಲ್ಲಿ ಚಾಲನೆ ಮಾಡಿಕೊಂಡು ಹೋಗುತ್ತಿರುವಾಗ ಅಪಾರ್ಟಮೆಂಟ್ ಹತ್ತಿರ ಒಬ್ಬ ಹೆಂಗಸು ಮತ್ತು ಒಬ್ಬರು ಗಂಡಸು ಇಬ್ಬರೂ ಪುಟ್ ಪಾತ್ ಮೇಲಿಂದ ರಸ್ತೆಗೆ ಕೆಳಗೆ ಇಳಿದು ರಸ್ತೆಗೆ ಬಂದರು. ಅವರು ಬಂದಿದ್ದನ್ನು ನೋಡಿ ನನಗೆ ಗಾ-ಬರಿಯಾಗಿ ನಾನು ರಸ್ತೆಗೆ ಬಂದಿದ್ದವರಿಗೆ ಡಿ-ಕ್ಕಿ ಮಾಡಿ ನಂತರ ಮುಂದೆ ಹೋಗಿ ಪುಟ್ ಪಾತ್ ಮೇಲೆ ಇದ್ದ ವಿದ್ಯುತ್ ಕಂಬಕ್ಕೆ ಡಿ-ಕ್ಕಿ ಹೊಡೆದೆ.
ಕೂಡಲೇ ಅಕ್ಕಪಕ್ಕದಲ್ಲಿದ್ದ ಜನರು ಮತ್ತು ಅಪಾರ್ಟಮೆಂಟ್ ವಾಸಿಗಳು ಓಡಿ ಬಂದು ರಸ್ತೆಯ ಮೇಲೆ ಬಿದ್ದಿದ್ದ ಪಾದಚಾರಿಗಳನ್ನು ಮೇಲಕ್ಕೆ ಎತ್ತಿ ರಸ್ತೆ ಬದಿಗೆ ತಂದು ಕೂರಿಸಿದರು. ನಂತರ ನಾನು ಕಾರಿನಿಂದ ಕೆಳಕ್ಕೆ ಇಳಿದು ಪಾದಚಾರಿಗಳನ್ನು ಕೂರಿಸಿದ್ದ ಸ್ಥಳಕ್ಕೆ ಹೋಗಿ ನೋಡಲಾಗಿ ಪಾದಚಾರಿಣಿ ಹೆಂಗಸಿಗೆ ತಲೆಗೆ ಮತ್ತು ಮುಖಕ್ಕೆ ಜಾಸ್ತಿ ಏಟಾಗಿ ಮಾತಾನಾಡದ ಸ್ಥಿತಿಯಲ್ಲಿದ್ದರು. ಮತ್ತೊಬ್ಬ ಪಾದಚಾರಿ ಗಂಡಸಿಗೆ ಎರಡು ಕಾಲುಗಳಿಗೆ, ಹೊಟ್ಟೆ, ಬೆನ್ನು ಮತ್ತು ತಲೆಗೆ ಗಾ-ಯವಾಗಿ ಮಾತಾನಾಡುತ್ತಿದ್ದರು.
ನಂತರ ನಾನು ಗಾ-ಯಾಳುಗಳನ್ನು ನನ್ನ ಕಾರಿನಲ್ಲಿ ಕರೆದುಕೊಂಡು ಹೋಗಲು ಪ್ರಯತ್ನ ಮಾಡಿದಾಗ ನನ್ನ ಕಾರು ಸ್ಟಾಟ್ ಆಗಲಿಲ್ಲ. ನಂತರ ನಾನು ಕಾರಿನಿಂದ ಕೆಳಕ್ಕೆ ಇಳಿದು ಒಂದು ಆಟೋರಿಕ್ಷಾದಲ್ಲಿ ನಾನು ಮತ್ತು ಅಲ್ಲಿದ್ದ ಜನರು ಸೇರಿಕೊಂಡು ಗಾಯಾಳುಗಳನ್ನು ಕೂರಿಸಿಕೊಂಡು ವಸಂತಪುರ ಮುಖ್ಯರಸ್ತೆಯಲ್ಲಿರುವ ಅಸ್ಟ್ರಾ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲು ಮಾಡಿದಾಗ, ಅಸ್ಟಾ ಆಸ್ಪತ್ರೆಯ ವೈದ್ಯರು ಗಾಯಾಳು ಹೆಂಗಸನ್ನು ಪರೀಕ್ಷಿಸಿ ಗಾ-ಯಾಳುವಿಗೆ ತಲೆಗೆ ಮತ್ತು ಮುಖಕ್ಕೆ ಜಾಸ್ತಿ ಏಟಾಗಿದ್ದು ಚಿಕಿತ್ಸೆಗೆ ಬರುವ ದಾರಿಯ ಮಧ್ಯದಲ್ಲಿ ಮೃ-ತಪಟ್ಟಿರುವುದಾಗಿ ತಿಳಿಸಿದರು.

ಅಷ್ಟರಲ್ಲಿ ವಿಷಯ ತಿಳಿದು ಆಸ್ಪತ್ರೆಗೆ ಸಂಚಾರ ಪೊಲೀಸರು ಬಂದರು ನಾನು ಅವರೊಂದಿಗೆ ಕೆ.ಎಸ್.ಲೇಔಟ್ ಸಂಚಾರ ಪೊಲೀಸ್ ಠಾಣೆಗೆ ಬಂದು ಅ-ಪಘಾತದ ಬಗ್ಗೆ ವಿವರಿಸಿ ಹೇಳಿ ಅ-ಪಘಾತ ಸಮಯದಲ್ಲಿ ನನ್ನ ಮಾಲೀಕತ್ವದ ಕಾರ್ ನಂಬರ್ ಕೆಎ-09-ಎಂಜಿ-5335ರ ವಾಹನವನ್ನು ನಾನೇ ಚಾಲನೆ ಮಾಡಿರುವುದಾಗಿ ಈ ನನ್ನ ಸ್ವ ಇಚ್ಛಾ ಹೇಳಿಕೆಯನ್ನು ನೀಡಿರುತ್ತೇನೆ. ಈ ನನ್ನ ಹೇಳಿಕೆಯನ್ನು ಪೊಲೀಸ್ ಇನ್ಸ್‌ಪೆಕ್ಟರ್‌ರವರು ಹೆಚ್.ಸಿ.9570 ಸುರೇಶ್ ಕುಮಾ ಹೆಚ್.ಕೆ ಎಂಬುವರ ಕೈಯಲ್ಲಿ ಕಂಪ್ಯೂಟರ್ ನಲ್ಲಿ ಟೈಪ್ ಮಾಡಿಸಿ ಟೈಪ್ ಮಾಡಿದ್ದನ್ನು ನನಗೆ ಓದಿ ಹೇಳಿ ಪ್ರಿಂಟ್ ತೆಗೆದುಕೊಂಡಿರುತ್ತಾರೆ ಎಂದು ನಾಗಭೂಷಣ್ ತಿಳಿಸಿದ್ದಾರೆ.